ಕೇರಳ ನರ್ಸ್‌ ನಿಮಿಷಾ ಪ್ರಿಯ ಗಲ್ಲುಶಿಕ್ಷೆ ರದ್ದು

ಕೇರಳ : ಯೆಮೆನ್‌ ಜೈಲಿನಲ್ಲಿ ಬಂಧನಕ್ಕೆ ಒಳಗಾಗಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯಾ (Nimisha Priya) ಅವರ ಗಲ್ಲು ಶಿಕ್ಷೆಯನ್ನು ರದ್ದುಪಡಿಸಲಾಗಿದೆ. ಈ ಕುರಿತು ಧರ್ಮ ಬೋಧಕ ಕೆ.ಎ.ಪಾಲ್‌ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಜೈಲು ಅಧಿಕಾರಿಗಳು ಈ ಹಿಂದೆ ಜುಲೈ 16 ರಂದು ಮರಣದಂಡನೆ ಘೋಷಿಸಿದ್ದರು. ಇದರ ಬೆನ್ನಲ್ಲೇ ನಿಮಿಷಾ ಪ್ರಿಯ ಪೋಷಕರು ಬ್ಲಡ್‌ ಮನಿ ಸಂಗ್ರಹಕ್ಕಾಗಿ ಹರಸಾಹಸ ಪಟ್ಟಿದ್ದರು.

ಭಾರತ ಸರಕಾರ ಕೂಡ ಸಕಾರಾತ್ಮಕವಾಗಿ ಸ್ಪಂಧಿಸಿತ್ತು. ಭಾರತ ಸರಕಾರ ಯೆಮೆನ್ ಅಧಿಕಾರಿಗಳ ಜೊತೆಗೆ ಸತತ ಮಾತುಕತೆ ನಡೆಸಿದೆ.

ಮೃತನ ಕುಟುಂಬಕ್ಕೆ ಬ್ಲಡ್ ಮನಿ ನೀಡುವ ಮೂಲಕ ಶಿಕ್ಷೆಯಿಂದ ಪಾರಾಗಲು ಶರಿಯಾ ಕಾನೂನಿನಲ್ಲಿ ಅವಕಾಶವಿದೆ.

ಆದರೆ ಸಂತ್ರಸ್ತನ ಕುಟುಂಬವು ಬ್ಲಡ್ ಮನಿ ಸ್ವೀಕರಿಸಲು ಅಥವಾ ಕ್ಷಮಿಸಲು ಒಪ್ಪಿಲ್ಲ ಎಂದು ವರದಿ ಆಗಿತ್ತು.ಅಲ್ಲದೇ ನಿಮಿಷಾ ಪ್ರಿಯಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಡ ಹೇರಿದ್ದರು.

ಇದನ್ನೂ ಓದಿ: ಕೇರಳ ನರ್ಸ್‌ ನಿಮಿಷಾ ಪ್ರಿಯಾಗೆ ಮರಣ*ದಂಡನೆ ಫಿಕ್ಸ್‌..! ಕೇಂದ್ರ ಸುಪ್ರೀಂ ಕೋರ್ಟ್‌ಗೆ ಹೇಳಿದೇನು ?

ಆದರೆ ಕೆ.ಎ.ಪಾಲ್‌ ನಿಮಿಷಾ ಪ್ರಿಯಗೆ ಗಲ್ಲುಶಿಕ್ಷೆ ರದ್ದತಿಯ ಕುರಿತು ನೀಡಿರುವ ಹೇಳಿಕೆ ಹೊಸ ಭರವಸೆಯನ್ನು ಮೂಡಿಸಿದೆ. ಯೆಮೆನ್‌ನಲ್ಲಿ ಸದ್ಯ ಅಸ್ಥಿರ ಪರಿಸ್ಥಿತಿ ಇದ್ದು, ರಾಜತಾಂತ್ರಿಕ ಸಂಬಂಧಗಳ ಕೊರತೆ ಎದ್ದು ಕಾಣುತ್ತಿದೆ.

ಭಾರತ ಸರಕಾರ ನಿಮಿಷಾ ಪ್ರಿಯರನ್ನು ಗಲ್ಲುಶಿಕ್ಷೆಯಿಂದ ಪಾರು ಮಾಡಲು ಸಕಲ ರೀತಿಯಲ್ಲಿಯೂ ಪ್ರಯತ್ನಗಳನ್ನು ಮಾಡುತ್ತಿದೆ.

Nimisha Priya : ನಿಮಿಷಾ ಪ್ರಿಯ ಗಲ್ಲು ಶಿಕ್ಷೆ ರದ್ದಾಗಿದ್ದು ಹೇಗೆ ?

ಭಾರತ ಸರ್ಕಾರವು ಯೆಮೆನ್ ಅಧಿಕಾರಿಗಳೊಂದಿಗೆ, ನಿರ್ದಿಷ್ಟವಾಗಿ ಹೌತಿ (Houthi) ಬಂಡುಕೋರರ ನಿಯಂತ್ರಣದಲ್ಲಿರುವ ಸನಾ (Sana’a) ದಲ್ಲಿರುವ ಸ್ಥಳೀಯ ಅಧಿಕಾರಿಗಳೊಂದಿಗೆ ತೀವ್ರ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸುತ್ತಿದೆ.

ಭಾರತಕ್ಕೆ ಯೆಮೆನ್‌ನಲ್ಲಿ ಔಪಚಾರಿಕ ರಾಜತಾಂತ್ರಿಕ ಅಸ್ತಿತ್ವವಿಲ್ಲದಿದ್ದರೂ, ಸೌದಿ ಅರೇಬಿಯಾದಲ್ಲಿರುವ ಭಾರತೀಯ ಮಿಷನ್ ಮೂಲಕ ಈ ಮಾತುಕತೆಗಳನ್ನು ನಡೆಸಲಾಗುತ್ತಿದೆ.

ನಿಮಿಷಾ ಪ್ರಿಯಾ ಅವರ ಕುಟುಂಬಕ್ಕೆ ಸಂತ್ರಸ್ತನ ಕುಟುಂಬದೊಂದಿಗೆ “ಬ್ಲಡ್ ಮನಿ” ಬಗ್ಗೆ ಮಾತುಕತೆ ನಡೆಸಲು ಹೆಚ್ಚಿನ ಸಮಯವನ್ನು ಪಡೆಯುವುದು ಈ ಪ್ರಯತ್ನಗಳ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ : ಕೇರಳ ನರ್ಸ್‌ ನಿಮಿಷಾ ಪ್ರಿಯ ಗಲ್ಲುಶಿಕ್ಷೆ ಮುಂದೂಡಿಕೆ : ಮುಂದೇನಾಗುತ್ತೆ ಪ್ರಕರಣ ?

ಇನ್ನೊಂದೆಡೆಯಲ್ಲಿ ಧಾರ್ಮಿಕ ಮುಖಂಡ ಮುಫ್ತಿ ಶೇಖ್ ಅಬೂಬಕರ್ ಅಹ್ಮದ್ ಕಾಂಥಪುರಂ ಯೆಮೆನ್‌ನ ಪ್ರಮುಖ ಧಾರ್ಮಿಕ ವಿದ್ವಾಂಸ ಶೇಖ್ ಉಮರ್ ಬಿನ್ ಹಫೀಜ್ ಅವರನ್ನು ಸಂಪರ್ಕಿಸಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದರು.

ಇಸ್ಲಾಮಿಕ್ ಶರಿಯಾ ಕಾನೂನಿನಲ್ಲಿ, ಕೊಲೆ ಪ್ರಕರಣಗಳಲ್ಲಿ ಮರಣದಂಡನೆಯನ್ನು ತಪ್ಪಿಸಲು ಸಂತ್ರಸ್ತನ ಕುಟುಂಬವು ‘ದಿಯಾ’ (ರಕ್ತ ಹಣ) ಸ್ವೀಕರಿಸಿ ಕ್ಷಮಾಧಾನಕ್ಕೆ ಅವಕಾಶವಿದೆ.

ಈ ಧಾರ್ಮಿಕ ನಾಯಕರು ಸಂತ್ರಸ್ತನ ಕುಟುಂಬಕ್ಕೆ ದಿಯಾವನ್ನು ಸ್ವೀಕರಿಸಲು ಮನವೊಲಿಸಲು ಪ್ರಯತ್ನಿಸಿದ್ದಾರೆ.

ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಕುಮಾರಿ ಖುದ್ದು ಯೆಮೆನ್‌ಗೆ ತೆರಳಿದ್ದರು. ಸಂತ್ರಸ್ತ ತಲಾಲ್‌ ಕುಟುಂಬದ ಜೊತೆಗೆ ಮುಖತಃ ಮಾತುಕತೆ ನಡೆಸಿದ್ದರು. ಬ್ಲಡ್‌ ಮನವಿ ಸ್ವೀಕಾರ ಮಾಡುವಂತೆ ಮಾತುಕತೆ ನಡೆಸಿದ್ದಾರೆ.

ಪ್ರಕರಣದಲ್ಲಿ ನಿಮಿಷಾ ಪ್ರಿಯಾ ಅವರು ಅನುಭವಿಸಿದ ಮಾನಸಿಕ ಹಿಂಸೆ ಮತ್ತು ಪರಿಸ್ಥಿತಿಗಳನ್ನು ಪರಿಗಣಿಸಿ, ಮಾನವೀಯ ಆಧಾರದ ಮೇಲೆ ಅವರಿಗೆ ಕ್ಷಮಾದಾನ ನೀಡುವಂತೆ ಮನವಿಗಳನ್ನು ಮಾಡಲಾಗಿದೆ.

ಈ ರಾಜತಾಂತ್ರಿಕ ಮತ್ತು ಧಾರ್ಮಿಕ ಪ್ರಯತ್ನಗಳು ಜುಲೈ 16, 2025 ರಂದು ನಿಗದಿಪಡಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಮುಂದೂಡಲು ಯೆಮೆನ್ ಅಧಿಕಾರಿಗಳನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿವೆ.

ಆದರೆ, ಸಂತ್ರಸ್ತನ ಕುಟುಂಬವು ಬ್ಲಡ್ ಮನಿ ಸ್ವೀಕರಿಸಲು ನಿರಾಕರಿಸಿದೆ ಅನ್ನುವ ಸುದ್ದಿಗಳು ಹರಿದಾಡುತ್ತಿದೆ. ಒಂದೊಮ್ಮೆ ಸಂತ್ರಸ್ತನ ಕುಟುಂಬ ಬ್ಲಡ್‌ ಮನಿ ಸ್ವೀಕಾರ ಮಾಡದೇ ಇದ್ರೆ ನಿಮಿಷಾ ಪ್ರಿಯಾಗೆ ಸಂಕಷ್ಟ ತರಲಿದೆ.

Nimisha Priya Death Sentence Cancelled Kerala Nurse Yemen Ka Paul in Kannada

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories