ಮುಸ್ಲಿಂ ರಾಷ್ಟ್ರದ ಮೇಲೆ ಪರಮಾಣು ಬಾಂಬ್ ಹಾಕುತ್ತಾ ಪಾಕ್!? ಇರಾನ್-ಅಮೇರಿಕ ಯುದ್ಧಕ್ಕೆ ಭಾರೀ ಟ್ವಿಸ್ಟ್
"ಸೌದಿ ಅರೇಬಿಯಾದ ಮೇಲೆ ದಾಳಿ ಮಾಡದಂತೆ ನಾವು ಇರಾನ್‌ಗೆ ಎಚ್ಚರಿಕೆ ನೀಡಿದ್ದೇವೆ, ಏಕೆಂದರೆ ನಮ್ಮ ನಡುವೆ ರಕ್ಷಣಾ ಒಪ್ಪಂದವಿದೆ," ಎಂದು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
Iran vs Israel-US War | Pakistan-Saudi Arabia Deal: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷ ಈಗ ಮತ್ತೊಂದು ಸ್ಫೋಟಕ ತಿರುವು ಪಡೆದುಕೊಳ್ಳುವ ಮುನ್ಸೂಚನೆ ನೀಡುತ್ತಿದೆ.
ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನ, ಈ ಯುದ್ಧದ ಅಖಾಡಕ್ಕೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪ್ರಮುಖ ಕಾರಣ, ಸೆಪ್ಟೆಂಬರ್ 2025 ರಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ ಸಹಿಯಾದ ಒಂದು ವಿವಾದಾತ್ಮಕ ರಕ್ಷಣಾ ಒಪ್ಪಂದ.
ಏನಿದು ‘ಪರಮಾಣು ಛತ್ರಿ’ (Nuclear Umbrella) ವಿವಾದ ?
ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಸ್ಟ್ರಾಟಜಿಕ್ ಮ್ಯೂಚುವಲ್ ಡಿಫೆನ್ಸ್ ಅಗ್ರಿಮೆಂಟ್ (SMDA) ಪ್ರಕಾರ, ಒಂದು ದೇಶದ ಮೇಲೆ ದಾಳಿಯಾದರೆ ಅದನ್ನು ಎರಡೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಇತ್ತೀಚೆಗೆ ಸೌದಿ ಅರೇಬಿಯಾದ ಅರಾಮ್ಕೊ ತೈಲ ಶುದ್ಧೀಕರಣ ಘಟಕದ ಮೇಲೆ ಇರಾನ್‌ನ ಡ್ರೋನ್ ದಾಳಿ ನಡೆದ ಬೆನ್ನಲ್ಲೇ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ನೀಡಿದ ಹೇಳಿಕೆ ಸಂಚಲನ ಮೂಡಿಸಿದೆ.
“ಸೌದಿ ಅರೇಬಿಯಾದ ಮೇಲೆ ದಾಳಿ ಮಾಡದಂತೆ ನಾವು ಇರಾನ್‌ಗೆ ಎಚ್ಚರಿಕೆ ನೀಡಿದ್ದೇವೆ, ಏಕೆಂದರೆ ನಮ್ಮ ನಡುವೆ ರಕ್ಷಣಾ ಒಪ್ಪಂದವಿದೆ,” ಎಂದು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ವಿಶ್ವದ ತಜ್ಞರ ಆತಂಕವೆಂದರೆ, ಈ ಒಪ್ಪಂದದ ಮೂಲಕ ಪಾಕಿಸ್ತಾನವು ತನ್ನ ಪರಮಾಣು ಶಕ್ತಿಯ ರಕ್ಷಣೆಯನ್ನು ಸೌದಿ ಅರೇಬಿಯಾಕ್ಕೆ ವಿಸ್ತರಿಸಿದೆಯೇ ? ಎಂಬುದು.
ಒಂದು ವೇಳೆ ಇರಾನ್ ಅಥವಾ ಇನ್ಯಾವುದೇ ದೇಶ ಸೌದಿಯ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಿದರೆ, ಪಾಕಿಸ್ತಾನ ತನ್ನ ಪರಮಾಣು ಅಸ್ತ್ರಗಳನ್ನು ಬಳಸಲಿದೆಯೇ ಎಂಬ ಪ್ರಶ್ನೆ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಯುದ್ಧದ ಭೀತಿ ಮತ್ತು ಜಾಗತಿಕ ಸಮೀಕರಣಗಳು
ಸೌದಿಯ ಅನಿವಾರ್ಯತೆ: ಸೆಪ್ಟೆಂಬರ್ 2025 ರಲ್ಲಿ ಇಸ್ರೇಲ್ ಕತಾರ್ ಮೇಲೆ ನಡೆಸಿದ ವೈಮಾನಿಕ ದಾಳಿಯ ನಂತರ, ಅಮೆರಿಕ ತನ್ನ ರಕ್ಷಣೆ ಮಾಡಲಾರದು ಎಂಬ ಆತಂಕ ಸೌದಿ ಅರೇಬಿಯಾವನ್ನು ಕಾಡಿತ್ತು. ಈ ಕಾರಣಕ್ಕಾಗಿಯೇ ಸೌದಿ, ಪಾಕಿಸ್ತಾನದಂತಹ ಪರಮಾಣು ಶಕ್ತಿ ರಾಷ್ಟ್ರದ ಮೊರೆ ಹೋಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಂತರಾಷ್ಟ್ರೀಯ ಆತಂಕ: ಈ ಒಪ್ಪಂದವು ಅಂತರಾಷ್ಟ್ರೀಯ ಪರಮಾಣು ಪ್ರಸರಣ ರಹಿತ ಒಪ್ಪಂದದ (NPT) ನಿಯಮಗಳನ್ನು ಗಾಳಿಗೆ ತೂರುತ್ತಿದೆ ಎಂದು ಲಂಡನ್ ಮೂಲದ ಥಿಂಕ್ ಟ್ಯಾಂಕ್‌ಗಳು ಎಚ್ಚರಿಸಿವೆ.
ಇದನ್ನೂ ಓದಿ : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಅಲರ್ಟ್ : ಮಾರ್ಚ್ ತಿಂಗಳ ₹2,000 ಹಣ ನಿಮ್ಮ ಖಾತೆಗೆ ಬರಬೇಕಾ? ಈ ಒಂದು ಕೆಲಸ ಮಿಸ್ ಮಾಡ್ಬೇಡಿ !
Iran vs Israel-US War :ಭಾರತದ ಮೇಲೆ ಏನು ಪರಿಣಾಮ?
ಆರ್ಥಿಕ ತಜ್ಞರ ಪ್ರಕಾರ, ಒಂದು ವೇಳೆ ಹಾರ್ಮುಜ್ ಜಲಸಂಧಿಯ ಹಾದಿಯಲ್ಲಿ ಸಂಘರ್ಷ ಉಲ್ಬಣಿಸಿದರೆ ಅಥವಾ ಪಾಕಿಸ್ತಾನ ಈ ಯುದ್ಧದಲ್ಲಿ ನೇರವಾಗಿ ಭಾಗಿಯಾದರೆ, ಅದರ ನೇರ ಪರಿಣಾಮ ಭಾರತದ ಮೇಲೂ ಆಗುವ ಸಾಧ್ಯತೆಯಿದೆ. ತೈಲ ಬೆಲೆ ಏರಿಕೆ ಮತ್ತು ಭದ್ರತಾ ಸವಾಲುಗಳು ಎದುರಾಗಬಹುದು.
ಸದ್ಯಕ್ಕೆ ಪಾಕಿಸ್ತಾನವು ಸೌದಿ ಅರೇಬಿಯಾ ಪರವಾಗಿ ರಾಜತಾಂತ್ರಿಕ ಬೆಂಬಲ ನೀಡುತ್ತಿದೆಯಾದರೂ, ಯುದ್ಧ ಭೂಮಿಗೆ ಇಳಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಮಧ್ಯಪ್ರಾಚ್ಯದ ಈ ಕಿಚ್ಚು ಇಡೀ ಏಷ್ಯಾದ ಶಾಂತಿಗೆ ಭಂಗ ತರುವ ಲಕ್ಷಣಗಳು ಕಾಣಿಸುತ್ತಿವೆ.



