ರೈತರು, ವಿತರಕರಿಗಾಗಿ ಸಹಾಯವಾಣಿ ಆರಂಭಿಸಿದ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್
ಬೆಂಗಳೂರು : ರೈತರು, ವಿತರಕರ ಕುಂದು ಕೊರತೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಬಮೂಲ್ ಸಂಸ್ಥೆ (BAMUL) ಸಹಾಯವಾಣಿಯನ್ನು ಆರಂಭಿಸಿದ್ದು, ಅಧ್ಯಕ್ಷರಾದ ಅಧ್ಯಕ್ಷ ಡಿ.ಕೆ. ಸುರೇಶ್ ( DK Suresh) ಅವರು ಮೊದಲ ಕರೆ ಸ್ವೀಕರಿಸಿ ಚಾಲನೆ ನೀಡಿದರು.
ಡಿಕೆ ಸುರೇಶ್ ಅವರು ಬೆಂಗಳೂರಿನ ಡೈರಿ ಸರ್ಕಲ್ ಬಳಿಯಲ್ಲಿ ಇರು ಬಮೂಲ್ ಕಚೇರಿಯಲ್ಲಿ ಸುರೇಶ್ ಅವರು ಶುಕ್ರವಾರ ಸಹಾಯವಾಣಿಗೆ ಚಾಲನೆ ನೀಡಿ ರೈತರು ಹಾಗೂ ವಿತರಕರ ಕರೆ ಸ್ವೀಕರಿಸಿ ಮಾತನಾಡಿದರು.
ವಿತರಕರು ಮಾಡಿದ ಕರೆ ಸ್ವೀಕರಿಸಿ ಅವರ ಅಹವಾಲು ಸ್ವೀಕರಿಸಿ ಅದಕ್ಕೆ ಸ್ಪಂದಿಸಿದರು. ಸಾಮಾನ್ಯವಾಗಿ 5 ಗಂಟೆಯ ಒಳಗಾಗಿ ನಿಮಗೆ ಹಾಲು ಪೂರೈಸಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ ಮುಂದಿನ ಒಂದು ತಿಂಗಳ ಒಳಗಾಗಿ ನಿಮಗೆ ಸರಿಯಾದ ಸಮಯಕ್ಕೆ ಹಾಲು ತಲುಪಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ : 50ನೇ ವರ್ಷದ ಹುಟ್ಟುಹಬ್ಬಕ್ಕೆ 50 ಕಾರ್ಯಕ್ರಮ, ಶಾಸಕ ಸುನಿಲ್ ಕುಮಾರ್ ವಿಭಿನ್ನ ಕಾರ್ಯ
“ನೀವು ನಿತ್ಯ 10 ಲೀಟರ್ ಹಾಲು ಮಾರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿ. ನಿಮಗೆ ಅಗತ್ಯವಿರುವ ಪ್ರಮಾಣದ ಹಾಲು ಹಾಗೂ ಇತರೆ ಉತ್ಪನ್ನಗಳನ್ನು ನಾವು ಪೂರೈಕೆ ಮಾಡುತ್ತೇವೆ.
ಹಾಲು ಮಾರಾಟದ ಕಡೆಗೆ ಕೇವಲ ಗಮನ ಇರದೇ, ನಂದಿನಿ ತುಪ್ಪ, ಸಿಹಿ ತಿನಿಸುಗಳನ್ನು ಮಾರಾಟ ಮಾಡುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಿಮಗೆ ಸ್ವಾತಂತ್ರ್ಯ ದಿನಾಚಾರಣೆ ಶುಭಾಶಯಗಳು ಎಂದು ತಿಳಿಸಿದರು.
ಇದನ್ನೂ ಓದಿ : ಧರ್ಮಸ್ಥಳದಲ್ಲಿ ಎಸ್‌ಐಟಿ ರಚನೆ ಮಾಡಿದ್ಯಾಕೆ ? ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಹೇಳಿದ್ದೇನು ?
Bamul President DK Suresh launches Helpline for formers in Kannada News



