caste survey: ಜಾತಿ ಸಮೀಕ್ಷೆಯಿಂದ ಸುಧಾಮೂರ್ತಿ ದೂರ : ಹಿಂದುಳಿದವರ ಕಾಳಜಿ ತಿಳಿಯುತ್ತೆ ಎಂದ ಸಚಿವ ತಂಗಡಗಿ

ಬೆಂಗಳೂರು: caste survey: ಸುಧಾಮೂರ್ತಿ(Sudha Murthy) ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದಿರುವುದು ನೋಡಿದರೆ ಹಿಂದುಳಿದ ವರ್ಗಗಳ ಬಗ್ಗೆ ಅವರ ಕಾಳಜಿ ಗೊತ್ತಾಗುತ್ತದೆ ಎಂದು ಸಚಿವ ಶಿವರಾಜ್ ತಂಗಡಗಿ ಅಸಮಾಧಾನ ಹೊರ ಹಾಕಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ, ಸುಧಾಮೂರ್ತಿ, ತೇಜಸ್ವಿ ಸೂರ್ಯ ಹೇಳೋದು ನೋಡಿದರೆ, ಅವರ ಹಿಂದುಳಿದ ವರ್ಗಗಳ ಬಗ್ಗೆ ಎಷ್ಟು ಕಾಳಜಿ ಎಂಬುದು ಗೊತ್ತಾಗುತ್ತಿದೆ. ಸುಧಾಮೂರ್ತಿ ಬಗ್ಗೆ ನನಗೆ ಬಹಳ‌ ಗೌರವವಿದೆ. ಇವರ ಮನಸ್ಥಿತಿ ನೋಡಿದರೆ ನನಗೆ ಬಹಳ ಬೇಸರ ಆಗುತ್ತದೆ. ನೀವು ಹಿಂದುಳಿದಿಲ್ಲ ಸರಿ. ಆದರೆ ಮಾಹಿತಿಯನ್ನ ಕೊಡಿ. ನಿಮ್ಮ ವೈಯಕ್ತಿಕ ವಿಚಾರ ಕೇಳುತ್ತಿಲ್ಲ. ಕೊಡಲೇಬೇಕು ಅಂತ ನಾವು ಕೇಳಲ್ಲ ಎಂದರು.

ಒಂದು ಸ್ಥಾನಮಾನ ಇರುವವರು, ರಾಜ್ಯಸಭೆ, ಲೋಕಸಭೆ ಸದಸ್ಯರಾಗಿ ಅವರ ಮನಸ್ಥಿತಿ ಅವರ ಹೇಳಿಕೆಯಿಂದ ಗೊತ್ತಾಗುತ್ತದೆ‌. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತದೆ. ಆಗಲೂ ಇವರು ಹಾಗೆಯೇ ಹೇಳ್ತಾರಾ?. ಅವರು ಒಂದು ನಿರ್ದಿಷ್ಟ ಮಾಹಿತಿ ಕೊಟ್ಟಂತೆ ಕಾಣ್ತಿದೆ.

ನಾವು ಅವರ ವೈಯುಕ್ತಿಕ ವಿವರ ಕೇಳ್ತಿಲ್ಲ. ಅವರ ಬಂಗಾರ, ಬೆಳ್ಳಿ ಬಗ್ಗೆ ಕೇಳ್ತಿಲ್ಲ. ತುಳಿತಕ್ಕೊಳಗಾದವರಿಗೆ ಮನೆ ಇಲ್ಲ. ಬ್ರಾಹ್ಮಣ, ಲಿಂಗಾಯತ ಸಮುದಾಯದಲ್ಲೂ ಬಡವರಿದ್ದಾರೆ. ಅವರ ಮಾಹಿತಿ ಗೊತ್ತಾದರೆ ಸೌಲಭ್ಯ ನೀಡಬಹುದು. ಅದಕ್ಕೆ ನಾವು ಸಮೀಕ್ಷೆ ಮಾಡ್ತಿರೋದು ಎಂದರು.‌

Also Read: ಆರ್​ಎಸ್​ಎಸ್​ ಹೆಸರು ಹೇಳದೆ ಕಾರ್ಯಚಟುವಟಿಕೆಗೆ ನಿಷೇಧ ಹೇರಿದ ರಾಜ್ಯ ಸರ್ಕಾರ

ಕೇಂದ್ರದ ಗಣತಿಗೆ ಏನು ಹೇಳುತ್ತಾರೆ?:

ಸಚಿವ ಸಂತೋಷ್ ಲಾಡ್ ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸುಧಾಮೂರ್ತಿ ಹೇಳಿಕೆ‌ಯನ್ನು ನಾನು ಗೌರವಿಸ್ತೇನೆ. ಸುಧಾಮೂರ್ತಿ ಭಾಗವಹಿಸಲ್ಲ ಅಂದ್ರೆ ಗೌರವಿಸ್ತೇನೆ. ಅವರು ಸಾಹುಕಾರರಾಗಿದ್ದಾರೆ. 90% ಆಗಲೇ ಸರ್ವೆ ಆಗಿದೆ. ಅವರ ಬಗ್ಗೆ ನಮಗೆ ಬಹಳ‌ ಗೌರವ ಇದೆ.

ಆರ್ಥಿಕ‌ ದುರ್ಬಲ ವರ್ಗದವರಿಗೆ 10% ಮೀಸಲಾತಿ ಕೊಟ್ಟರು. ಆಗ ಸುಧಾಮೂರ್ತಿಯವರು ಯಾಕೆ ಮಾತನಾಡಲಿಲ್ಲ?. ಕೇಂದ್ರದ ಗಣತಿಗೆ ಏನು ಹೇಳ್ತಾರೆ. ಅವರು ಸಕ್ಸಸ್ ಫುಲ್ ಬ್ಯುಸಿನೆಸ್ ಮ್ಯಾನ್ ಎಂದು ಅಸಮಾಧಾನ ಹೊರಹಾಕಿದರು.

Also Read: RSS Ban : ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಬ್ಬಂದಿ ಅಮಾನತು : ಸಚಿವ ಪ್ರಿಯಾಂಕ ಖರ್ಗೆ

ಸುಧಾಮೂರ್ತಿ ಮಾಡಿದ್ದು ತಪ್ಪು:

ಇದೇ ವೇಳೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, ಸುಧಾಮೂರ್ತಿ ಅವರು ಮಾಡಿದ್ದು ತಪ್ಪು. ಅವರು ಪಾಲ್ಗೊಂಡಿದ್ದರೆ ಚೆನ್ನಾಗಿತ್ತು. ಅವರು ಹಿಂಬರಹ ಹಾಗೆ ಕೊಟ್ಟಿರುವುದು ತಪ್ಪು. ಸುಧಾಮೂರ್ತಿಯವರನ್ನು ಪ್ರೇರಣೆ ರೀತಿಯಲ್ಲಿ ನೋಡುತ್ತಾರೆ. ಮುಂದೆ ಕೇಂದ್ರ ಜಾತಿ ಗಣತಿ ಮಾಡುತ್ತಾರೆ‌. ಆವಾಗಲೂ ಈ ರೀತಿ ಹಿಂಬರಹ ಕೊಡುತ್ತಾರಾ?. ನೀವು ಅದನ್ನು ಹೇಳುವ ರೀತಿಯಲ್ಲಿ ಹೇಳಬೇಕು ಎಂದು ಆಕ್ಷೇಪಿಸಿದರು.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories