ಸತೀಶ್ ಗೆ ಉತ್ತರಾಧಿಕಾರಿ ಪಟ್ಟ : ಸಿಎಂ ಆಪ್ತರನ್ನು ಕೆರಳಿಸಿದ ಯತೀಂದ್ರ ಹೇಳಿಕೆ
ಬೆಂಗಳೂರು : CM Seat: ಸೈದ್ಧಾಂತಿಕ ಹಾಗೂ ತಾತ್ವಿಕವಾಗಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಸಿಎಂ ಸಿದ್ದರಾಮಯ್ಯನವರ ಉತ್ತರಾಧಿಕಾರಿಯಾಗುವ ಅರ್ಹತೆ ಇದೆ ಎಂದು ಎಂಎಲ್ ಸಿ ಯತೀಂದ್ರ ನೀಡಿರುವ ಹೇಳಿಕೆ ಈಗ ಸಿದ್ದರಾಮಯ್ಯನವರ ಆಪ್ತವಲಯದಲ್ಲೇ ಬಿರುಕು ಮೂಡಿಸಿದೆ.
ಯತೀಂದ್ರ ಹೇಳಿಕೆಯಿಂದ ಸಿದ್ದರಾಮಯ್ಯ ಆಪ್ತವಲಯದಲ್ಲಿದ್ದ ಡಾ.ಎಚ್.ಸಿ.ಮಹಾದೇವಪ್ಪ, ಕೆ.ಎನ್.ರಾಜಣ್ಣ, ಡಾ.ಜಿ.ಪರಮೇಶ್ವರ, ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆಯವರಲ್ಲಿ ಬೇಸರ ಮೂಡಿಸಿದೆ ಎಂದು ವ್ಯಾಖ್ಯಾನಿಸಲಾಗಿತ್ತಿದೆ.
Also Read: ರಾಜ್ಯದಲ್ಲಿ 13 ಕಂಪನಿಗಳಿಂದ ₹27 ಸಾವಿರ ಕೋಟಿ ಹೂಡಿಕೆಗೆ ಅಸ್ತು: ಎಂ ಬಿ ಪಾಟೀಲ
ಅಹಿಂದ ನಾಯಕರಾದ ಸಿದ್ದರಾಮಯ್ಯನವರು ತಮ್ಮ ನಂತರ ಯಾರು ? ಎಂಬ ಪ್ರಶ್ನೆ ಬಂದಾಗ ತಮ್ಮ ಹೆಸರೇ ಮುನ್ನೆಲೆಗೆ ಬರಬಹುದು ಎಂಬ ವಿಶ್ವಾಸವನ್ನು ಡಾ.ಎಚ್.ಸಿ.ಮಹಾದೇವಪ್ಪ ಹೊಂದಿದ್ದರು.
ಸಿದ್ದರಾಮಯ್ಯ ಅವರ ದೀರ್ಘಕಾಲದ ಸಹಪಯಣಿಗ ತಾನೆಂಬ ಆಪ್ತತೆಯೂ ಇದಕ್ಕೆ ಕಾರಣವಾಗಿತ್ತು. ಆದರೆ ಯತೀಂದ್ರ ಅವರು ಅಹಿಂದ ಸಿದ್ಧಾಂತದ ಉತ್ತರಾಧಿಕಾರಿ ಪಟ್ಟವನ್ನು ಸಾರಾ ಸಗಟಾಗಿ ಸತೀಶ್ ಜಾರಕಿಹೊಳಿಯವರಿಗೆ ದಾಟಿಸಿದ್ದು ಮಹದೇವಪ್ಪ ಅವರಿಗೆ ಅಸಂತೋಷ ಸೃಷ್ಟಿಸಿದೆ ಎನ್ನಲಾಗುತ್ತಿದೆ.
ಈ ಕಾರಣಕ್ಕೆಗಿಯೇ ಅವರು ಕಾಂಗ್ರೆಸ್ ಗೆ ಯಾರೂ ಅನಿವಾರ್ಯವಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಣಯಿಸುತ್ತದೆ ಎಂದು ಬೆಂಗಳೂರಿನಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
Also Read: Mysore: ಐಷಾರಾಮಿ ಬಂಗಲೆಯಲ್ಲಿ ಹೆಣ್ಣು ಭ್ರೂಣ ಲಿಂಗ ಹತ್ಯೆ : ಆರೋಪಿಗಳು ಅಂದರ್
ಅದೇ ರೀತಿ ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧ ಬೆಳವಣಿಗೆ ಬಳಿಕ ದಲಿತ, ಅಲ್ಪಸಂಖ್ಯಾತ ಸಮುದಾಯದಲ್ಲಿ ಸ್ಟ್ರೈಕ್ ರೇಟ್ ಹೆಚ್ಚಿಸಿಕೊಂಡಿದ್ದ ಪ್ರಿಯಾಂಕ ಖರ್ಗೆಯವರಿಗೂ ಇದರಿಂದ ಭ್ರಮನಿರಸನವಾಗಿದೆ.
ಹೀಗಾಗಿ ನವೆಂಬರ್ ಕ್ರಾಂತಿಗೆ ಮುನ್ನವೇ ಸಿಎಂ ಸಿದ್ದರಾಮಯ್ಯ ನವರ ಅಡಿಪಾತಳಿಯಲ್ಲೂ ಈಗ ಸಣ್ಣ ಪಲ್ಲಟ ಕಾಣಿಸಿಕೊಂಡಿದೆ.



