ಧರ್ಮಸ್ಥಳ ಕೇಸ್‌ : ಮಹೇಶ್ ತಿಮರೋಡಿ ಬಂಧನಕ್ಕೆ ಸಚಿವ ಪರಮೇಶ್ವರ್‌ ಸೂಚನೆ

Dharmasthala SIT case : ಬೆಂಗಳೂರು : ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆಯ ವಿಚಾರ ವಿಧಾನಸಭಾ ಕಲಾಪದಲ್ಲಿ ಕೋಲಾಹಲಕ್ಕೆ ಸೃಷ್ಟಿಯಾಗಿದೆ. ಸೌಜನ್ಯಪರ ಹೋರಾಟಗಾರ ಮಹೇಶ್‌ ತಿಮರೋಡಿ ವಿರುದ್ದ ಕ್ರಮಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪೊಲೀಸರಿಗೆ ಸೂಚಿಸಿದ್ದಾರೆ.

ಇಂದಿನ ಕಲಾಪದಲ್ಲಿ ಶಾಸಕ ವಿಶ್ವನಾಥ್‌ ಅವರು ತಮ್ಮ ವಿರುದ್ದ ಮಹೇಶ್‌ ತಿಮರೋಡಿ ಹಾಗೂ ಲಾಯರ್‌ ಜಗದೀಶ್‌ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಇಬ್ಬರ ವಿರುದ್ದ ಹಕ್ಕುಚ್ಯುತಿ ಮಂಡನೆ ಮಾಡುವಂತೆ ಸ್ಪೀಕರ್‌ ಬಳಿ ಮನವಿ ಮಾಡಿದ್ದಾರೆ.

ವಿಪಕ್ಷ ನಾಯಕ ಆರ್‌.ಅಶೋಕ್‌ ಕೂಡ ವಿಶ್ವನಾಥ್‌ ಅವರ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ. ಲಾಯರ್‌ ಜಗದೀಶ್‌ ವಿಪಕ್ಷ ನಾಯಕರು, ಸರಕಾರ, ಮುಖ್ಯಮಂತ್ರಿಗಳ ವಿರುದ್ದವೂ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸದನಕ್ಕೆ ತಿಳಿಸಿದ್ದರು.

ಇದನ್ನೂ ಓದಿ : ಕೋಟ : ಕೆಸ್ರು ಓಕ್ಳಿ – ಜನಮನ ಗೆದ್ದ ಕೆಸರುಗದ್ದೆ ಕ್ರೀಡಾಕೂಟ

ಇದೇ ವೇಳೆ ಕಾರ್ಕಳ ಶಾಸಕರದ ವಿ.ಸುನಿಲ್‌ ಕುಮಾರ್‌ ಅವರು ಮಾತನಾಡಿ, ವ್ಯಕ್ತಿಯೋರ್ವ ಮುಖ್ಯಮಂತ್ರಿಗಳು 28 ಕೊಲೆ ಮಾಡಿದ್ದಾರೆ ಎಂಬ ಆರೋಪ ಮಾಡ್ತಿದ್ದಾರೆ. ಆದರೂ ಕೂಡ ಸರಕಾರ ಆ ವ್ಯಕ್ತಿಯ ವಿರುದ್ದ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಈ ಕುರಿತು ಮಾತನಾಡಿ, ಮಹೇಶ್‌ ತಿಮರೋಡಿಯ ವಿರುದ್ದ ಕ್ರಮಕೈಗೊಳ್ಳುವಂತೆ ಈಗಾಗಲೇ ಪೊಲೀಸರಿಗೆ ಸೂಚನೆಯನ್ನು ನೀಡಿದ್ದೇವೆ. ಸರಕಾರ ಯಾವುದೇ ಕಾರಣಕ್ಕೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಸೂಚಿಸಿದ್ದಾರೆ

ಇದನ್ನೂ ಓದಿ : ಧರ್ಮಸ್ಥಳ ಬುರುಡೆ ರಹಸ್ಯ : ಇಂದು ಸರಕಾರಕ್ಕೆ ಎಸ್‌ಐಟಿ ವರದಿ ಸಲ್ಲಿಕೆ

Dharmasthala SIT case: Parameshwar notice for action against Mahesh Timarodi

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories