ದೊಡ್ಡಬಳ್ಳಾಪುರ : ಬಿಪಿಎಲ್ ಕಾರ್ಡ್ ರದ್ದತಿ, ಕರವೇ ಪ್ರತಿಭಟನೆ

Doddaballapur (ದೊಡ್ಡಬಳ್ಳಾಪುರ) : ಅನರ್ಹ ಬಿಪಿಎಲ್ ಕಾರ್ಯಗಳ ವಿರುದ್ದ ನೋಟಿಸ್ ನೀಡಿರುವುದನ್ನು ಖಂಡಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ದೊಡ್ಡಬಳ್ಳಾಪುರ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.
ದೊಡ್ಡಬಳ್ಳಾಪುರ (Doddaballapur ) ದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು, ಪಡಿತರ ಕಾರ್ಡ್ ಅನರ್ಹ ಗೊಳಿಸಿ ಬಡವರ ಸೌಲಭ್ಯಗಳನ್ನು ಕಸಿದಿರುವುದು ಸರಿಯಲ್ಲ ಎಂದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುಮಾರು 2873 ಅಂತ್ಯೋದಯ ಕಾರ್ಡ್, 4470 ಎಪಿಎಲ್ ಹಾಗೂ 66120 ಬಿಪಿಎಲ್ ಕಾರ್ಡ್ದಾರರಿದ್ದಾರೆ. ಈ ಪೈಕಿ ಸುಮಾರು 5700 ಕಾರ್ಡುದಾರರಿಗೆ ನೋಟಿಸ್ ನೀಡಲಾಗಿದೆ.
ಕರ್ನಾಟಕ ಸರಕಾರ ಪಡಿತರ ಚೀಟಿಗಳನ್ನು ಅನರ್ಹಗೊಳಿಸಲಿ ಗ್ರಾಹಕರಿಗೆ ನೋಟಿಸ್ ನೀಡುವ ಭರದಲ್ಲಿ ಕೆಲವು ಮಾನದಂಡಗಳನ್ನು ಸಿದ್ದಪಡಿಸಿದೆ. ಈ ಮಾನದಂಡಗಳಲ್ಲಿ ಲೋಪದೋಷಗಳಿದ್ದು, ಅವುಗಳನ್ನು ಸರಿ ಪಡಿಸಿ ನಂತರ ಅನರ್ಹಗೊಳಿಸಬೇಕು.
ತಪ್ಪಾದ ಮಾನದಂಡದ ಅಡಿಯಲ್ಲಿ ಪಡಿತರ ಕಾರ್ಡ್ ರುದ್ದು ಮಾಡಿದ್ರೆ, ಬಡವರಿಗೆ ಸಿಗಬೇಕಾದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಬಿಪಿಎಲ್ ಕಾರ್ಡ್ ರದ್ದು ಮಾಡಿ ಎಪಿಎಲ್ ಕಾರ್ಡ್ ಮಾಡುವ ಮೂಲಕ ಬಡವರಿಗೆ ಅನ್ಯಾಯ ಆಗಬಾರದು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ವಾರ್ಷಿಕವಾಗಿ 1.20 ಲಕ್ಷ ರೂಪಾಯಿ ಆದಾಯ, 125 ಸಿಸಿ ಬೈಕ್, ಸಾವಿರ ಚದರ ಅಡಿಯ ಮನೆ ಹೊಂದಿದ್ದರೆ, ಅಂತಹ ಗ್ರಾಹಕರಿಗೆ ನೋಟಿಸ್ ನೀಡುತ್ತಿರುವುದು ಖಂಡನೀಯ. ಹೀಗಾಗಿ ಆಹಾರ ನಾಗರೀಕ ಸರಬರಾಜು ಸಚಿವರು, ಮುಖ್ಯಮಂತ್ರಿಗಳು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಮ್ಮ ಮನವಿ ಪತ್ರವನ್ನು ದೊಡ್ಡಬಳ್ಳಾಪುರ ತಾಲೂಕು ತಹಶೀಲ್ದಾರರಿಗೆ ಸಲ್ಲಿಕೆ ಮಾಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ದೊಡ್ಡಬಳ್ಳಾಪುರ ತಾಲೂಕು ಘಟಕದ ಅಧ್ಯಕ್ಷರಾದ ಹಮಾಮ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್ಎಲ್ಎನ್ ವೇಣು, ಉಪಾಧ್ಯಕ್ಷರಾದ ಜೋಗಳ್ಳಿ ಅಮ್ಮು, ಕಾರ್ಯದರ್ಶಿ ಮುಖೇನಹಳ್ಳಿ ರವಿ.
ಮಾತ್ರವಲ್ಲ ನಗರ ಅಧ್ಯಕ್ಷರಾದ ಬಶೀರ್, ಉಪಾಧ್ಯಕ್ಷರು ಮಂಜಣ್ಣ, ಕಾರ್ಯದರ್ಶಿ ಸಿರಾಜ್, ರಾಮ ಮಡಿವಾಳ, ಬೆಂಗಳೂರು ನಗರ ವಿದ್ಯಾರ್ಥಿ ಘಟಕದ ಹೇಮಂತ್, ಜೋಗಳ್ಳಿ ಶಾಖೆ ಮುನಿ ಕೃಷ್ಣಪ್ಪ ಕೋಡಿಹಳ್ಳಿ, ಶಾಖೆ ಅಧ್ಯಕ್ಷರಾದ ರವಿ, ಉಪಾಧ್ಯಕ್ಷರಾದ ಮುನಿಂದ್ರ, ಕಾರ್ಯದರ್ಶಿಗಳಾದ ಶಶಿಕುಮಾರ್, ಖಜಾಂಚಿ ಮನು, ಸೂರಿ, ದಯಾನಂದ್, ನೂರಲ್ ವಾಸಿಂ, ಹರಿಕ್ ಪಾಶ ಮುಂತಾದವರು ಉಪಸ್ಥಿತರಿದ್ದರು.



