ಹಾಸನ: ಸಾಮರಸ್ಯ ಟ್ರಸ್ಟ್ ವತಿಯಿಂದ ಉಚಿತ ಬೃಹತ್ ವೈದ್ಯಕೀಯ ಶಿಬಿರ

ಶಿಬಿರದಲ್ಲಿ ಕ್ಯಾನ್ಸರ್ ತಪಾಸಣೆ, ಹೃದಯ ಸಂಬಂಧಿತ ತಪಾಸಣೆ, ಇಸಿಜಿ ಪರೀಕ್ಷೆ, ಅಸ್ಥಿ ಚಿಕಿತ್ಸಾ (Orthopedic) ತಪಾಸಣೆ, ಕಣ್ಣಿನ ಪರೀಕ್ಷೆ ಹಾಗೂ ಸಾಮಾನ್ಯ ವೈದ್ಯರ ಸಲಹೆ ನೀಡಲಾಯಿತು.

ಹಾಸನ: ಸಾಮರಸ್ಯ ಟ್ರಸ್ಟ್‌ (ರಿ) ನೇತೃತ್ವದಲ್ಲಿ ಐಗಿರಿ ಫೌಂಡೇಶನ್, ಸ್ನೇಹತೀರ (ರಿ) ಹಾಗೂ ಉತ್ತ್ಕರ್ಷ ತಿಪಟೂರು (ರಿ) ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಬೃಹತ್‌ ವೈದ್ಯಕೀಯ ಶಿಬಿರವು ಯಶಸ್ವಿಯಾಗಿ ನಡೆಯಿತು. ಹಾಸನದ ಮೂಲ ದುದ್ದ ಸಮುದಾಯ ಭವನದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರಲ್ಲಿ ಸುಮಾರು 350ಕ್ಕೂ ಅಧಿಕ ಸಾರ್ವಜನಿಕರು ಪಾಲ್ಗೊಂಡಿದ್ದರು.

free medical camp by samarasya trust hassan 2026

ಹಾಸನದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರಕ್ಕೆ ಸ್ಥಳೀಯ ಗ್ರಾಮಸ್ಥರಿಂದ ಉತ್ತಮ ಬೆಂಬಲ ವ್ಯಕ್ತ ಪಡಿಸಿದ್ದರು. ವಿವಿಧ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಸಲಹೆಗಳನ್ನು ಉಚಿತವಾಗಿ ನೀಡಲಾಯಿತು.

free medical camp by samarasya trust hassan 2026

ಉಚಿತ ಬೃಹತ್ ವೈದ್ಯಕೀಯ ಶಿಬಿರದಲ್ಲಿ ಒಟ್ಟು 24 ಅನುಭವಿ ವೈದ್ಯರು ಪಾಲ್ಗೊಂಡಿದ್ದರು. ಬೆಂಗಳೂರಿನ ಸರ್ಕೇಡಿಯನ್ ಹೆಲ್ತ್ ಕೇರ್, ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ, ಹಾಸನದ ಮಹಾಲಕ್ಷ್ಮಿ ಮಂಜಪ್ಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (MMM Hospital) ಹಾಗೂ ಅಮ್ಮ ಐ ಅಂಡ್ ರೆಟಿನಾ ಕೇರ್ ಸೆಂಟರ್ ಸಂಸ್ಥೆಗಳ ತಜ್ಞರು ರೋಗಿಗಳಿಗೆ ಚಿಕಿತ್ಸೆ ನೀಡಿದರು.

free medical camp by samarasya trust hassan 2026

Also Read : ಶಾಲಾ ಬಿಸಿಯೂಟಕ್ಕೆ ಯಾವುದೇ ತಡೆಯಿಲ್ಲದೆ ಎಲ್‌ಪಿಜಿ ಪೂರೈಕೆ: ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಮಹತ್ವದ ಸೂಚನೆ

ಶಿಬಿರದಲ್ಲಿ ಕ್ಯಾನ್ಸರ್ ತಪಾಸಣೆ, ಹೃದಯ ಸಂಬಂಧಿತ ತಪಾಸಣೆ, ಇಸಿಜಿ ಪರೀಕ್ಷೆ, ಅಸ್ಥಿ ಚಿಕಿತ್ಸಾ (Orthopedic) ತಪಾಸಣೆ, ಕಣ್ಣಿನ ಪರೀಕ್ಷೆ ಹಾಗೂ ಸಾಮಾನ್ಯ ವೈದ್ಯರ ಸಲಹೆಗಳನ್ನು ಒಳಗೊಂಡಂತೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲಾಯಿತು. ವಿಶೇಷವಾಗಿ, ಅಮ್ಮ ಐ ಅಂಡ್ ರೆಟಿನಾ ಕೇರ್ ಸೆಂಟರ್ ವತಿಯಿಂದ ನಡೆದ ತಪಾಸಣೆಯಲ್ಲಿ 18 ಮಂದಿಯನ್ನು ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ನೀಡಲಾಯಿತು.

free medical camp by samarasya trust hassan 2026

ಸಾಮರಸ್ಯ ಟ್ರಸ್ಟ್‌ನ 10 ಮಂದಿ ಸ್ವಯಂ ಸೇವಕರು, ಉತ್ತ್ಕರ್ಷದ 7, ಸ್ನೇಹತೀರದ 5 ಹಾಗೂ ಐಗಿರಿ ಫೌಂಡೇಶನ್‌ನ 5 ಸ್ವಯಂಸೇವಕರು ಶಿಬಿರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಸಾಮರಸ್ಯ ಟ್ರಸ್ಟ್‌ ವತಿಯಿಂದ ಎಲ್ಲಾ ವೈದ್ಯರು, ಸ್ವಯಂ ಸೇವಕರು ಹಾಗೂ ಸಂಘ ಸಂಸ್ಥೆಗಳು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.

Also Read : ದ್ವಿಚಕ್ರ ವಾಹನ ಪ್ರಯಾಣಿಕರಿಗೆ ಗುಡ್​​ನ್ಯೂಸ್​ : ನೈಸ್​ ರಸ್ತೆಗಳಲ್ಲಿ ಶೀಘ್ರದಲ್ಲೇ ಟೋಲ್​ ರದ್ದು

free medical camp by samarasya trust hassan 2026

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories