ಅಂಗನವಾಡಿ ಮಕ್ಕಳ ತರಕಾರಿಗೆ ಕತ್ತರಿ : ಸಿಡಿದೆದ್ದ ಅಂಗನವಾಡಿ ಕಾರ್ಯಕರ್ತೆಯರು

Anganwadi Mid Day Meal Budget : ಬೆಂಗಳೂರು: ಉಚಿತ ಭಾಗ್ಯಗಳನ್ನು ನೀಡುವುದನ್ನೇ ಬಂಡವಾಳವಾಗಿಸಿಕೊಂಡಿರುವ ರಾಜ್ಯ ಸರ್ಕಾರ ಇದರ ತಲೆದಂಡವನ್ನು ಬೇರೆ ಇಲಾಖೆಗಳ ಮೇಲೆ ಹೇರುತ್ತಿದೆ. ಅಂಗನವಾಡಿ ಮಕ್ಕಳನ್ನೂ ಬಿಡದ ರಾಜ್ಯ ಸರ್ಕಾರ ಪ್ರತಿ ಮಕ್ಕಳ ಒಂದು ದಿನದ ತರಕಾರಿ ಖರೀದಿಗೆ ನೀಡುತ್ತಿದ್ದ ಹಣಕ್ಕೂ ಕತ್ತರಿ ಹಾಕಿದೆ. ಮಕ್ಕಳಿಗೆ ತರಕಾರಿ ಖರೀದಿಗೆ ಕೇವಲ 50 ಪೈಸೆ ನಿಗದಿ ಮಾಡಲಾಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು..! ರಾಜ್ಯದ ಅಂಗನವಾಡಿಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ 1 ದಿನದ ತರಕಾರಿ ಖರೀದಿಗೆ ಸರ್ಕಾರ 50 ಪೈಸೆ ನೀಡಲಿದೆ. 10 ಮಕ್ಕಳಿರುವ ಅಂಗನವಾಡಿಗೆ ಸರ್ಕಾರವು 5 ರೂಪಾಯಿ ನೀಡಲಿದೆ. 5 ರೂಪಾಯಿಯಲ್ಲಿ ತರಕಾರಿ ಖರೀದಿ ಸಾಧ್ಯವೇ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಪ್ರಶ್ನೆಯಾಗಿದೆ.

Aslo Read : ರಾಜ್ಯದಲ್ಲಿ ಮಿತಿಮೀರಿದ ಬಿರು ಬೇಸಿಲ ಬೇಗೆ : ಇಂದು ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಸರ್ಕಾರದ ಈ ಕ್ರಮವನ್ನು ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಮಾರ್ಚ್​ 2ರಂದು ಬೆಂಗಳೂರು ಚಲೋ ನಡೆಸಲು ನಿರ್ಧರಿಸಲಾಗಿದ್ದು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಲಿದ್ದಾರೆ.

Aslo Read : ಸರ್ಕಾರದ ವಿರುದ್ಧ ವೈದ್ಯರ ಸಮರ : ಮಾರ್ಚ್​ 11ರಂದು ರಾಜ್ಯಾದ್ಯಂತ ವೈದ್ಯರ ಮುಷ್ಕರ

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories