Hassan News : ಹಾಸನಾಂಬೆ ದರ್ಶನ, ಕರ್ತವ್ಯಲೋಪ : ಇಬ್ಬರು ವಾರ್ಡನ್ ಅಮಾನತು
Hassan News: ಹಾಸನ: ಹಾಸನಾಂಬಾ ದೇವಸ್ಥಾನದ ಆವರಣಕ್ಕೆ ಅನಧಿಕೃತ ಜನರಿಗೆ ಪ್ರವೇಶ ನೀಡಲು ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಮೊದಲ ದಿನವೇ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹಾಸನ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಇದ್ದರೂ ಕೂಡ ಈ ಇಬ್ಬರು ಅಧಿಕಾರಿಗಳು ತಮ್ಮ ಗುರುತಿನ ಚೀಟಿಯನ್ನು ಅನಧಿಕೃತ ಜನರಿಗೆ ನೀಡಿ ದೇವಾಲಯದ ಪ್ರವೇಶಕ್ಕೆ ಅವಖಾಶ ಕಲ್ಪಿಸಿದ್ದರು. ಇಂತಹ ಸರಕಾಇರ ನೌಕರರು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾಗಿ ಕೆಲ ಮಾಡಿದ್ದಾರೆ.
ಎಲ್ಲಾ ಸರಕಾರಿ ನೌಕರರು ಸಾರ್ವಜನಿಕರಿಗೆ ಅತ್ಯುತ್ತಮ ದರ್ಶನದ ವ್ಯವಸ್ಥೆಯನ್ನು ಮಾಡಿದೆ. ಇದು ಉತ್ತಮ ತಂಡದ ಕೆಲಸ. ಉತ್ತಮ ಕೆಲಸ ಮಾಡುತ್ತಿರುವ ಸರಕಾರಿ ಅಧಿಕಾರಿಗಳಿಗೆ ಶ್ರೇಯಸ್ಸು ಸಲ್ಲಬೇಕು ಎಂದು ಅವರು ತಿಳಿಸಿದ್ದಾರೆ.
Also Read: ಸಿಎಂ ಆತುರದಲ್ಲಿ ನಾನಿಲ್ಲ, ಭಗವಂತ ಯಾವಾಗ ಕೊಡ್ತಾನೋ ಕೊಡಲಿ : ಮಾಧ್ಯಮಗಳ ಮೇಲೆ ಗರಂ ಆಗಿದ್ಯಾಕೆ ಡಿಕೆಶಿ
ಹಾಸನ ಜಿಲ್ಲಾಧಿಕಾರಿಗಳ ಆದೇಶದಲ್ಲೇನಿದೆ ?
ಹಾಸನ(Hassan) ಜಿಲ್ಲೆಯ ಅರಕಲಗೋಡು ತಾಲೂಕಿನ ದೊಡ್ಡಬೆಮ್ಮತ್ತಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಯಲದ ವಾರ್ಡನ್ ಆನಂದ್ ಮತ್ತು ಬೆಲೂರು ತಾಲೂಕಿನ ಹಳೆಬೀಡು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ವಾರ್ಡನ್ ರಮೇಶ್ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಅವರು ಆದೇಶ ಹೊರಡಿಸಿದ್ದಾರೆ.
Also Read: ಕರ್ನಾಟಕದಲ್ಲಿ 24 ಗಂಟೆಯಲ್ಲಿ ಬಾರೀ ಮಳೆ : 16 ಜಿಲ್ಲೆಗಳಲ್ಲಿ ಐಎಂಡಿ ಎಚ್ಚರಿಕೆ



