ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ತಟ್ಟೆ ಕಾಸಿಗಾಗಿ ಅರ್ಚಕರ ಹೊಡೆದಾಟ : ವಿಡಿಯೋ ವೈರಲ್​

Idagunji Mahaganapati Temple : ರಾಜ್ಯದ ಸುಪ್ರಸಿದ್ಧ ದೇವಾಲಯಗಳ ಪೈಕಿ ಒಂದಾದ ಇಡಗುಂಜಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಭಕ್ತರು ತಟ್ಟೆಗೆ ಹಾಕಿದ ಕಾಸು ಹಂಚಿಕೆ ವಿಚಾರದಲ್ಲಿ ದೇವಸ್ಥಾನದ ಅರ್ಚಕರ ನಡುವೆ ಹೊಡೆದಾಟವೇ ನಡೆದಿದ್ದು ಭಕ್ತರು ದಂಗಾಗಿದ್ದಾರೆ. ದೇವಸ್ಥಾನದಲ್ಲಿದ್ದ ಭಕ್ತರು ಅರ್ಚಕರ ಹೊಡೆದಾಟದ ವಿಡಿಯೋ ಮಾಡಿಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ದೇವಸ್ಥಾನದ ಅರ್ಚಕರುಗಳಾದ ರಮಾನಂದ ಭಟ್​ ಹಾಗೂ ನರಸಿಂಹ ಭಟ್​ ನಡುವೆ ದೇವಸ್ಥಾನದ ಪೂಜಾ ಹಕ್ಕು ಹಾಗೂ ಆಡಳಿತದ ವಿಚಾರವಾಗಿ ಹಲವು ವರ್ಷಗಳಿಂದ ಸಂಘರ್ಷ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಅಲ್ಲದೇ ಈ ವಿವಾದ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಆದರೆ ಈ ಎಲ್ಲದರ ನಡುವೆ ದೇವಸ್ಥಾನದಲ್ಲಿಯೇ ಅರ್ಚಕರು ಈ ರೀತಿಯ ಅಸಭ್ಯ ವರ್ತನೆ ತೋರಿರುವುದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅನಂತಪದ್ಮನಾಭ ದೇಗುಲದ ಆಡಳಿತಾಧಿಕಾರಿ ನೇಮಕ : ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Idagunji Mahaganapati Temple ಅರ್ಚಕರು ಪರಸ್ಪರ ನೂಕಾಟ – ತಳ್ಳಾಟ ಮಾಡಲು ಆರಂಭಿಸುತ್ತಿದ್ದಂತೆಯೇ ಭಕ್ತರು ದಂಗಾಗಿ ಹೋಗಿದ್ದಾರೆ. ಇಬ್ಬರ ನಡುವೆ ಗಲಾಟೆ ತಪ್ಪಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲ ಕಾಲ ಪರಿಸ್ಥಿತಿ ಉದ್ವಿಗ್ನವಾಗಿಯೇ ಇತ್ತು ಎಂದು ಭಕ್ತಾದಿಗಳು ತಿಳಿಸಿದ್ದಾರೆ.

http://youtube.com/watch?v=nAZCeEVhIa8

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories