ಉಡುಪಿ, ದಕ್ಷಿಣ ಕನ್ನಡ ಸೇರಿ ಹಲವು ಜಿಲ್ಲೆಗಳಿಗೆ ಜೆಡಿಎಸ್ ಹೊಸ ಜಿಲ್ಲಾಧ್ಯಕ್ಷರ ಆಯ್ಕೆ
JDS new district presidents: ಬೆಂಗಳೂರು: ರಾಜ್ಯದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಜಾತ್ಯತೀತ ಜನತಾದಳ (ಜೆಡಿಎಸ್) ಮಹತ್ವದ ಹೆಜ್ಜೆ ಇಟ್ಟಿದೆ. ಪಕ್ಷದ ಆಂತರಿಕ ಚುನಾವಣಾ ಪ್ರಕ್ರಿಯೆಯ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ನೂತನ ಜಿಲ್ಲಾ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ಈ ಕುರಿತು ಜೆಡಿಎಸ್ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕೆ.ವಿ. ಮಂಜುನಾಥ್, ಬೆಂಗಳೂರು ದಕ್ಷಿಣಕ್ಕೆ ಜಯಮುತ್ತು ಹಾಗೂ ಮೈಸೂರು ಗ್ರಾಮಾಂತರಕ್ಕೆ ಅಶ್ವಿನ್ ಕುಮಾರ್ ಎಂ. ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮೈಸೂರು ನಗರಕ್ಕೆ ಎಸ್.ಬಿ.ಎಂ ಮಂಜು ಮತ್ತು ಮಂಡ್ಯ ಜಿಲ್ಲೆಯ ಜವಾಬ್ದಾರಿಯನ್ನು ಡಿ. ರಮೇಶ್ ಅವರಿಗೆ ನೀಡಲಾಗಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡದಲ್ಲಿ ಜಾ.ಕೆ. ಮಾಧವಗೌಡ ಹಾಗೂ ಉಡುಪಿಯಲ್ಲಿ ಯೋಗೀಶ್ ವಿ. ಶೆಟ್ಟಿ ಅವರು ಪಕ್ಷವನ್ನು ಮುನ್ನಡೆಸಲಿದ್ದಾರೆ.
ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲೂ ನೂತನ ಪದಾಧಿಕಾರಿಗಳ ನೇಮಕವಾಗಿದ್ದು, ಚಿತ್ರದುರ್ಗಕ್ಕೆ ಕೆ. ಮಂಜುನಾಥ್, ಶಿವಮೊಗ್ಗಕ್ಕೆ ರಾಮಕೃಷ್ಣ ಕೆ.ಎನ್. ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಶಂಕರ ಭಮರಪ್ಪ ಮಾಡಲಗಿ ಅವರನ್ನು ಆಯ್ಕೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಗೆ ಹನುಮಂತ್ ಬಿ. ಮಾವಿನಮರದ ಮತ್ತು ಧಾರವಾಡ ಗ್ರಾಮಾಂತರಕ್ಕೆ ಬಿ.ಬಿ. ಗಂಗಾಧರ ಮಠ ಅವರನ್ನು ನೇಮಿಸಲಾಗಿದೆ.
ಕುಂದಾಪುರ: ಫಾರ್ಚುನರ್ ಕಾರು ಪಲ್ಟಿ – ಆರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಇನ್ನುಳಿದಂತೆ ಹಾವೇರಿಗೆ ಮಂಜುನಾಥ್ ಎಸ್. ಗೌಡ ಶಿವಣ್ಣನವರ್, ಉತ್ತರ ಕನ್ನಡಕ್ಕೆ ಸೂರಜ್ ನಾಯಕ್ ಸೋನಿ, ಬೀದರ್ ಜಿಲ್ಲೆಗೆ ರಮೇಶ್ ಪಾಟೀಲ್ ಸೋಲಾಪುರ, ಬಳ್ಳಾರಿಗೆ ಮೀನಳ್ಳಿ ತಾಯಣ್ಣ ಹಾಗೂ ಕೊಪ್ಪಳ ಜಿಲ್ಲೆಗೆ ಸುರೇಶ್ ಭೂಮರೆಡ್ಡಿ ಅವರು ನೂತನ ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದಾರೆ. ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಈ ಸಂಘಟನಾತ್ಮಕ ಬದಲಾವಣೆ ತರಲಾಗಿದೆ.



