ಸಿಎಂ ಕುರ್ಚಿ ಕಸರತ್ತಿಗೆ ನಿರ್ಮಲಾನಂದನಾಥ ಸ್ವಾಮೀಜಿ ಪ್ರವೇಶ : ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ

Karnataka Politics CM fight : ಬೆಂಗಳೂರು : ಸಿಎಂ ಸ್ಥಾನ ತಮಗೆ ಬೇಕೆಬೇಕೆಂದು ಪಟ್ಟು ಹಿಡಿದು ಕುಳಿತಿರುವ ಡಿ.ಕೆ ಶಿವಕುಮಾರ್ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ಗೆ ರಾಜ್ಯ ರಾಜಕೀಯ ಬಿಸಿತುಪ್ಪವಾಗಿ ಪರಿಣಮಿಸಿದೆ. ಒಂದು ಕಡೆ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯ ಬಣದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಇತ್ತ ಕುರ್ಚಿ ಕದನಕ್ಕೆ ಎಂಟ್ರಿ ನೀಡಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಡಿಕೆಶಿವಕುಮಾರ್ ಸಿಎಂ ಆಗಬೇಕು ಎಂದಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಂದೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಎನ್ನುವುದು ನನ್ನ ಹಾಗೂ ಭಕ್ತರ ಅಭಿಲಾಷೆ ಎಂದು ಹೇಳಿದ್ದಾರೆ .
ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ರಾಜ್ಯ ರಾಜಕಾರಣಕ್ಕೆ ಒಕ್ಕಲಿಗ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ. ಕಳೆದ ಚುನಾವಣೆಯಲ್ಲಿ ಸಹ ನಮ್ಮ ಸಮುದಾಯದ ನಾಯಕರಿಗೆ ಸಿಎಂ ಸ್ಥಾನ ಬೇಕೆಂದು ನಾವು ನಿರೀಕ್ಷೆ ಇಟ್ಟಿದ್ದೆವು. ಡಿ.ಕೆ ಶಿವಕುಮಾರ್ ಎರಡೂವರೆ ವರ್ಷಗಳ ಕಾಲ ಸಿಎಂ ಆಗುತ್ತಾರೆ ಎಂದುಕೊಂಡಿದ್ದೆವು. ಆದರೆ ಅದು ಆಗುವ ಲಕ್ಷಣ ಕಾಣುತ್ತಿಲ್ಲ ಎಂದು ಬೇಸರ ಹೊರಹಾಕಿದರು.
ಇದನ್ನೂ ಓದಿ : ಕೃಷ್ಣನಗರಿ ಉಡುಪಿಗೆ ಮೋದಿ ಭೇಟಿ : ಹೇಗಿರಲಿದೆ ಗೊತ್ತ ಭದ್ರತೆ ?
ಡಿ.ಕೆ ಶಿವಕುಮಾರ್ ಪಕ್ಷಕ್ಕಾಗಿ ಶ್ರಮಪಟ್ಟು ಹೋರಾಡುವ ನಾಯಕರು. . ಅವರಲ್ಲಿ ಇರುವ ಸಾಮರ್ಥ್ಯ, ಸಂಘಟನಾ ಶಕ್ತಿ, ಪಕ್ಷ ನಿಷ್ಠೆ ಎಲ್ಲರಿಗೂ ಗೊತ್ತು. ಉಳಿದ ಅವಧಿಗೆ ಅವರಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ಹಾಗೂ ಸಾವಿರಾರು ಭಕ್ತರ ಮನದ ಮಾತು ಎಂದು ಹೇಳಿದ್ದಾರೆ.
ಅಲ್ಲದೇ ಕಾಂಗ್ರೆಸ್ ಹೈಕಮಾಂಡ್ಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿರುವ ನಿರ್ಮಲಾನಂದನಾಥ ಸ್ವಾಮೀಜಿ, ಡಿ.ಕೆ ಶಿವಕುಮಾರ್ ಸಿಎಂ ಆಗದೇ ಹೋದಲ್ಲಿ ನಮ್ಮ ಭಕ್ತರಿಗೆ ಬೇಸರವಾಗಲಿದೆ.ಈಗಾಗಲೇ ಸಾಕಷ್ಟು ಭಕ್ತರು ಕರೆಮಾಡಿ ಕೇಳುತ್ತಿದ್ದಾರೆ.
ನಮ್ಮವರು ಸಿಎಂ ಆಗುತ್ತಾರೆಂದು ಒಕ್ಕಲಿಗರು ಕಾಂಗ್ರೆಸ್ಗೆ ಬೆಂಬಲ ನೀಡಿದ್ದರು. ಆದರೆ ಇದು ಯಾಕೋ ಆಗುವ ಲಕ್ಷಣ ಕಾಣುತ್ತಿಲ್ಲ. ಆದರೆ ಇದು ರಾಜ್ಯ ಅಭಿವೃದ್ಧಿಗೆ ಕ್ಷೇಮವಲ್ಲ. ಕಾಂಗ್ರೆಸ್ ಸ್ಪಷ್ಟತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಇದನ್ಣೂ ಓದಿ : ಪೋಕ್ಸೋ ಪ್ರಕರಣ : ಚಿತ್ರದುರ್ಗದ ಮುರುಘಾ ಶರಣರಿಗೆ ಬಿಗ್ ರಿಲೀಫ್
Karnataka Politics CM fight Enter Nirmalanandanatha Swamiji



