ಕಾರವಾರ : ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದಿದ್ರೆ ಶಾಸಕ ಸತೀಶ್ ಸೈಲ್ ರಾಜಕೀಯ ನಿವೃತ್ತಿ
ಕಾರವಾರ: Karwar super specialty hospital: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತವಾದ ಆಸ್ಪತ್ರೆಯಿಲ್ಲ. ಈ ಕುರಿತು ಹಲವು ವರ್ಷಗಳಿಂದಲೂ ಹೋರಾಟ ನಡೆಯುತ್ತಲೇ ಇದೆ. ಇದೀಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಲಿದ್ರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.
ಕಾರವಾರದಲ್ಲಿಂದು ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರ್ಮಾಣದ ಕುರಿತು ನವೆಂಬರ್ ತಿಂಗಳಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
ಕರ್ನಾಟಕ ಸರಕಾರ ಮಾರ್ಚ್ ವೇಳೆಗೆ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತು ಘೋಷಣೆ ಮಾಡಲಿದೆ ಅನ್ನೋ ವಿಶ್ವಾಸವಿದೆ. ಆದರೆ ಸರಕಾರ ಈ ಬಗ್ಗೆ ಘೋಷಣೆ ಮಾಡದೇ ಇದ್ರೆ ತಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ನಾನು ಯಾವ ರಾಜಕೀಯಕ್ಕೂ ಹೋಗುವುದಿಲ್ಲ ಎಂದಿದ್ದಾರೆ.
Also Read: ರಾಜ್ಯದಲ್ಲಿ ‘ಐ ಲವ್ ಯೂ ಆರ್ಎಸ್ಎಸ್’ ಅಭಿಯಾನ : ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್ಚಿದ ಆಕ್ರೋಶ
ಉತ್ತರ ಕನ್ನಡ(Uttara kannada) ಜಿಲ್ಲೆಯಲ್ಲಿ ಸುಸಜ್ಜಿತವಾದ ಆಸ್ಪತ್ರೆಗಳಿಲ್ಲ. ಹೀಗಾಗಿ ಜಿಲ್ಲೆಯ ಜನರು ಇತರ ರಾಜ್ಯಕ್ಕೆ ತೆರಳುತ್ತಿದ್ದಾರೆ. ಇದು ಅತ್ಯಂತ ವಿಷಾಧಕರವಾದದು. ಜನ ಸಾಮಾನ್ಯರ ಕಷ್ಟದ ಕುರಿತು ಅರಿವಿದೆ.
ಜನರ ಆರೋಗ್ಯ ಸೇವೆ ನನಗೆ ಮುಖ್ಯ, ಹೀಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ದ ಎಂದಿದ್ದಾರೆ. ಈ ಮೂಲಕ ಶಾಸಕ ಸತೀಶ್ ಸೈಲ್ ಸರಕಾರದ ಮೇಲೆ ಒತ್ತಡ ಹೇರಿದ್ದಾರೆ.
ಉತ್ತರ ಕನ್ನಡ(Uttara Kannada) ಜಿಲ್ಲೆಯ ಜನರು ಹಲವು ವರ್ಷಗಳಿಂದಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಡುತ್ತಿದ್ದಾರೆ. ಪ್ರತೀ ಬಜೆಟ್‌ನಲ್ಲಿಯೂ ತಮ್ಮ ಜಿಲ್ಲೆಗೊಂದು ಆಸ್ಪತ್ರೆಯನ್ನು ಸರಕಾರ ಘೋಷಣೆ ಮಾಡುತ್ತಾ ಅಂತಾ ಕಾದು ಕುಳಿತಿರುತ್ತಿದ್ದರು.
Also Read: ಆರ್ಎಸ್ಎಸ್ಗೆ ಪ್ರಿಯಾಂಕ್ ಖರ್ಗೆ ಅಪ್ಪನ ಅನುಮತಿ ಬೇಕಿಲ್ಲ : ಸಿ.ಟಿ ರವಿ ಕಿಡಿ
ಆದರೆ ಇದುವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರ್ಮಾಣದ ಕುರಿತು ಸರಕಾರ ಮನಸ್ಸು ಮಾಡಿಲ್ಲ.



