ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸರಕು ಸಾಗಣೆ ಮಾಡುವವರಿಗೆ ಬಿಗ್ಶಾಕ್ ಎದುರಾಗಿದೆ. ಲಗೇಜ್ ದರಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪರಿಷ್ಕರಣೆ ಮಾಡಿದ್ದು ನೂತನ ದರವು ಇಂದಿನಿಂದಲೇ ಜಾರಿಗೆ ಬಂದಿದೆ. 2021ರಲ್ಲಿ ಕೊನೆಯ ಬಾರಿಗೆ ಲಗೇಜ್ ದರದಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಇದಾದ ಬಳಿಕ ಹಲವು ಬಾರಿ ಪ್ರಯಾಣಿಕರ ಟಿಕೆಟ್ ದರದಲ್ಲಿ ಏರಿಕೆ ಕಂಡಿದ್ದರೂ ಎಂಂದಿಗೂ ಲಗೇಜ್ ದರದಲ್ಲಿ ಏರಿಕೆ ಕಂಡುಬಂದಿರಲಿಲ್ಲ. ಇದೀಗ ಈ ದರದಲ್ಲಿ ಕೂಡ ಏರಿಕೆ ಕಂಡಂತಾಗಿದೆ.
ಇನ್ನು ದರಪರಿಷ್ಕರಣೆ ಯಾವ ರೀತಿ ಮಾಡಲಾಗಿದೆ ಎಂಬುವುದನ್ನ ನೋಡುವುದಾದರೆ, 1 ರಿಂದ 5 ಸ್ಟೇಜ್ನವರೆಗೆ ಈ ಹಿಂದೆ 5 ರೂಪಾಯಿ ಇದ್ದ ದರವು ಇದೀಗ 6 ರೂಪಾಯಿಗಳಿಗೆ ಏರಿಕೆ ಕಂಡಿದೆ. 6 ರಿಂದ 13ಸ್ಟೇಜ್ವರೆಗೆ ಈ ಹಿಂದೆ 10 ರೂಪಾಯಿ ಇದ್ದ ದರವು 12 ರೂಪಾಯಿಗಳಿಗೆ ಏರಿಕೆ ಕಂಡಿದೆ.
156ರಿಂದ 160 ಸ್ಟೇಜ್ವರೆಗೆ ಈ ಹಿಂದೆ 123 ರೂಪಾಯಿ ಇದ್ದ ದರವನ್ನು 145 ರೂಪಾಯಿಗಳಿಗೆ ಏರಿಸಿ ಪರಿಷ್ಕರಿಸಲಾಗಿದೆ. ಈ ದರ ಏರಿಕೆಯು ಕೊರಿಯರ್ ಸಾಗಣೆದಾರರಿಗೆ ಹಾಗೂ ಪ್ರಯಾಣಿಕರಿಲ್ಲದೇ ಲಗೇಜ್ ಸಾಗಣೆ ಮಾಡುವ ವ್ಯವಸ್ಥೆ ಬಳಸುತ್ತಿದ್ದವರ ಜೇಬಿಗೆ ಕತ್ತರಿ ಹಾಕಿದೆ.
ಇದನ್ನೂ ಓದಿ: ಕೈಯಲ್ಲಿ 5,000 ರೂಪಾಯಿ ಇದೆಯೇ? ತಕ್ಷಣ ಹೀಗೆ ‘ತುರ್ತು ನಿಧಿ’ ಸಿದ್ಧಪಡಿಸಿ
ಸಾಮಾನ್ಯವಾಗಿ ಸಣ್ಣ ವ್ಯಾಪಾರಿಗಳೇ ಈ ಯೋಜನೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದು ಅಂತವರಿಗೆ ಈ ದರ ಏರಿಕೆ ಬಿಸಿ ತಟ್ಟಲಿದೆ. ಇನ್ನು ಪ್ರಯಾಣಿಕ ರಹಿತ ಲಗೇಜ್ ದರದಲ್ಲಿ ಕೆಎಸ್ಆರ್ಟಿಸಿ ಏರಿಕೆ ಮಾಡುತ್ತಿದ್ದಂತೆಯೇ ಇಂದಿನಿಂದ ಪ್ರಯಾಣಿಕರ ಟಿಕೆಟ್ ದರ ಕೂಡ ಏರಿಕೆಯಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಆದರೆ ಈ ವಿಚಾರವಾಗಿ ಕೆಎಸ್ಆರ್ಟಿಸಿ ಸ್ಪಷ್ಟನೆ ನೀಡಿದ್ದು, ಪ್ರಯಾಣಿಕರ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದೆ .


