ಮೈಸೂರು ಬಾಲಕಿ ಅತ್ಯಾಚಾರ ಪ್ರಕರಣ : ಸರಕಾರದ ವಿರುದ್ದ ಆರ್.‌ ಅಶೋಕ್‌ ವಾಗ್ದಾಳಿ

ಬೆಂಗಳೂರು: Mysore girl rape case: ಮೈಸೂರಿನಲ್ಲಿ ನಡೆದಿರುವ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಕಾಂಗ್ರೆಸ್‌ ಸರಕಾರದ ವಿರುದ್ದ ಬಿಜೆಪಿ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಮೈಸೂರಿನ ಬಾಲಕಿ ಅತ್ಯಾಚಾರ ಪ್ರಕರಣ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಬಲೂನು ಮಾರುವ ಕುಟುಂಬದ ಅಮಾಯಕ ಬಾಲಕಿಯನ್ನು ದುಷ್ಕರ್ಮಿ ಅತ್ಯಾಚಾರ ಮಾಡಿದ್ದಾನೆ, ಕೊಲೆ ಮಾಡಿದ್ದಾನೆ.

ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು. ಯಾವ ಪುರುಷಾರ್ಥಕ್ಕೆ ದಸರಾ‌ ಮೆರವಣಿಗೆ ಮಾಡಿದ್ರು ಎಂದು ಪ್ರಶ್ನಿಸಿದ ಅವರು, ಇದೀಗ ಇಲ್ಲಿ ರೇಪ್ ನ ಮೆರವಣಿಗೆ ಸಾಗಿದೆ. ಮೈಸೂರಲ್ಲಿ, ಅವರ ಜಿಲ್ಲೆಯಲ್ಲೇ ಬಾಲಕಿ ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನೈಟ್ ಬೀಟ್ ಪೊಲೀಸರು ಏನ್ ಮಾಡ್ತಿದ್ರು ? ಪೋಸ್ಟಿಂಗ್ ಗಾಗಿ ಕಾಸು ಕಲೆಕ್ಷನ್‌ಗೆ ಹೋಗಿದ್ರಾ ಪೊಲೀಸರು ? ಸಿಎಂ ತವರು ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣ ನಡೆದಿದ್ದರೂ ಸಿಎಂ, ಡಿಸಿಎಂ ಚಕಾರ ಇಲ್ಲ ಕಾನೂನು ಸುವ್ಯವಸ್ಥೆ ಕಾಪಾಡದೇ ಸರ್ಕಾರ ಕೈಚೆಲ್ಲಿದೆ. ಈ ಘಟನೆ ಸಿದ್ದರಾಮಯ್ಯ ಗೆ ಕಪ್ಪು ಚುಕ್ಕೆ ಎಂದಿದ್ದಾರೆ.

ಮೈಸೂರು(Mysore) ಘಟನೆ ಕಾಂಗ್ರೆಸ್ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದೆ. ಸರ್ಕಾರ ಕ್ರಮ ಕೈಗೊಳ್ಳದೇ ನಿದ್ದೆಯಲ್ಲಿದೆ, ಇದು ಅವಮಾನವೀಯ ಘಟ‌ನೆ. ಪೊಲೀಸರು ದಸರಾ ಗುಂಗಲ್ಲೇ ಇದ್ದಿದ್ರೆ ಅಲರ್ಟ್ ಆಗಿರ್ಬೇಕಿತ್ತು ಎಂದಿದ್ದಾರೆ.

ಇಡೀ ಮೈಸೂರು ವಿದ್ಯುದ್ದೀಪಾಲಂಕಾರದ ಬೆಳಕಿನಿಂದ ಝಗಮಗಿಸ್ತಿತ್ತು. ನಾಲ್ಕೈದು ಜಿಲ್ಲೆಗಳ ಪೊಲೀಸರು ಭದ್ರತೆಗಿದ್ರು. ಇಷ್ಟಿದ್ರೂ ಬಾಲಕಿ ರೇಪ್ ತಡೆಯಲು ಆಗಿಲ್ಲ. ದೆಹಲಿಯಲ್ಲಿ ಮೋದಿ ಮನೆ ಮುಂದೆ ರಸ್ತೆಗುಂಡಿ ಪತ್ತೆ ಹಚ್ಚೋರು ಬಾಲಕಿ ಅತ್ಯಾಚಾರ ತಡೆಯಲು ಆಗಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಮೈಸೂರು ಪೊಲೀಸರಿಗೆ ಯತೀಂದ್ರ ಕಾಟ ಎಂದು ಪ್ರತಾಪ್ ಸಿಂಹ ಆರೋಪ ಮಾಡಿರುವ ಬೆನ್ನಲ್ಲೇ ಪ್ರತಾಪ್‌ ಸಿಂಹ ಹೇಳಿಕೆಯನ್ನು ಅಶೋಕ್‌ ಸಮರ್ಥಿಸಿಕೊಂಡಿದ್ದಾರೆ. ಪ್ರತಾಪ್ ಸಿಂಹ ಸತ್ಯ ಹೇಳಿದ್ದಾರೆ. ಪೋಸ್ಟಿಂಗ್ ವ್ಯವಹಾರ ಸರ್ಕಾರದಲ್ಲಿ ನಡೀತಿದೆ. ಪೊಲೀಸರು ಫೀಲ್ಡಿನಲ್ಲಿಲ್ಲ, ಪೋಸ್ಟಿಂಗ್‌ಗಾಗಿ ಶಾಸಕರು, ಸಚಿವರ ಮನೆ ಮುಂದೆ ಇದ್ದಾರೆ ಎಂದಿದ್ದಾರೆ.

Also Read: Hassan News : ಹಾಸನಾಂಬೆ ದರ್ಶನ, ಕರ್ತವ್ಯಲೋಪ : ಇಬ್ಬರು ವಾರ್ಡನ್ ಅಮಾನತು

ಸಿಎಂ ಔತಣಕೂಟಕ್ಕೆ ಅಶೋಕ್ ಲೇವಡಿ

ಬಿಹಾರಕ್ಕೆ ಯಾರ್ಯಾರು ಎಷ್ಟೆಷ್ಟು ಕೊಡಬೇಕು ಅಂತ ನಿರ್ಧರಿಸಲು ಸಿಎಂ ಸಿದ್ದರಾಮಯ್ಯ ಸಚಿವರ ಔತಣಕೂಟ ಕರೆದಿದ್ದಾರೆ.ವೀರೇಂದ್ರ ಪಪ್ಪಿ ಚಿನ್ನದ ಲಾಲಿ ಪಪ್ ಹಿಡ್ಕೊಂಡು ಕೂತಿದ್ದ. ಅವನೂ ಚಿನ್ನ ಬಿಹಾರಕ್ಕೆ ಕಳಿಸಲು ಮುಂದಾಗಿದ್ದ, ಹಿಡಿದು ಹಾಕಿದ್ದಾರೆ. ರಾಜ್ಯದ ಚಿನ್ನವೆಲ್ಲ ಬಿಹಾರಕ್ಕೆ ಕಳಿಸಲು ಸಂಚು ನಡೀತಿದೆ. ಕಾಂಗ್ರೆಸ್‌ಗೆ ಕರ್ನಾಟಕ ಬಿಹಾರ ಚುನಾವಣೆಯ ಎಟಿಎಂ ಆಗಿದೆ ಎಂದು ಆರೋಪಿಸಿದ್ದಾರೆ.

Also Read: ಸಿಎಂ ಆತುರದಲ್ಲಿ ನಾನಿಲ್ಲ, ಭಗವಂತ ಯಾವಾಗ ಕೊಡ್ತಾನೋ ಕೊಡಲಿ : ಮಾಧ್ಯಮಗಳ ಮೇಲೆ ಗರಂ ಆಗಿದ್ಯಾಕೆ ಡಿಕೆಶಿ

ತಾಕತ್ತು ಇದ್ರೆ ಬಿಹಾರ ಚುನಾವಣೆ ಬಹಿಷ್ಕರಿಸಿ

ಕಾಂಗ್ರೆಸ್‌ಗೆ ಗ್ರೇಟರ್‌ ಬೆಂಗಳೂರು ಗೆಲ್ಲೋದಿಲ್ಲ ಅನ್ನೋ ಭಯ ಇದೆ. ನಾವು ಕೋರ್ಟ್ ಆದೇಶಕ್ಕೆ ಕಾಯ್ತಿದ್ದೇವೆ. ನ್ಯಾಯಾಲಯ ಏನು ಹೇಳುತ್ತೋ ಅದೇ ಪಾಲಿಸುತ್ತೇವೆ. ನಾವು ಜಿಬಿಎ ಚುನಾವಣೆ ಬಹಿಷ್ಕರಿಸುವ ಡಿಕೆಶಿ ಸವಾಲು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.

ಡಿಕೆ ಶಿವಕುಮಾರ್‌ ಅವರಿಗೆ ತಾಕತ್ತು ಇದ್ರೆ, ಕಾಂಗ್ರೆಸ್‌ ಅವರು ಬಿಹಾರ ಚುನಾವಣೆ ಬಹಿಷ್ಕರಿಸಲಿ. ವೋಟ್ ಚೋರಿ ಆರೋಪ ಮಾಡಿದ್ದಾರಲ್ಲ, ಹಾಗಿದ್ದರೆ ಕಾಂಗ್ರೆಸ್ ನವ್ರು ಬಿಹಾರ ಚುನಾವಣೆ ಬಹಿಷ್ಕರಿಸಲಿ. ಬಿಹಾರ ಚುನಾವಣೆ ಬಹಿಷ್ಕರಿಸಿದರೆ ನಾವು ಜಿಬಿಎ ಚುನಾವಣೆ ಬಹಿಷ್ಕರಿಸ್ತೇವೆ. ಇದು ಡಿಕೆಶಿ ಸವಾಲಿಗೆ ನನ್ನ ಸವಾಲು ಎಂದಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories