ಪ್ರೇಯಸಿಯೊಂದಿಗೆ ಲಾಡ್ಜ್​​ನಲ್ಲಿದ್ದ ಪುತ್ತೂರಿನ ಯುವಕ ನಿಗೂಢ ಸಾವು

ಬೆಂಗಳೂರು: mysterious death: ಪ್ರೇಯಸಿಯೊಂದಿಗೆ ಬೆಂಗಳೂರಿನ ಲಾಡ್ಜ್​ನಲ್ಲಿ 8 ದಿನಗಳಿಂದ ಪ್ರೇಯಸಿಯೊಂದಿಗೆ ತಂಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಯುವಕನನ್ನು 20 ವರ್ಷದ ತಕ್ಷತ್​ ಎಂದು ಗುರುತಿಸಲಾಗಿದೆ. 8 ದಿನಗಳ ಕಾಲ ಪ್ರೇಯಸಿಯೊಂದಿಗೆ ಬೆಂಗಳೂರಿನ ಮmಡಿವಾಳದ ಗ್ರ್ಯಾಂಡ್ ಚಾಯ್ಸ್ ಎಂಬ ಲಾಡ್ಜ್​​ನಲ್ಲಿ ತಂಗಿದ್ದ ತಕ್ಷಿತ್​ 9ನೇ ದಿನ ಶವವಾಗಿ ಪತ್ತೆಯಾಗಿದ್ದಾನೆ.

ಮೈಸೂರಿಗೆ ವ್ಯಾಸಂಗ ಮಾಡಲು ತೆರಳುತ್ತೇನೆ ಎಂದು ಮನೆಯವರನ್ನು ನಂಬಿಸಿದ್ದ ತಕ್ಷತ್​​ ವಿರಾಜಪೇಟೆಯ ಯುವತಿಯೊಂದಿಗೆ ಬೆಂಗಳೂರಿನ ಲಾಡ್ಜ್​ಗೆ ಆಗಮಿಸಿದ್ದ ಎನ್ನಲಾಗಿದೆ. 8 ದಿನಗಳ ಕಾಲವೂ ಇಬ್ಬರೂ ಸ್ವಿಗ್ಗಿಯಿಂದ ಫುಡ್​ ತರಿಸಿಕೊಂಡು ತಿನ್ನುತ್ತಿದ್ದರು ಎನ್ನಲಾಗಿದೆ.

Also Read: ಬೆಂಗಳೂರಿನಿಂದ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಅಗ್ನಿ ದುರಂತ

ಊಟ ತಿಂದ ಬಳಿಕ ಇಬ್ಬರಿಗೂ ಫುಡ್​ ಪಾಯಿಸನ್​ ಆಗಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರೂ ಮಾತ್ರೆ ತರಿಸಿಕೊಂಡು ತಿಂದಿದ್ದು ಮಾತ್ರೆ ಸೇವಿಸಿದ ಬಳಿಕ ಯುವತಿ ಲಾಡ್ಜ್​​ನಿಂದ ಹೊರಗೆ ತೆರಳಿದ್ದರೆ ಈತ ಲಾಡ್ಜ್​ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಯುವಕ ಹಾಗೂ ಯುವತಿ ಇಬ್ಬರೂ ಪಣಂಬೂರಿನ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದರು ಎನ್ನಲಾಗಿದೆ. ಅಕ್ಟೋಬರ್​ 9ರಂದು ಲಾಡ್ಜ್​ನಲ್ಲಿ ಚೆಕ್​ ಇನ್​ ಆಗಿದ್ದ ಈ ಜೋಡಿ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡುತ್ತಿದ್ದರು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೇಶವ ಕೃಪಾ ಮುಂದೆ ಎನ್‌ಎಸ್‌ಯುಐ, ಯೂತ್‌ ಕಾಂಗ್ರೆಸ್‌ ಪ್ರತಿಭಟನೆ : ಬಿಜೆಪಿ ನಿಯೋಗದಿಂದ ಆಯುಕ್ತರಿಗೆ ದೂರು

ಎಷ್ಟೇ ಬಾಗಿಲು ಬಡಿದರೂ ಯಾರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಲಾಡ್ಜ್​ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ತಕ್ಷತ್​ ಶವವಾಗಿ ಮಲಗಿರುವುದು ಬೆಳಕಿಗೆ ಬಂದಿದೆ. ಬಳಿಕ ಲಾಡ್ಜ್​ ಸಿಬ್ಬಂದಿ ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories