‘108’ ಆಂಬುಲೆನ್ಸ್​ ಸಿಬ್ಬಂದಿಗೆ ಸಿಹಿ ಸುದ್ದಿ : ಬೋನಸ್​ ನೀಡಲು ರಾಜ್ಯ ಸರ್ಕಾರ ಸಮ್ಮತಿ

ರಾಜ್ಯದಲ್ಲಿ 108 ಆರೋಗ್ಯ ಕವಚ ಸೇವೆಯ ಅಡಿಯಲ್ಲಿ ನೇಮಕಗೊಳ್ಳಲಿರುವ ಇಎಂಟಿ ಹಾಗೂ ಪೈಲೆಟ್ಗಳಿಗೆ ಮೂಲ ವೇತನವನ್ನು ಈಗಾಗಲೇ ಇರುವ ಕನಿಷ್ಟ ವೇತನ ದರದಲ್ಲಿ ಅಥವಾ ಹಿಂದಿನ ಸೇವಾ ಅನುಭವ ಬೋನಸ್ಗಳನ್ನು ನೀಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದಲ್ಲಿ ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಭವಿಷ್ಯದಲ್ಲಿ ಆರೋಗ್ಯ ಕವಚ ಸೇವೆ ರಾಜ್ಯದ ಜನತೆಗೆ ಮತ್ತಷ್ಟು ಗುಣಮಟ್ಟದ ಆಧಾರದಲ್ಲಿ ದೊರಕುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಾಲೆಗಳಲ್ಲಿ ಇನ್ಮುಂದೆ ಎಐ ಆಧಾರಿತ ಹಾಜರಾತಿ ವ್ಯವಸ್ಥೆ : ಫೇಸ್​ ರಿಕಗ್ನೈಶನ್​ ವ್ಯವಸ್ಥೆ ಕಡ್ಡಾಯ

108 – ಆರೋಗ್ಯ ಕವಚ ಸೇವೆಯ ಒಡಂಬಡಿಕೆಯ ಪಾಲುದಾರರಾದ GVK-EMRI ಸಂಸ್ಥೆಯಿಂದ ಹಿಂಪಡೆದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲು ಸೂಚಿಸಲಾಗಿದೆ. ರಾಜ್ಯ ಮಟ್ಟದಲ್ಲಿ 112 NG ERSS ತಂತ್ರಾಂಶವನ್ನು ಬಳಸಿಕೊಂಡು ಕಮಾಂಡ್ ಅಂಡ್‌ ಕಂಟ್ರೋಲ್ ಸೆಂಟರ್ ಅನ್ನು ಸ್ಥಾಪಿಸಲು ಹಾಗೂ ಜಿಲ್ಲಾಡಳಿತದ ಮುಖಾಂತರ ಆಂಬ್ಯುಲೆನ್ಸ್‌ಗಳ ವಿಕೇಂದ್ರಿಕೃತವಾಗಿ ನಿರ್ವಹಣೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories