ಅಂಕೋಲ : ಲಾರಿ ಪಲ್ಟಿ, ಅಡುಗೆ ಎಣ್ಣೆ ರಸ್ತೆ ಪಾಲು

ಉತ್ತರಕನ್ನಡ (Uttara kannada ) : ಅಡುಗೆ ಎಣ್ಣೆ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ನೂರಾರು ಲೀಟರ್ ಎಣ್ಣೆ ರಸ್ತೆ ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಡೆದಿದೆ.
ಪ್ರಿಯಾ ಆಯಿಲ್ ಕಂಪೆನಿಗೆ ಸೇರಿದ ಗೂಡ್ಸ್ ಲಾರಿಯಲ್ಲಿ ಅಡುಗೆ ಎಣ್ಣೆಯನ್ನು ಹುಬ್ಬಳ್ಳಿಯಿಂದ ಗೋವಾಕ್ಕೆ ಸಾಗಾಟ ಮಾಡಲಾಗುತ್ತಿತ್ತು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ತಾಲೂಕಿನ ಹಾರವಾಡದ ಬಳಿಗೆ ಬರುತ್ತಿದ್ದಂತೆಯೇ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಇದರಿಂದಾಗಿ ಲಾರಿಯಲ್ಲಿದ್ದ ನೂರಾರು ಲೀಟರ್ ಅಡುಗೆ ಎಣ್ಣೆ ರಸ್ತೆಯ ತುಂಬೆಲ್ಲಾ ಚೆಲ್ಲಿದ್ದರಿಂದಾಗಿ ಕೆಲಕಾಲ ಸಂಚಾರಕ್ಕೆ ತೊಡಕಾಯ್ತು.
ಸ್ಥಳಕ್ಕೆ ಅಂಕೋಲ ಠಾಣೆಯ ಪೊಲೀಸರು ಭೇಟಿ ನೀಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಕೆಲವು ಸಮಯದ ನಂತರ ವಾಹನ ಸಂಚಾರ ಸುಗಮವಾಗಿದೆ.
Uttara kannada Ankola lorry full of cooking oil overturned



