Caste survey: ಇನ್ಮುಂದೆ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಜಾತಿ ಸಮೀಕ್ಷೆ : ಜಿಬಿಎ ಹೊಸ ಆದೇಶ
ಬೆಂಗಳೂರು: Caste Survey: ಕರ್ನಾಟಕ ಸರಕಾರ ನಡೆಸುತ್ತಿರುವ ಜಾತಿ ಸಮೀಕ್ಷೆ ಇನ್ಮೂ ಪೂರ್ಣಗೊಂಡಿಲ್ಲ. ಈ ನಡುವಲ್ಲೇ ಹೊಸ ಆದೇಶ ಹೊರಬಿದ್ದಿದೆ. ಇನ್ಮುಂದೆ ಸಂಜೆ 6 ರಿಂದ 9 ಗಂಟೆಯ ಒಳಗಾಗಿ ಸರ್ವೆ ಕಾರ್ಯ ಪೂರ್ಣಗೊಳಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ಸಾರ್ವಜನಿಕರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ಸಮೀಕ್ಷೆಯ ಸಮಯದಲ್ಲಿ ಬದಲಾವಣೆಯನ್ನು ತರಲು ತೀರ್ಮಾನಿಸಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಗಲು ಹೊತ್ತು ಸಾರ್ವಜನಿಕರು ಉದ್ಯೋಗ ಹಾಗೂ ವ್ಯವಹಾರದಲ್ಲಿ ಮಗ್ನರಾಗುತ್ತಿರುತ್ರಾರೆ. ಹೀಗಾಗಿ ಕೆಲಸಕ್ಕೆ ತೆರಳುವವರಿಗೆ ಸಮೀಕ್ಷೆಯಲ್ಲಿ ಭಾಗಿಯಾಗುತ್ತಿಲ್ಲ. ಇದೇ ಕಾರಣದಿಂದಲೇ ಸಮೀಕ್ಷೆಯ ಅವಧಿಯಲ್ಲಿ ಬದಲಾಣೆ ತರಲಾಗಿದೆ.
Also Read: ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗುವಂತಿಲ್ಲ: ರಾಜ್ಯ ಸರ್ಕಾರದಿಂದ ಖಡಕ್ ಎಚ್ಚರಿಕೆ
ಬೆಂಗಳೂರಿನಲ್ಲಿ ಇನ್ಮುಂದೆ ಸಂಜೆ 6 – 9 ರವರೆಗೆ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯ ತಡವಾಗಿ ಆರಂಭವಾಗಿತ್ತು. ಹೊತೆಗೆ ಸಾರ್ವಜನಿಕರಿಂದ ಸ್ಪಂದನೆಯೂ ನೀರಸವಾಗಿತ್ತು. ನಿಗದಿತ ಗಡುವಿನೊಳಗೆ ಸಮೀಕ್ಷೆ ಪೂರ್ಣಗೊಳ್ಳುವುದೇ ಅನುಮಾನವಾಗಿದೆ.
ಈ ಹಿನ್ನೆಲೆಯಲ್ಲಿ ಟಾರ್ಗೆಟ್ ಪೂರ್ಣಗೊಳಿಸಲು ಅಧಿಕಾರಿಗಳು ಸಮೀಕ್ಷೆಯ ಸಮಯದಲ್ಲಿಯೇ ಬದಲಾವಣೆ ತರಲಾಗಿದೆ. ಆದರೆ ಶಿಕ್ಷಕರು, ಸಿಬ್ಬಂದಿಗಳು ಹಗಲಿನಲ್ಲಿ ಶಾಲೆ, ಕಚೇರಿ ಕೆಲಸ ನಿರ್ವಹಿಸಿ ಸಂಜೆಯಿಂದ ರಾತ್ರಿಯವರೆಗೆ ಸಮೀಕ್ಷೆ ನಡೆಸೋದಕ್ಕೆ ಸಾಧ್ಯವೇ ?
Also Read: ಎಸ್ಎಸ್ಎಲ್ಸಿ , ಪಿಯುಸಿ ವಿದ್ಯಾರ್ಥಿಗಳಿಗೆ ಶುಭಸುದ್ದಿ : ಪಾಸಿಂಗ್ ಮಾರ್ಕ್ಸ್ ಕಡಿತ



