ಇನ್ಮುಂದೆ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಜಾತಿ ಸಮೀಕ್ಷೆ : ಜಿಬಿಎ ಹೊಸ ಆದೇಶ

Karnataka: ಕಳೆದ ವರ್ಷ ಸುರಿದ ಮಳೆಗೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ತೀವ್ರ ಅನಾನೂಲತೆ ಉಂಟಾಗಿತ್ತು.. ವಿಶೇಷವಾಗಿ ರಸ್ತೆಗಳಂತೂ ಕಂಪ್ಲೀಟ್ ಎದ್ದು ಬಂದಿತ್ತು.
ಜನರು ಸ್ಥಳೀಯ ಶಾಸಕರಿಗೆ ರಸ್ತೆಯ ಪರಿಸ್ಥಿತಿಯ ಬಗ್ಗೆ ದೂರು ಕೊಟ್ಟಾಗ ಅನುದಾನ ಸಿಗ್ತಿಲ್ಲ ಎಂಬ ಉತ್ತರ ನೀಡ್ತಿದ್ರು.ಕಡೆಗೂ ಸರ್ಕಾರ ಕಳೆದ ನವಂಬರ್ ನಲ್ಲಿ ಗ್ರಾಮೀಣ ಪ್ರದೇಶದ ತೊಂದರೆಯನ್ನು ಮನಗಂಡು 189 ಎಂ.ಎಲ್ ಎ ಕ್ಷೇತ್ರಗಳಿಗೆ 10 ಕೋಟಿ ಅನುದಾನ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು.

ಪ್ರಕೃತಿ ವಿಕೋಪ ಪರಿಹಾರ ಫಂಡ್ ನಿಂದ ರಸ್ತೆ ದುರಸ್ಥಿಗೆ ನೆರವು ಮತ್ತು 189 ಶಾಸಕರ ಕ್ಷೇತ್ರಕ್ಕೆ 10 ಕೋಟಿಯಂತೆ ಅನುದಾನದನ ಆಶ್ವಾಸನೆ ಸಿಕ್ಕಿತ್ತು. ಇದೇ ಅನುದಾನದಲ್ಲಿ ರಸ್ತೆ ರಿಪೇರಿ,ಚರಂಡಿ ವ್ಯವಸ್ಥೆಯ ನಿರ್ಮಾಣಕ್ಕಾಗಿ ಹಣಕಾಸು ಇಲಾಖೆ 1890 ಕೋಟಿ ರೂ ಮಂಜೂರಾತಿಯ ಆದೇಶ ನೀಡಿತ್ತು.

Also Read: ಆರ್​ಎಸ್​ಎಸ್​ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗುವಂತಿಲ್ಲ: ರಾಜ್ಯ ಸರ್ಕಾರದಿಂದ ಖಡಕ್​ ಎಚ್ಚರಿಕೆ

ಆದ್ರೆ ಸರ್ಕಾರ ಇದುವರೆಗೆ ತನ್ನ ಭರವಸೆಯನ್ನು ಈಡೇರಿಸಿಲ್ಲ.ಭರವಸೆ ಕೊಟ್ಟು ಒಂಬತ್ತು ತಿಂಗಳಾಗುತ್ತಾ ಬಂದರೂ ಇದುವರೆಗೆ ಪಂಚಾಯತ್ ರಾಜ್ ಇಲಾಖೆಗೆ ಹಣ ಬಂದಿಲ್ಲ.ಇದ್ರಿಂದಾಗಿ ಶಾಸಕರಿಗೆ ಕೊಟ್ಟ ಭರವಸೆಯನ್ನು ಸರ್ಕಾರ ಮುರಿಯುತ್ತಾ ಎನ್ನುವ ಸಂಶಯ ಶುರುವಾಗಿದೆ.ಈಗಾಗ್ಲೇ ಈ ಬಗ್ಗೆ 189 ಕ್ಷೇತ್ರದ ಶಾಸಕರು ಮಾತಾಡುವುದಕ್ಕೆ ಶುರುಮಾಡಿದ್ದು ಸರ್ಕಾರದ ಅನುದಾನ
ರಿಲೀಸ್ ಆಗೋದ್ರ ಬಗ್ಗೆ ಸಂಶಯ ವ್ಯಕ್ತಪಡಿಸ್ತಿದ್ದಾರೆ.

ಕಾಮಗಾರಿಯ ವಿಷಯಕ್ಕೆ ಬರೋದಾದ್ರೆ ಹಣಕಾಸಿನ ವ್ಯವಸ್ಥೆಯ ಬಗ್ಗೆ ಗೊಂದಲಗಳಿರೋದ್ರಿಂದ ಯಾವುದೇ ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸೋದಿಕ್ಕೆ ಬರ್ತಿಲ್ಲ.ಹೀಗಾಗಿ ರಸ್ತೆ ಕಾಮಗಾರಿ ಸದ್ಯಕ್ಕೆ ಆರಂಭವಾಗುವ ಯಾವುದೇ ಸೂಚನೆ ಸಿಗ್ತಿಲ್ಲ.

ಸರ್ಕಾರ ಅನುದಾನ ನೀಡುವ ಭರವಸೆ ಕೊಟ್ಟ 189 ಕ್ಷೇತ್ರಗಳ ಶಾಸಕರಲ್ಲಿ ಆಡಳಿತ ಪಕ್ಷದ ಶಾಸಕರ ಸಂಖ್ಯೆ ಹೆಚ್ಚಿದೆ.ಎಲ್ಲಾ ಪಕ್ಷದವರು ರಾಜಕೀಯ ಮರೆತು ಅನುದಾನಕ್ಕೆ ಮನವಿ ಕೊಟ್ಟ ಕಾರಣದಿಂದ ಕಳೆದ ನವಂಬರ್ ನಲ್ಲಿ 10 ಕೋಟಿ ಅನುದಾನದ ಭರವಸೆಯನ್ನು ಸರ್ಕಾರ ಕೊಟ್ಟಿತ್ತು.

ಅನುದಾನ ಬಂದಲ್ಲಿ ಕೆಟ್ಟುಹೋಗಿರುವ ರಸ್ತೆಗಳನ್ನು ಸರಿಪಡಿಸಿ ಜನರ ಟೀಕೆಗಳಿಂದ ಒಂದಷ್ಟೂ ತಪ್ಪಿಸಿಕೊಳ್ಳಬಹುದು ಎಂದು ಶಾಸಕರು ಅಂದ್ಕೊಂಡಿದ್ರು.ಆದ್ರೇ ಸರ್ಕಾರದಿಂದ ಈ ಅನುದಾನದ ರಿಲೀಸಾಗೋದ್ರ ಮಾಹಿತಿಯೇ ಸಿಗ್ತಿಲ್ಲ.

ಈ ಬಗ್ಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಗ್ರಾಮೀಣ ಭಾಗದ ಶಾಸಕರಿಗೆ 10 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದ ಸರ್ಕಾರ ಇನ್ನೂ ಭರವಸೆ ಈಡೇರಿಸಿಲ್ಲ.

ಸರ್ಕಾರ ಅನುದಾನದ ವಿಚಾರದಲ್ಲಿ ತಾರತಮ್ಯದ ಜೊತೆಗೆ ಗೊಂದಲ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.ಅನುದಾನ ಬಿಡುಗಡೆ ಆಗದೇ ಇರೋದು ಆಡಳಿತ ಪಕ್ಷದ ಶಾಸಕರಿಗೂ ಬೇಸರ ಮೂಡಿಸಿದೆ..

Also Read: ಎಸ್​ಎಸ್​ಎಲ್​ಸಿ , ಪಿಯುಸಿ ವಿದ್ಯಾರ್ಥಿಗಳಿಗೆ ಶುಭಸುದ್ದಿ : ಪಾಸಿಂಗ್​ ಮಾರ್ಕ್ಸ್​ ಕಡಿತ

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories