ಯಕ್ಷಗಾನದ ವೇಷ ಕಳಚುತ್ತಿದ್ದಾಗ ಹೃದಯಾಘಾತ : ಮಂದಾರ್ತಿ ಮೇಳದ ಕಲಾವಿದ ಈಶ್ವರ ಗೌಡ ಸಾವು

ಕುಂದಾಪುರ : ಯಕ್ಷಗಾನ ಪೂರ್ಣಗೊಳಿಸಿ ವೇಷ ಕಳಚುತ್ತಿದ್ದ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಹೃದಯಾಘಾತದಿಂದ ನಿಧನರಾದ ಘಟನೆಯು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸೌಡ ಎಂಬಲ್ಲಿ ತಡರಾತ್ರಿ ಸಂಭವಿಸಿದೆ. ಮಂದಾರ್ತಿ ಮೇಳದ ಕಲಾವಿದರಾದ ಈಶ್ವರ ಗೌಡ (Mandarthi Yakshagana Artist Eshwar Gowda Death) ಹೃದಯಾಘಾತದಿಂದ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಸೌಡದಲ್ಲಿ ಆಯೋಜಿಸಲಾದ ಯಕ್ಷಗಾನ ಮೇಳದಲ್ಲಿ ಮಂದಾರ್ತಿ 2ನೇ ಮೇಳದಲ್ಲಿ ಮೃತ ಈಶ್ವರ ಗೌಡ ಮಹಿಷಾಸುರನ ಪಾತ್ರದಲ್ಲಿ ಅಬ್ಬರಿಸಿದ್ದರು ಎನ್ನಲಾಗಿದೆ. ಪಾತ್ರ ಮುಗಿದ ಬಳಿಕ ವೇಷ ಕಳಚುತ್ತಿರುವಾಗ ಈಶ್ವರ ಗೌಡರಿಗೆ ಹೃದಯಾಘಾತ ಸಂಭವಿಸಿದೆ. ಅಸ್ವಸ್ಥರಾದ ಈಶ್ವರಗೌಡರನ್ನು ಆಸ್ಪತ್ರೆ ದಾಖಲಿಸುವ ವೇಳೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಯಕ್ಷಗಾನಕ್ಕೆ ಅಪಚಾರ, ಬಿಳಿಮಲೆ ವಜಾಮಾಡಿ : ಮಾಜಿ ಸಚಿವ ಸುನಿಲ್‌ ಕುಮಾರ್‌ ಆಗ್ರಹ

ಇದೇ ಮೇಳದಲ್ಲಿ ಈಶ್ವರ ಗೌಡ ತಂದೆ ಕೂಡ ವೇಷಧಾರಿಯಾಗಿದ್ದರು ಎನ್ನಲಾಗಿದೆ.ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ಅವರು ಮಹಿಷಾಸುರನ ಪಾತ್ರ ನಿರ್ವಹಿಸಿದ್ದರು ಎನ್ನಲಾಗಿದೆ. ಆದರೆ ವಿಧಿಯಾಟಕ್ಕೆ ಈಶ್ವರ ಗೌಡ ತಮ್ಮ ವೇಷ ಕಳಚುವ ಮುನ್ನವೇ ಅಂತಿಮ ಯಾತ್ರೆ ಮುಗಿಸಿದ್ದಾರೆ. ಯಕ್ಷಗಾನ ಕಲಾವಿದ ಈಶ್ವರ ಗೌಡ ನಿಧನಕ್ಕೆ ಯಕ್ಷಗಾನ ರಂಗ ಕಂಬನಿ ಮಿಡಿದಿದೆ.

ಇದನ್ನೂ ಓದಿ : ಯಕ್ಷಗಾನ ಕಲಾವಿದರ ಬಗ್ಗೆ ನಾಲಗೆ ಹರಿಬಿಟ್ಟಿದ್ದ ಬಿಳಿಮಲೆ ರಾಜೀನಾಮೆ

Mandarthi Yakshagana Artist Eshwar Gowda Death Heart attack

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories