ಪರಪ್ಪನ ಅಗ್ರಹಾರ : ಹೊರಗೆ ನೆಟ್‌ವರ್ಕ್ ಸಮಸ್ಯೆ, ಕೈದಿಗಳು ಮೊಬೈಲ್ ಬಳಸ್ತಾರೆ : ಆರ್.ಅಶೋಕ್ ಆರೋಪ
ಬೆಂಗಳೂರು: Network problem: ಪರಪ್ಪನ ಅಗ್ರಹಾರ ಸುತ್ತಮುತ್ತಲೂ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಆದರೆ ಜೈಲಿನ ಒಳಗೆ ಖೈದಿಗಳೇ ಮೊಬೈಲ್ ಬಳಸ್ತಾರೆ. ಇದು ಸರಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಪರಪ್ಪನ ಅಗ್ರಹಾರದ ಒಳಗೆ ಮೊಬೈಲ್ ನೆಟ್‌ವರ್ಕ್ ಇರುತ್ತೆ. ಆದರೆ ಹೊರಗಡೆ ಸುತ್ತಮುತ್ತ ಎರಡು ಕಿಲೋ ಮೀಟರ್ ಮೊಬೈಲ್ ನೆಟ್‌ವರ್ಕ್ ಇರೋದಿಲ್ಲ. ಇದನ್ನು ಅಧಿಕಾರಿಗಳೇ ಹೇಳಿದ್ದಾರೆ ಎಂದಿದ್ದಾರೆ.
ಮೊನ್ನೆ ರೌಡಿಯೊಬ್ಬ ಜನ್ಮದಿನ ಆಚರಿಸಿಕೊಂಡ. ಖೈದಿಗಳು ಗಾಂಜಾ ಬಳಸ್ತಾರೆ, ಜೈಲಿನಲ್ಲಿ ಎಲ್ಲವೂ ನಡೆಯುತ್ತೆ. ಇದು ಸರಕಾಕ್ಕೆ ಹಿಡಿದ ಕನ್ನಡಿ ಎಂದು ಆರೋಪಿಸಿದ್ದಾರೆ.
ಸಿಎಂ ಆಗುವ ಆತುರವಿಲ್ಲ: ಡಿಕೆಶಿಗೆ ಟಾಂಗ್
ನನಗೆ ಸಿಎಂ ಆಗುವ ಆತುರ ಇಲ್ಲ. ನನ್ನ ದಾರಿ ಸ್ಪಷ್ಟ ಇದೆ ಎಂಬ ಡಿಕೆ ಶಿವಕುಮಾರ್(DK Shivakumar) ಅವರ ಹೇಳಿಕೆ ಆರ್.ಅಶೋಕ್ ಟಾಂಗ್ ಕೊಟ್ಟಿದ್ದಾರೆ. ಕ್ರಾಂತಿ ಆಗುತ್ತೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಸ್ಪಷ್ಟ ಗುರಿ, ದಿಟ್ಟ ನಿರ್ಧಾರ, ನಿಖರತೆ ಇದೆ. ಅವರಿಗೆ ಗುರಿ ಮುಟ್ಟೋದಿಕ್ಕೆ ಕ್ಷಣಗಣನೆ ನಡೀತಿದೆ. ಸ್ಯಾಟಲೈಟ್ ಹಾರಿಸಲು ಕ್ಷಣಗಣನೆ ಶುರುವಾಗಿದೆ. ರಾಮನಗರ ಶಾಸಕ ನೊಟೀಸ್ ಪಡೆದ ಮೇಲೂ ಡಿಕೆಶಿ ಪರವಾಗಿ ಮಾತಾಡಿದ್ದಾರೆ. ಮಗು ಚಿವುಟೋದೂ, ಮಗು ತೂಗೋದು ಎರಡನ್ನೂ ಡಿಕೆಶಿ ಮಾಡ್ತಿದ್ದಾರೆ ಎಂದಿದ್ದಾರೆ.
ಡಿಕೆಶಿ ತಮ್ಮ ಗುರಿಯನ್ನು ಸ್ಪಷ್ಟವಾಗಿ ಮುಟ್ಟುತ್ತಾರೆ. ಕಾಂಗ್ರೆಸ್‌ನಲ್ಲಿ ಕ್ರಾಂತಿ ಆಗೋದು ಖಚಿತ. ಡಿಕೆಶಿ ಪರ ಅವರ ಬಣದವ್ರು ಮಾತಾಡ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಔತಣ ಕೂಟ ಕರೆದಿದ್ದಾರೆ. ರಾಜ್ಯದಲ್ಲಿ ತರಾತುರಿಯಲ್ಲಿ ಸಮೀಕ್ಷೆ ನಡೆಸ್ತಿದ್ದಾರೆ. ಎಲ್ಲವೂ ಕ್ರಾಂತಿಗೆ ಪೂರಕವಾಗಿ ನಡೀತಿದೆ. ಕಾಂಗ್ರೆಸ್ ಗೆ ಗ್ರಹಣ ಹಿಡಿದಿದೆ. ಸಿದ್ದರಾಮಯ್ಯ ಗೆ ಗ್ರಹಣದ ಕತ್ತಲು, ಡಿಕೆಶಿಗೆ ಬೆಳಕು ಶುರುವಾಗಿದೆ
Also Read: ಮೈಸೂರು ಬಾಲಕಿ ಅತ್ಯಾಚಾರ ಪ್ರಕರಣ : ಸರಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ
ಸಿಎಂ ಡಿನ್ನರ್ ಮೀಟಿಂಗ್‌ಗೆ ಅಶೋಕ್ ಟಕ್ಕರ್
ಬಿಹಾರ ಚುನಾವಣೆಗೆ ಫಂಡ್ ಸಂಗ್ರಹಿಸಲು ಸಿಎಂ ಸಚಿವರ ಔತಣ ಕೂಟ ಕರೆದಿದ್ದಾರೆ. 300 ಕೋಟಿಯಷ್ಟು ವಿರೇಂದ್ರ ಪಪ್ಪಿ ಚಿನ್ನ ಸಿಕ್ಕಾಕಿಕೊಂಡಿದೆ. ಹೀಗಾಗಿ ಯಾವ್ಯಾವ ಸಚಿವರು, ಯಾವ್ಯಾವ ಇಲಾಖೆಯಿಂದ ಎಷ್ಟು ಕಲೆಕ್ಟ್ ಮಾಡಬೇಕು ಅಂತ ಈ ಔತಣ ಕೂಟ ಕರೆದಿದ್ದಾರೆ.
ಬಿಹಾರಕ್ಕೆ ಫಂಡ್ ಕಲೆಕ್ಟ್ ಮಾಡಿ ಕಳಿಸೋಕ್ಕೆ ಸಿಎಂ ಸಚಿವರ ಜತೆ ಚರ್ಚೆ ಮಾಡ್ತಾರೆ. ಜಿಬಿಎ ರಚಿಸಿ ಅಧಿಕಾರ ವಿಕೇಂದ್ರೀಕರಣ ಮಾಡ್ತಿಲ್ಲ. ಒಂದೇ ಕಡೆ ಅಧಿಕಾರ ಕೇಂದ್ರೀಕರಿಸಲು ಹೊರಟಿದ್ದಾರೆ ಎಂದಿದ್ದಾರೆ.
ಸಿಎಂ ಕೈಯಲ್ಲಿ ಜಿಬಿಎ ಅಧಿಕಾರ ಕೇಂದ್ರೀಕರಿಸಲು ನಿನ್ನೆ ಸಭೆಯಲ್ಲಿ ತೀರ್ಮಾನಿಸಿದ್ದಾರೆ. ಮಳೆ ಬಂದು ನೀರು ತುಂಬಿದ್ರೂ ನಿನ್ನೆ ಟಾರ್ ಹಾಕ್ತಿದ್ದಾರೆ. ಇದು ಎಲ್ಲೂ ಇಲ್ಲ ಟೆಕ್ನಾಲಜಿ ಬೆಂಗಳೂರಿಗೆ ತರಿಸಿದ್ದಾರಾ ಇವ್ರು? ಮಳೆಯಲ್ಲಿ ಟಾರ್ ಹಾಕೋದು ಎಲ್ಲಿಯ ಟೆಕ್ನಾಲಜಿ ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಮತ್ತೆ ಮಳೆ ಎಡಬಿಡದೆ ಸುರಿಯುತ್ತಿದೆ. ರಾಜ್ಯ ಸರ್ಕಾರ ಇನ್ನೂ ಪರಿಹಾರ ಘೋಷಣೆ ಮಾಡಿಲ್ಲ. ನಾವು ಒಂದೇ ತಿಂಗಳಲ್ಲಿ ಪರಿಹಾರ ಬಿಡುಗಡೆ ಮಾಡಿದ್ದೆವು. ಇವರು ಕೇಂದ್ರದ ಕಡೆ ಬೊಟ್ಟು ಮಾಡ್ತಾರೆ ಎಂದಿದ್ದಾರೆ.
ಒಂದು ಶ್ವೇತ ಪತ್ರ ಬಿಡುಗಡೆ ಮಾಡಿ
ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಎಷ್ಟು ಪರಿಹಾರ ಬಿಡುಗಡೆ ಮಾಡಿದ್ರು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಷ್ಟು ಪರಿಹಾರ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಿ. ನಾನೇ ಅವರಿಗೆ ಸನ್ಮಾನ ಮಾಡ್ತೇನೆ. ಕೇಂದ್ರದ ಪಟ್ಟಿಯನ್ನೂ ಬಿಡುಗಡೆ ಮಾಡಿ. ನರೇಂದ್ರ ಮೋದಿ ಹಾಗೂ ಮನಮೋಹನ್ ಸಿಂಗ್ ಅವಧಿಯಲ್ಲಿ ಎಷ್ಟೆಷ್ಟು ಪರಿಹಾರ ಬಿಡುಗಡೆ ಮಾಡಿದ್ದಾರೆ ಮಾಹಿತಿ ಕೊಡಿ ಎಂದು ಸಾವಾಲು ಹಾಕಿದ್ದಾರೆ.
Also Read: Hassan News : ಹಾಸನಾಂಬೆ ದರ್ಶನ, ಕರ್ತವ್ಯಲೋಪ : ಇಬ್ಬರು ವಾರ್ಡನ್ ಅಮಾನತು
ಪ್ರಿಯಾಂಕ್ ಖರ್ಗೆಗೆ ಅಶೋಕ್ ತಿರುಗೇಟು
ನಾನೇನು ಅಧಿಕಾರದಲ್ಲಿದ್ದೀವಾ.? ನಾವು ಟ್ರಾನ್ಸ್‌ಫರ್ ಮಾಡ್ತೇವಾ.? ನಮ್ಮ ಪಕ್ಷಕ್ಕೆ ದುಡ್ಡು ತಗೊಂಡು ವಿಪಕ್ಷ ನಾಯಕನ್ನ ಮಾಡುವಷ್ಟು ಗತಿಗೆಟ್ಟಿಲ್ಲ. ನಮ್ಮ ಕಾರ್ಯಕರ್ತರು ಹತ್ತತ್ತು ರೂಪಾಯಿ ಹಾಕಿದ್ರೆ, ಚುನಾವಣೆ ಗೆಲ್ಲಿಸುವಷ್ಟು ಸಮರ್ಥವಾಗಿದೆ. ಡಿಕೆಶಿ ರಾಕೆಟ್ ಲಾಂಚ್ ತರ ಸಿಎಂ ಆಗೋಕೆ ಕ್ಷಣಗಣನೆ ಇದೆ ಎಂದಿದ್ದಾರೆ.
ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಅಂತಾರೆ, ಸಮೀಕ್ಷೆ ತರಾತುರಿಯಲ್ಲಿ ಮಾಡ್ತಿದ್ದಾರೆ. ನೀವು ಸಿಎಂ ಸ್ಥಾನದಿಂದ ಇಳಿಯಲ್ಲ ಅಂದ ಮೇಲೆ, ಸೆನ್ಸಸ್‌ಗೆ ಯಾಕೆ ತರಾತುರಿ? ಡಿಕೆಶಿ ಸಿಎಂ ಆಗೋ ಕಾಲ ಸನಿಹಿತವಾಗ್ತಿದೆ, ನವೆಂಬರ್ ಗೆ ಕ್ರಾಂತಿ ಖಚಿತ ಎಂದಿದ್ದಾರೆ.



