ನವೆಂಬರ್ ಕ್ರಾಂತಿ ನಡೆಯುತ್ತಾ ? ಸಿಎಂ ಡಿನ್ನರ್ ಮೀಟಿಂಗ್ ರಹಸ್ಯವೇನು ?

CM Siddaramaiah dinner meeting : ಬೆಂಗಳೂರು : ಕರ್ನಾಟಕ ರಾಜ್ಯ ರಾಜಕೀಯದಲ್ಲಿ ನವೆಂಬರ್ ತಿಂಗಳಲ್ಲಿ ಬಾರೀ ಬದಲಾವಣೆ ಆಗುತ್ತದೆ ಅನ್ನೋ ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ಇಂದು ನಡೆಯುವ ಸಿಎಂ ಡಿನ್ನರ್ ಮೀಟಿಂಗ್ ಕುತೂಹಲ ಮೂಡಿಸಿದೆ.
ಕರ್ನಾಟಕದಲ್ಲಿ ಒಂದೆಡೆ ಸಿಎಂ ಸಿದ್ದರಾಮಯ್ಯ ಬದಲಾವಣೆಯ ಮಾತುಗಳು ಕೇಳಿಬರುತ್ತಿದ್ರೆ, ಮತ್ತೊಂದೆಡೆಯಲ್ಲಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಶುರುವಾಗಿದೆ. ಈ ನಡುವಲ್ಲೇ ಸಿಎಂ ಸಿದ್ದರಾಮಯ್ಯ ಇಂದು ಆಪ್ತ ಸಚಿವರ ಜೊತೆಗೆ ಡಿನ್ನರ್ ಮೀಟಿಂಗ್ ನಡೆಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಡಿನ್ನರ್ ಮೀಟಿಂಗ್ ಖುದ್ದು ಕ್ರಾಂಗ್ರೆಸ್ ನಾಯಕರ ಕುತೂಹಲಕ್ಕೆ ಕಾರಣವಾಗಿದೆ. ಸಚಿವರಿಗೆ ಇಂದು ಔತಣ ಕೂಟ ಆಯೋಜಿಸುವ ಮೂಲಕ ಸಂಪುಟ ಪುನರಚನೆಗೆ ಸಿದ್ದರಾಮಯ್ಯ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ.
ತನ್ನ ಆಪ್ತ ಸಚಿವರ ಜೊತೆಗೆ ಚರ್ಚೆ ನಡೆಸಿ, ತನಗೆ ಬೇಕಾದವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ಕುರಿತು ಯೋಜನೆ ರೂಪಿಸಿದ್ದಾರೆ. ಈ ಮೂಲಕ ನವೆಂಬರ್ ಕ್ರಾಂತಿಯನ್ನು ಹಬ್ಬಿಸಿದ್ದವರಿಗೆ ಸಿದ್ದರಾಮಯ್ಯ ಆಪ್ತ ಬಣ ಟಾಂಗ್ ಕೊಟ್ಟಿದೆ ಎನ್ನಲಾಗುತ್ತಿದೆ.
ನಾನೇಕೆ ಸಿಎಂ ಆಗಬಾರದು ? ಪರಮೇಶ್ವರ್ ಪ್ರಶ್ನೆ
ಒಂದೆಡೆ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಅನ್ನೋ ಹೇಳಿಕೆಗಳು ಕೇಳಿ ಬರುತ್ತಿರೋ ಬೆನ್ನಲ್ಲೇ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ನಾನು ಸಿಎಂ ಆಗುವ ಬಯಕೆ ಹೊಂದಿದ್ದೇನೆ. ನಾನು ಯಾಕೆ ಸಿಎಂ ಆಗಬಾರದು ಎಂದು ಪ್ರಶ್ನಿಸಿದ್ದಾರೆ.
ಸಂಪುಟ ವಿಸ್ತರಣೆ, ಪುನರಚನೆ ಹೈಕಮಾಂಡ್ಗೆ ಬಿಟ್ಟಿರುವ ವಿಚಾರ, ಈ ಕುರಿತು ಪಕ್ಷದ ಹೈಕಮಾಂಡ್ ಕ್ರಮಕೈಗೊಳ್ಳುತ್ತದೆ. ಸಚಿವರಾಗುವ ಬಯಕೆ ಎಲ್ಲಾ ಶಾಸಕರಿಗೂ ಇರುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ಸಚಿವರನ್ನು ಔತಣಕ್ಕೆ ಕರೆಯುವುದು ಸಾಮಾನ್ಯ. ಆದರೆ ಬಿಜೆಪಿ ಈ ವಿಚಾರದಲ್ಲಿ ತಲೆ ಹಾಕಬೇಕಾದ ಅಗತ್ಯವಿಲ್ಲ. ನಮ್ಮನ್ನು ಭೋಜನ ಕೂಟಕ್ಕೆ ಆಹ್ವಾನಿಸಿದ್ದು ಇದೇ ಮೊದಲೇನಲ್ಲ ಎಂದಿದ್ದಾರೆ.
CM Siddaramaiah dinner meeting : ಸಿಎಂ ಡಿನ್ನರ್ ಮೀಟಿಂಗ್ : ಬಿಜೆಪಿ ಟಾಂಗ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿನ್ನರ್ ಮೀಟಿಂಗ್ ಆಯೋಜನೆ ಮಾಡಿರುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶಾಸಕ ಮುನಿರತ್ನ ಲೇವಡಿ ಮಾಡಿದ್ದಾರೆ.
ಈ ನಡುವಲ್ಲೇ ನನಗೆ ಡಿಸೆಂಬರ್ ನಿಂದ ಶುಕ್ರದೆಸೆ ಶುರುವಾಗುತ್ತಿದೆ ಅನ್ನುವ ಮೂಲಕ ಲಕ್ಷ್ಮಣ ಸವದಿ ಸಚಿವನಾಗುವ ಭರವಸೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲ ಬಿಜೆಪಿ ನಾಯಕರಿಗೆ ಅಸ್ತ್ರವಾಗಿ ಮಾರ್ಪಟ್ಟಿದೆ.
November Revolution happening What is the secret of the CM Siddaramaiah dinner meeting



