ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮೀ ಕೃಪಾಕಟಾಕ್ಷ ನಿಮಗೆ ದೊರೆಯಬೇಕೆ : ಹಾಗಿದ್ದಲ್ಲಿ ಈ ವಸ್ತುಗಳನ್ನು ಮನೆಯಿಂದ ದೂರದಲ್ಲಿರಿಸಿ
Deepavali: ಅಂಧಕಾರವನ್ನು ಅಳಿಸಿ ಜ್ಞಾನದ ಬೆಳಕನ್ನು ಹಚ್ಚುವ ಹಬ್ಬವೇ ದೀಪಾವಳಿ. ಕತ್ತಲಿನ ಮೇಲೆ ಬೆಳಕು ಚೆಲ್ಲುವ, ಕೆಟ್ಟದರ ಎದುರು ಒಳಿತು ವಿಜಯ ಸಾಧಿಸುವ ದಿನ ಇದಾಗಿದೆ. ಪಟಾಕಿ, ದೀಪದ ಅಲಂಕಾರ ಹಾಗೂ ಲಕ್ಷ್ಮೀ ದೇವಿಯ ಆರಾಧನೆ ಈ ಹಬ್ಬದ ವಿಶೇಷಗಳು. ಸಂಪತ್ತು ಹಾಗೂ ಸಮೃದ್ಧಿಯ ದೇವತೆ ಲಕ್ಷ್ಮೀಯನ್ನು ಆರಾಧಿಸುವಂತಹ ಈ ಹಬ್ಬಕ್ಕೂ ಮುನ್ನ ಮನೆಯನ್ನು ಸಂಪೂರ್ಣ ಶುಚಿಗೊಳಿಸುವುದು ಸಂಪ್ರದಾಯ.
ಲಕ್ಷ್ಮೀ ಶುಭ್ರತ್ವದ ಸಂಕೇತ ಕೂಡ ಆಗಿರುವುದರಿಂದ ಪ್ರತಿಯೊಬ್ಬರೂ ದೀಪಾವಳಿ ಪ್ರಯುಕ್ತ ಮನೆಯ ಮೂಲೆ ಮೂಲೆಗಳನ್ನು ಸ್ವಚ್ಛಗೊಳಿಸುವ ಅಭ್ಯಾಸ ಹೊಂದಿದ್ದಾರೆ.
ವಾಸ್ತು ಶಾಸ್ತ್ರದಲ್ಲಿರುವ ನಿಯಮಗಳ ಪ್ರಕಾರ, ಮನೆಯಲ್ಲಿ ನಮಗೆ ಅರಿವಿಲ್ಲದಂತೆ ನಾವಿಟ್ಟಿರುವ ಕೆಲವು ವಸ್ತುಗಳು ಮನೆಗೆ ಉತ್ತಮ ಶಕ್ತಿ ಆವಾಹನೆಯಾಗಲು ಅಡ್ಡಿ ನೀಡುತ್ತಿರಬಹುದು. ಹೀಗಾಗಿ ದೀಪಾವಳಿಯ ಈ ಸಂದರ್ಭದಲ್ಲಿ ಅಂತಹ ಅಶುಭ ವಸ್ತುಗಳನ್ನು ಮನೆಯಿಂದ ಹೊರಗೆಸೆಯುವುದು ಉತ್ತಮ ಎಂದು ಹೇಳಲಾಗಿದೆ.
Also Read: ದೀಪಾವಳಿಗೆ ಈ 5 ವಸ್ತುಗಳನ್ನು ಖಂಡಿತ ಖರೀದಿಸಿ: ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿಯೇ ಸದಾ ನೆಲೆಸುತ್ತಾಳೆ
ಮನೆಯಿಂದ ಹೊರ ಹಾಕಬೇಕಾದ ಅಶುಭ ವಸ್ತುಗಳು ಯಾವುದು :
ಅನಗತ್ಯ ವಸ್ತುಗಳನ್ನು ಮನೆಯಿಂದ ಹೊರಹಾಕಿ :
ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಬೇಕು ಎಂದರೆ ಮೊದಲು ಮನೆಯು ಅಚ್ಚುಕಟ್ಟಾಗಿ ಇರಬೇಕು. ವರ್ಷಗಳೇ ಕಳೆದಿದ್ದರೂ ನೀವು ಕೆಲವೊಂದು ವಸ್ತುಗಳನ್ನು ಬಳಕೆಯೇ ಮಾಡಿರುವುದಿಲ್ಲ. ಅನಗತ್ಯ ವಸ್ತುಗಳಿಂದಲೇ ತುಂಬಿರುವ ಮನೆಗಳು ಲಕ್ಷ್ಮೀ ಅವಕೃಪೆಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಹೀಗಾಗಿ ದೀಪಾವಳಿಗೆ ಮುಂಚಿತವಾಗಿ ಮನೆಯ ಮೂಲೆ ಮೂಲೆಗಳನ್ನು ಗುಡಿಸಿ, ನಿಷ್ಪ್ರಯೋಜಕ ವಸ್ತುಗಳನ್ನು ಮನೆಯಿಂದ ಎಸೆಯುವುದು ಉತ್ತಮ.
ಅಂತೆಯೇ ಮುರಿದು ಹೋದ ಪಿಂಗಾಣಿ ಪಾತ್ರೆಗಳು, ಗಡಿಯಾರ, ಕನ್ನಡಿ ಅಥವಾ ಇನ್ನಿತರ ಯಾವುದೇ ಪಿಠೋಪಕರಣಗಳು ದುರಾದೃಷ್ಟವನ್ನು ಆಹ್ವಾನಿಸುತ್ತವೆ. ಇವುಗಳು ಆರ್ಥಿಕ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತವೆ. ಹೀಗಾಗಿ ಹಬ್ಬಕ್ಕೂ ಮುನ್ನವೇ ಈ ವಸ್ತುಗಳನ್ನು ಮನೆಯಿಂದ ಹೊರಗೆಸೆಯುವುದು ಉತ್ತಮ.
ಪಾಪಾಸ್ಕಳ್ಳಿ : ಅನೇಕರಿಗೆ ಗಿಡಗಳಿಂದ ಮನೆಯ ಒಳಾಂಗಣವನ್ನು ಸಿಂಗರಿಸುವ ಅಭ್ಯಾಸವಿರುತ್ತದೆ.ಇವುಗಳು ಮನೆಗೆ ತಾಜಾತನ ತರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪಾಪಸ್ಕಳ್ಳಿಯಂತಹ ಜಾತಿಗೆ ಸೇರಿದ ಗಿಡಗಳು ಎಂದಿಗೂ ಮನೆಗೆ ಒಳಿತನ್ನುಂಟು ಮಾಡುವುದಿಲ್ಲ. ಇವುಗಳು ಕುಟುಂಬಸ್ಥರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತವೆ. ಕುಟುಂಬದಲ್ಲಿ ನೆಮ್ಮದಿಯೇ ನೆಲೆಸದಂತೆ ಆಗುತ್ತದೆ. ಹೀಗಾಗಿ ಇಂತಹ ಗಿಡಗಳ ಬದಲಾಗಿ ತುಳಸಿ ಅಥವಾ ಮನಿ ಪ್ಲಾಂಟ್ಗಳನ್ನು ಮನೆಗೆ ತನ್ನಿ.
Also Read: ತುಲಾ ರಾಶಿಗೆ ಸೂರ್ಯ ಸಂಚಾರ: ಆದಿತ್ಯ–ಮಂಗಳ ರಾಜಯೋಗದಿಂದ ಈ ರಾಶಿಯವರಿಗೆ ಧನ ಲಾಭ
ಖಾಲಿ ಕಪಾಟು, ಹೂಜಿಗಳು :
ಮನೆಯಲ್ಲಿ ಬಳಕೆ ಮಾಡದಯೇ ಹಾಗೆಯೇ ಇರಿಸಿದ ಕಪಾಟು, ಹೂಜಿಗಳು , ಬಾಟಲಿಗಳು ಸಾಕಷ್ಟು ಇರುತ್ತದೆ. ದೀಪಾವಳಿ ಹಬ್ಬವು ಸಮೃದ್ಧಿಯ ಸಂಕೇತವಾಗಿದೆ. ಹೀಗಾಗಿ ತುಂಬಿದ ಪಾತ್ರೆಗಳು ಇರುವ ಮನೆಯು ಹೆಚ್ಚು ಆರ್ಥಿಕ ಲಾಭವನ್ನು ತರುತ್ತದೆ. ಹೀಗಾಗಿ ಖಾಲಿ ಖಾಲಿ ಇರುವ ಹೂಜಿ, ಬಾಟಲಿಗಳು ಶುಭದ ಸಂಕೇತವಲ್ಲ.
ದೀಪಾವಳಿಯಲ್ಲಿ ನಾವು ಬಹುಮುಖ್ಯ ಸ್ಥಾನ ನೀಡಬೇಕಾಗಿರುವುದು ಸ್ವಚ್ಛತೆಗೆ, ಧೂಳಾದ ಮನೆಯ ಮೂಲೆಗಳು, ಕಸ ಕಡ್ಡಿಗಳು, ಬಲೆ ಹಿಡಿಯವುದು ಇದ್ಯಾವುದೂ ಲಕ್ಷ್ಮೀ ದೇವಿಗೆ ಪ್ರಿಯವಾದುದಲ್ಲ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಮನೆಯನ್ನು ಸಂಪೂರ್ಣ ಶುಚಿಯಾಗಿಡಿ. ಇದು ಲಕ್ಷ್ಮೀಯ ಕೃಪೆಗೆ ದಾರಿ ಮಾಡಿಕೊಡುತ್ತದೆ.



