ತುಲಾ ರಾಶಿಗೆ ಸೂರ್ಯ ಸಂಚಾರ: ಆದಿತ್ಯ–ಮಂಗಳ ರಾಜಯೋಗದಿಂದ ಈ ರಾಶಿಯವರಿಗೆ ಧನ ಲಾಭ
Surya Gochar: ದೀಪಾವಳಿ ಪ್ರಾರಂಭವಾಗಲು ಎರಡು ದಿನ ಇರುವಾಗ ಅಂದರೆ, ಅಕ್ಟೋಬರ್ 17 ರಂದು ಸೂರ್ಯನು ತನ್ನ ರಾಶಿಯನ್ನು ಬದಲಾಯಿಸುತ್ತಿದ್ದಾನೆ. ಸೂರ್ಯನ ಈ ಸಂಚಾರವು ತುಲಾ ರಾಶಿಯಲ್ಲಿ ನಡೆಯುತ್ತಿದೆ.
ವಿಶೇಷವೆಂದರೆ ಮಂಗಳನು ಸಹ ಇದೇ ರಾಶಿಯಲ್ಲಿ ನೆಲೆಸಿದ್ದಾನೆ. ಈ ಎರಡು ಗ್ರಹಗಳ ಸಂಯೋಗದಿಂದ ಉಂಟಾಗುವ ಆದಿತ್ಯ–ಮಂಗಳ ರಾಜಯೋಗವು ಕೆಲವು ರಾಶಿಯವರಿಗೆ ಅನೇಕ ಪ್ರಯೋಜನಗಳನ್ನು ಹಾಗೂ ಒಳ್ಳೆಯ ಅವಕಾಶಗಳನ್ನು ಸೃಷ್ಟಿಸುತ್ತವೆ.
ಹಾಗಾದರೆ, ಆದಿತ್ಯ ಮತ್ತು ಮಂಗಳನ ಸಂಯೋಜನೆಯಿಂದ ಯಾವ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ನೋಡೋಣ.
ಆದಿತ್ಯ-ಮಂಗಳ ರಾಜಯೋಗ ಎಂದರೇನು?
ಸೂರ್ಯ ಮತ್ತು ಮಂಗಳ ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ನೆಲೆಸಿದಾಗ ಆದಿತ್ಯ ಮಂಗಳ ರಾಜ ಯೋಗವು ಸೃಷ್ಟಿಯಾಗುತ್ತದೆ. ಅದು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ.
ಈ ರಾಜ್ಯಯೋಗವು ವೃಷಭ, ಮಿಥುನ, ಕಟಕ ಮತ್ತು ತುಲಾ ರಾಶಿಯವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಸೂರ್ಯ ಮತ್ತು ಮಂಗಳ ಈ ಎರಡೂ ಗ್ರಹಗಳು ತುಲಾ ರಾಶಿಯಲ್ಲಿ ಚಲಿಸುತ್ತಿರುವುದರಿಂದ, ಈ ರಾಶಿಯು ವಿಶೇಷವಾಗಿ ಪ್ರಭಾವಿತವಾಗಿರುತ್ತದೆ.
ಮಂಗಳನು ಶಕ್ತಿಯನ್ನು ಒದಗಿಸಿದರೆ, ಸೂರ್ಯನು ಆತ್ಮವಿಶ್ವಾಸವನ್ನು ತರುತ್ತಾನೆ. ಇದರಿಂದ ವ್ಯವಹಾರವು ಉತ್ತಮವಾಗಿ ನಡೆಯುತ್ತದೆ. ದೀಪಾವಳಿಯ ಶುಭ ಫಲವು ಇದಕ್ಕೆ ಸೇರಿಕೊಳ್ಳುವುದರಿಂದ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಲಾಭ ತರುತ್ತದೆ.
ಇದನ್ನೂ ಓದಿ: ನೀವು ಮಾಡುವ ಈ ತಪ್ಪುಗಳಿಂದ ಮನೆಯಲ್ಲಿ ರಾಹು ವಾಸ ಹೆಚ್ಚುತ್ತದೆ
ಆದಿತ್ಯ–ಮಂಗಳ ರಾಜಯೋಗದಿಂದ ಈ ರಾಶಿಯವರಿಗೆ ಹೆಚ್ಚಿನ ಲಾಭ
ವೃಷಭ ರಾಶಿ
ವೃಷಭ ರಾಶಿಯವರಿಗೆ ಆದಿತ್ಯ–ಮಂಗಳ ರಾಜಯೋಗವು ಶುಭಫಲಗಳನ್ನು ತರುತ್ತದೆ. ಈ ರಾಶಿಯಲ್ಲಿ ಜನಿಸಿದವರು ಕೆಲಸದಲ್ಲಿ ಯಾವುದೇ ತೊಂದರೆಗಳನ್ನು ಎದುರಿಸುವುದಿಲ್ಲ.
ಸೂರ್ಯನ ಆತ್ಮವಿಶ್ವಾಸ ಇರುವುದರಿಂದ ಅವರು ತಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುತ್ತಾರೆ. ಉದ್ಯೋಗದಲ್ಲಿ ಬಡ್ತಿ ಮತ್ತು ಪ್ರಗತಿಯ ಸಾಧ್ಯತೆಗಳೂ ಇವೆ.
ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವನ್ನು ಗಳಿಸುತ್ತಾರೆ. ಉತ್ತಮ ಅವಕಾಶಗಳು ಅವರಿಗೆ ರೂಪುಗೊಳ್ಳುತ್ತವೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಅದೃಷ್ಟ ಒಲಿದುಬರುತ್ತದೆ. ಕೈಗೂಡದೇ ಇರುವ ಕೆಲಸ ಆಕಸ್ಮಿಕವಾಗಿ ನೆರವೇರುತ್ತದೆ. ನೀವು ಷೇರು ಮಾರುಕಟ್ಟೆಯಿಂದ ಲಾಭ ಪಡೆಯುತ್ತೀರಿ. ಆದರೆ, ಎಚ್ಚರಿಕೆಯಿಂದ ಮುಂದುವರಿಯಬೇಕು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದು ನಿಮ್ಮ ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಗೆ ಕಾರಣವಾಗಬಹುದು.
ಕಟಕ ರಾಶಿ
ಕಟಕ ರಾಶಿಯವರು ತಮ್ಮ ಕುಟುಂಬದಲ್ಲಿ ಸಂತೋಷವನ್ನು ಕಾಣುತ್ತಾರೆ. ತಂದೆ ಮತ್ತು ಮಕ್ಕಳಿಂದ ಮನೆಗೆ ಲಾಭ ದೊರಕುತ್ತದೆ. ಕುಟುಂಬದವರ ಸಂಬಂಧಗಳು ಸುಧಾರಿಸುತ್ತವೆ.
ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚಿನ ಲಾಭಗಳು ನಿಮ್ಮದಾಗುತ್ತವೆ. ನಿಮ್ಮ ಶಕ್ತಿಯಿಂದ, ಅಪೂರ್ಣವಾಗಿ ನಿಂತಿದ್ದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ.
ಇದನ್ನೂ ಓದಿ: ಕಟಕ ರಾಶಿಯಲ್ಲಿ ಗುರು ಗ್ರಹದ ಸಂಚಾರ: ಈ ರಾಶಿಯವರಿಗೆ ಭಾಗ್ಯೋದಯದ ಕಾಲ
(Surya Gochar Sun Transit in Tula Rashi Aditya Mangal Raj Yog will give benefit to these zodiac sign)



