ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡುವ ಅಭ್ಯಾಸವಿದೆಯೇ: ಈ ಖಾಯಿಲೆ ಅಪಾಯ ನಿಮಗೆ ಜಾಸ್ತಿ
Mobile Habit: ಮೊದಲೆಲ್ಲ ಬೆಳಗ್ಗೆ ಎದ್ದಾಕ್ಷಣ ಸುದ್ದಿಪತ್ರಿಕೆಗಳನ್ನು ಓದುವ ಅಭ್ಯಾಸ ಎಲ್ಲರಿಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಜನ ಹಾಸಿಗೆಯಿಂದ ಎದ್ದಾಕ್ಷಣ ಮೊಬೈಲ್ ಹಿಡಿಯುತ್ತಾರೆ. ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಸ್ಕ್ರಾಲ್ ಮಾಡುತ್ತಾರೆ.
ಇನ್ನೂ ಕೆಲವರಿಗಂತೂ ಶೌಚಾಲಯಕ್ಕೆ ಸ್ಮಾರ್ಟ್‌ಫೋನ್ ಕೊಂಡೊಯ್ಯುವ ಅಭ್ಯಾಸ ಇರುತ್ತದೆ. ಇಂತಹ ಅಭ್ಯಾಸ ನಿಮಗೂ ಇದ್ದರೆ ಇನ್ಮುಂದೆ ನೀವು ನೂರು ಬಾರಿ ಯೋಚನೆ ಮಾಡಬೇಕು. ಏಕೆಂದರೆ PLOS One ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಸ್ಮಾರ್ಟ್‌ಫೋನ್ ಬಳಕೆಯಿಂದಾಗಿ ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮೂಲವ್ಯಾಧಿ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ.
ಬೋಸ್ಟನ್‌ನ ಬೆತ್ ಇಸ್ರೇಲ್ ಡೀಕನೆಸ್ ಮೆಡಿಕಲ್ ಸೆಂಟರ್‌ನ ಸಂಶೋಧಕರು ಈ ಅಧ್ಯಯನ ನಡೆಸಿದ್ದು,125 ಜನರನ್ನು ಸಮೀಕ್ಷೆಗೆ ಒಳಪಡಿಸಿತ್ತು. ಈ ಸಮೀಕ್ಷೆಯಲ್ಲಿ ಶೌಚಾಲಯಕ್ಕೆ ಮೊಬೈಲ್ ಕೊಂಡೊಯ್ಯುವವರಿಗೆ ಮೂಲವ್ಯಾಧಿ ಬರುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ.
Also Read: ನಿಮಗೆ ಅರಿಯದಂತೆ ಆರೋಗ್ಯ ಹಾಳು ಮಾಡುತ್ತಿವೆ ಮನೆಯಲ್ಲಿರುವ ಈ ಮೂರು ವಸ್ತುಗಳು
ಸ್ಮಾರ್ಟ್ ಫೋನ್ಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನೋಡುತ್ತಾ ಜನರು ಹೆಚ್ಚು ಸಮಯ ಶೌಚಾಲಯದಲ್ಲಿ ಕುಳಿತುಕೊಂಡು ಬಿಡುತ್ತಾರೆ. ಇದರಿಂದ ಮೂಲವ್ಯಾಧಿ ಆರಂಭವಾಗುತ್ತದೆ . ವಯಸ್ಸು, ಲಿಂಗ, ಬಿಎಂಐ, ವ್ಯಾಯಾಮ, ಆಹಾರದಲ್ಲಿ ಫೈಬರ್ ಸೇವನೆಯಂತಹ ಅಂಶಗಳಿಗೆ ಹೊಂದಾಣಿಕೆ ಮಾಡಿದ ನಂತರವೂ, ಸ್ಮಾರ್ಟ್‌ಫೋನ್ ಬಳಕೆದಾರರು ಶೌಚಾಲಯದಲ್ಲಿ ತಮ್ಮ ಫೋನ್‌ಗಳನ್ನು ಬಳಸದವರಿಗಿಂತ 46 ಪ್ರತಿಶತ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಸಮೀಕ್ಷೆಗೆ ಒಳಪಟ್ಟವರ ಪೈಕಿ 66 ಪ್ರತಿಶತದಷ್ಟು ಜನರು ಶೌಚಾಲಯದಲ್ಲಿ ಮೊಬೈಲ್ ಬಳಸುವ ಅಭ್ಯಾಸವಿದೆ ಎಂದು ಹೇಳಿದ್ದಾರೆ. ಹೆಚ್ಚಿನ ಜನರು ಶೌಚಾಲಯದಲ್ಲಿ ಕುಳಿತು ಸುದ್ದಿ ಪತ್ರಿಕೆಗಳನ್ನು ಮೊಬೈಲ್ ಮೂಲಕ ಓದುವ ಹವ್ಯಾಸ ಹೊಂದಿದ್ದರೆ ಇನ್ನೂ ಕೆಲವರು ಸಾಮಾಜಿಕ ಮಾಧ್ಯಮಗಳನ್ನು ಬ್ರೌಸ್ ಮಾಡುವ ಅಭ್ಯಾಸ ಹೊಂದಿದ್ದಾರೆ ಎಂದು ಈ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಶೌಚಾಲಯದಲ್ಲಿ ಹೆಚ್ಚು ಅವಧಿ ಕೂರುವುದು ಒಳ್ಳೆಯ ಆರೋಗ್ಯ ಅಭ್ಯಾಸವಲ್ಲ.
Also Read: ಮನೆಯಲ್ಲಿ ಧನಾತ್ಮಕತೆ ನೆಲೆಸಬೇಕೆ : ಹಾಗಾದರೆ ಮೊದಲು ಈ ವಸ್ತುಗಳನ್ನು ಮನೆಯಿಂದ ಹೊರಹಾಕಿ
ಆದರೆ ಸ್ಮಾರ್ಟ್‌ಫೋನ್ ಕೈಯಲ್ಲಿದ್ದಾಗ ನಮಗೆ ಅರಿವಿಲ್ಲದಂತೆ ನಾವು ಹೆಚ್ಚಿನ ಸಮಯ ಶೌಚಾಲಯದಲ್ಲಿ ಕಳೆದುಬಿಡುತ್ತೇವೆ. ಹೀಗಾಗಿ ಸ್ಮಾರ್ಟ್ಫೋನ್ನ್ನು ಶೌಚಾಲಯಕ್ಕೆ ಕೊಂಡೊಯ್ಯುವ ಅಭ್ಯಾಸವನ್ನು ಪ್ರತಿಯೊಬ್ಬರೂ ತ್ಯಜಿಸಬೇಕು ಎಂದು ಅಧ್ಯಯನ ತಿಳಿಸಿದೆ.



