ಮೂಡಬಿದಿರೆಯಲ್ಲಿ ವೇಶ್ಯಾವಾಟಿಕೆ ದಂಧೆ ಬಯಲು : ಆರೋಪಿಗಳ ಬಂಧನ, ಅಪ್ರಾಪ್ತೆಯರ ರಕ್ಷಣೆ
Prostitution racket exposed in Moodbidri: ಕಾಲೇಜು ವಿದ್ಯಾರ್ಥಿನಿಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ನಿಡ್ಡೋಡಿ ಎಂಬಲ್ಲಿ ಸಂಭವಿಸಿದೆ.
ಬಂಧಿತರನ್ನು ಆಟೋ ಚಾಲಕ ಮಹೇಶ್, ಯಜ್ಞೇಶ್, ಶ್ರೀಕಾಂತ್ ಕಟೀಲು, ದಿಲೀಪ್ ಎಂದು ಗುರುತಿಸಲಾಗಿದೆ. ದಾಳಿ ನಡೆಸಿದ ಮೂಡಬಿದಿರೆ ಠಾಣೆ ಪೊಲೀಸರು ಇಬ್ಬರು ಅಪ್ರಾಪ್ತ ಯುವತಿಯರನ್ನು ರಕ್ಷಿಸಿದ್ದಾರೆ.
ಆಟೋ ಚಾಲಕ ಕೆಲಸ ಮಾಡಿಕೊಂಡಿದ್ದ ಮೂಡಬಿದಿರೆಯ ನಿಡ್ಡೋಡಿ ನಿವಾಸಿಯಾಗಿರುವ ಬಂಧಿತ ಮಹೇಶ್ ಇಬ್ಬರು ಯುವತಿಯರನ್ನು ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಬಳಿಕ ತನ್ನ ಸ್ನೇಹಿತರನ್ನೂ ಮನೆಗೆ ಕರೆಸಿಕೊಂಡಿದ್ದ. ಕೂಡಲೇ ದಾಳಿ ನಡೆಸಿದಿ ಮೂಡಬಿದಿರೆ ಠಾಣೆ ಪೊಲೀಸರು ಸಂತ್ರಸ್ತೆಯರ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Also Read: ಬುರುಡೆ ಪ್ರಕರಣ : ಚಿನ್ನಯ್ಯ ಪತ್ನಿ, ಸಹೋದರಿ ಎಸ್ಐಟಿ ಕಚೇರಿಗೆ ಹಾಜರು
ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಆರೋಪಿಗಳ ವಿರುದ್ಧ ಮೂಡಬಿದಿರೆ(Moodabidire) ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲು ಮಾಡಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಮೈಸೂರಿನಲ್ಲಿಯೂ ಅಕ್ರಮ ವೇಶ್ಯಾವಾಟಿಕೆ ಧಂದೆ ಬೆಳಕಿಗೆ ಬಂದಿತ್ತು.
ದಾಸನಕೊಪ್ಪಲು ಎಂಬಲ್ಲಿ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಪೊಲೀಸರು ಆರು ಮಂದಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಒಡನಾಡಿ ಸಂಸ್ಥೆ ನೀಡಿದ ಮಾಹಿತಿ ಆಧರಿಸಿದ ಪೊಲೀಸರು ಅಕ್ರಮ ವೇಶ್ಯಾವಾಟಿಕೆ ದಂಧೆ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ರಾಜ್ಯದಲ್ಲಿ ಒಂದಾದರ ಮೇಲೊಂದರಂತೆ ವೇಶ್ಯಾವಾಟಿಕೆ ದಂಧೆಗಳು ಬಯಲಿಕೆ ಬರುತ್ತಿದ್ದು ಆತಂಕ ಮೂಡಿಸಿದೆ. ಪೊಲೀಸರ ಯಶಸ್ವಿ ಕಾರ್ಯಾಚರಣೆಗಳಿಂದ ಶೀಘ್ರದಲ್ಲಿಯೇ ಇಂತಹ ಅಕ್ರಮ ದಂಧೆಗಳಿಗೆ ಪೂರ್ಣವಿರಾಮ ಬೀಳಬೇಕಿದೆ.
Also Read: ಬಾರೀ ಮಳೆ : ಕರಾವಳಿ ಸೇರಿ ರಾಜ್ಯದ 14 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್



