ಈ ಬಾರಿ ದೆಹಲಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಸ್ಥಾನ
ದೆಹಲಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಈ ಬಾರಿ ಕನ್ನಡಿಗರಿಗೆ ನಿರಾಶೆ ಕಾದಿದೆ. ಈ ಬಾರಿಯ ಪಥಸಂಚಲನದಲ್ಲಿ ಭಾಗಿಯಾಗಲು ಕರ್ನಾಟಕಕ್ಕೆ ಅವಕಾಶ ಸಿಕ್ಕಿಲ್ಲ. ಸಿರಿಧಾನ್ಯದಿಂದ ತಂತ್ರಜ್ಞಾನದವರೆಗೆ ಕರ್ನಾಟಕದ ಕೊಡುಗೆಯ ಪ್ರತೀಕವಾಗಿ ನಿರ್ಮಿಸಲಾಗಿದ್ದ ಸ್ಥಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಮಿಲೆಟ್ಸ್ ಟು ಮೈಕ್ರೋಚಿಪ್ ಟ್ಯಾಬ್ಲೋ ಪ್ರಸ್ತಾವನೆ ಅಂಗೀಕೃತವಾಗದ ಹಿನ್ನೆಲೆಯಲ್ಲಿ ಕರ್ನಾಟಕದ ಸ್ಯಬ್ಧಚಿತ್ರ ಪರೇಡ್ನಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದೆ. ಹೀಗಾಗಿ ಪ್ರಗತಿ ಮೈದಾನದಲ್ಲಿ ಸ್ತಬ್ಧಚಿತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದೆ ಎಂದು ವಾರ್ತಾ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಮುಂದುವರಿದ ಫೆಬ್ರವರಿ 1 ರ ಸಂಪ್ರದಾಯ : ಈ ಬಾರಿ ಭಾನುವಾರದಂದು ಕೇಂದ್ರ ಬಜೆಟ್ ಮಂಡನೆ
ಕಳೆದ ವರ್ಷ ಲಕ್ಕುಂಡಿ ವೈಭವದ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಅವಕಾಶ ಪಡೆದಿತ್ತು. ಈ ಭಾರಿ ಕರ್ನಾಟಕವು ಕೃಷಿ, ಕೈಗಾರಿಕೆ ನಾವೀನ್ಯತೆ ಹಾಗೂ ಸಂಸ್ಕೃತಿಯ ಮೂಲಕ ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುತ್ತಿದೆ. ಈ ಮೂಲಕ ಭಾರತವನ್ನು ಸಮೃದ್ಧಗೊಳಿಸುತ್ತಿದೆ. ಕರ್ನಾಟಕವು ಸಮಗ್ರ ಕೃಷಿಯಲ್ಲಿ ಸಮತೋಲಿತ ಪ್ರಗತಿ ಸಾಧಿಸಿದೆ ಎಂಬರ್ಥದಲ್ಲಿ ಸ್ತಬ್ಧಚಿತ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಆದರೆ ಈ ಟ್ಯಾಬ್ಲೋ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ



