ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಧ್ವಜಾರೋಹಣ, ಭಗವಾಧ್ವಜ ವಿವಾದ ಬಿಟ್ಟು ಬಿಡಿ : ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ : ಕರಾವಳಿ ಭಾಗದ ಪ್ರವಾಸೋದ್ಯಮದ ಅಭಿವೃದ್ದಿಯ ನಿಟ್ಟಿನಲ್ಲಿ ಮಲ್ಪೆಯ ಸೇಂಟ್ ಮೇರಿಸ್ ಐಲ್ಯಾಂಡ್‌ನಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ದ್ವಜಾರೋಹಣ ನಡೆಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿರುವ ಸೈಂಟ್ ಮೇರಿಸ್ ಐಲ್ಯಾಂಡ್ ಸೇರಿದಂತೆ ಒಟ್ಟು 116 ಐಲ್ಯಾಂಡ್ ಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರವಾಸೋದ್ಯಮದ ಅಭಿವೃದ್ದಿಗೆ ಶ್ರಮಿಸಲಿದ್ದೇವೆ ಎಂದಿದ್ದಾರೆ.
ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರವಾಸೋಧ್ಯಮ ಅಭಿವೃದ್ದಿಗಾಗಿ ನಾವು ತಣತೊಟ್ಟಿದ್ದೇವೆ. ರಾಜ್ಯ ಸರಕಾರ ಈ ಹೊಸ ಯೋಜನೆಗೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ. ಆಬಿವೃದ್ದಿಗಾಗಿ ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಿ ಎಂದು ಅವರು ಮನವಿ ಮಾಡಿದ್ದಾರೆ.
ವಾರಾಹಿ ಯೋಜನೆಗೆ ಶೀಘ್ರದಲ್ಲೇ ಪರಿಹಾರ
ವಾರಾಹಿ ನೀರಾವರಿ ಯೋಜನೆಯ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವಿನ ಕಚ್ಚಾಟಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿದ್ದಾರೆ, ವಾರಾಹಿ ಯೋಜನೆ ಜಿಲ್ಲೆಯ ಬಹುದಿನದ ಬೇಡಿಕೆ. ಇದು ರೈತರಿಗೆ ಅನುಕೂಲಕ್ಕಾಗಿ ಮಾಡಿದ ಯೋಜನೆ. ತಾಂತ್ರಿಕ ತಂಡ ಬಂದು ಹೋಗಿದೆ ಎಂದಿದ್ದಾರೆ.
ಮುಖ್ಯಮಂತ್ರಿಗಳಿಗೆ ಉಪಮುಖ್ಯಮಂತ್ರಿಗಳಿಗೆ ಇದರ ಬಗ್ಗೆ ಮಾಹಿತಿ ಇದೆ. ತಾಂತ್ರಿಕ ತಂಡದ ಜೊತೆ ಸಭೆ ಮಾಡುತ್ತೇವೆ ಆದಷ್ಟು ಬೇಗ ಪರಿಹಾರ ಕಲ್ಪಿಸುತ್ತೇವೆ. ಆದರೆ ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್ ಚಂದ್ರ ಶೆಟ್ಟಿ ಅವರ ಬಗ್ಗೆ ನಾನು ಮಾತನಾಡಲ್ಲ ಎಂದರು.
ಈಗಾಗಲೇ ವಾರಾಹಿ ಯೋಜನೆಗೆ ಸಂಬಂಧಿಸಿದಂತೆ ತಾಂತ್ರಿಕ ತಂಡ ಪರಿಶೀಲನೆ ನಡೆಸಿದೆ, ಜಿಲ್ಲಾಡಳಿತಕ್ಕೆ ಸಂಪೂರ್ಣ ಮಾಹಿತಿ ನೀಡಿದೆ. ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುತ್ತೇವೆ. ಆದರೆ ಈ ಯೋಜನೆ ನೆನೆಗುದಿಗೆ ಬಿದ್ದಿರುವುದು ದುರ್ದೈವ. ನಮ್ಮ ಕಾಲಘಟ್ಟದಲ್ಲಿ ಖಂಡಿತವಾಗಿ ಯೋಜನೆ ಮುಗಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ರಾಜಕೀಯ ಮಾಡಲ್ಲ
ಕಾರ್ಕಳದಲ್ಲಿರುವ ಪರಶುರಾಮ ಥೀಂ ಪಾರ್ಕ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿರ್ಲಕ್ಷ ಮಾಡುತ್ತಿದೆ ಎನ್ನುವ ಮಾಜಿ ಸಚಿವ ಸುನಿಲ್ ಕುಮಾರ್ ಆರೋಪಕ್ಕೆ ಸಂಬಂಧಿಸಿದಂತೆ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.
ಪರಶುರಾಮನನ್ನು ಕರಾವಳಿ ಭಾಗದ ಜನರು ಆರಾಧನೆ ಮಾಡುತ್ತಿದ್ದಾರೆ. ನಮಗೂ ಕೂಡ ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಇಷ್ಟ ಇಲ್ಲ ಎಂದಿದ್ದಾರೆ.
400 ದರೋಡೆ ಪ್ರಕರಣ : ಕರ್ನಾಟಕ ಪೊಲೀಸರಿಗೆ ಅಭಿನಂದನೆ
ಕರ್ನಾಟಕದ ಗಡಿಭಾಗದಲ್ಲಿ 400 ಕೋಟಿ ದರೋಡೆ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ ಅವರು, 400 ಕೋಟಿಯ ವಿಚಾರ ಕೇಳಿ ನನ್ನ ಎದೆ ಜಲ್ ಎಂದಿತ್ತು. 400 ಕೋಟಿ ದರೋಡೆ ಅಂತೆ. ದನ್ನು ನಮ್ಮ ಪೊಲೀಸರು ಚೇಸ್ ಮಾಡಿ ಹಿಡಿದಿದ್ದಾರಂತೆ. ಪೊಲೀಸರಿಗೆ ಮೊದಲನೆಯದಾಗಿ ಅಭಿನಂದನೆಗಳು ಎಂದಿದ್ದಾರೆ.
ನಾನು ಕನಸಿನಲ್ಲೂ 400 ಕೋಟಿ ರೂಪಾಯಿಯನ್ನು ಊಹಿಸಿಲ್ಲ. ಆ ಹಣ ಎಲ್ಲಿಂದ ಬಂತು ಎಲ್ಲಿಗೆ ಹೋಗ್ತಾ ಇತ್ತು ಯಾರಿಗೆ ಸಂಬಂಧಪಟ್ಟಿದ್ದು ತನಿಖೆಯಿಂದ ಹೊರ ಬರಲಿ ಎಂದಿದ್ದಾರೆ.
ಧ್ವಜ ಹಾರಿಸಿದ ವಿಚಾರ ಬಿಟ್ಟು ಬಿಡಿ : ಹೆಬ್ಬಾಳ್ಕರ್
ಉಡುಪಿ ಪರ್ಯಾಯ ವೇಳೆ ಜಿಲ್ಲಾಧಿಕಾರಿ ಭಗವದ್ವಜ ಹಾರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಉಡುಪಿಯ ಪರ್ಯಾಯ ಒಂದು ಧಾರ್ಮಿಕ ಕಾರ್ಯಕ್ರಮ. ಸಂಸ್ಕೃತಿ ಧಾರ್ಮಿಕತೆಗೆ ಉಡುಪಿ ಹೆಸರುವಾಸಿ. ಈ ವಿಚಾರ ನನಗೆ ಗೊತ್ತಿದೆ. ದ್ವಜ ಹಾರಿಸಿದ ವಿಚಾರ ಅಲ್ಲಿಗೆ ಬಿಟ್ಟುಬಿಡಿ ಎಂದಿದ್ದಾರೆ.
ಅಲ್ಲಿ ನಡೆದಿರುವುದು ಧಾರ್ಮಿಕ ಕಾರ್ಯಕ್ರಮ. ಧಾರ್ಮಿಕ ಮನೋಭಾವನೆಯನ್ನು ಕೆರಳಿಸುವ ಕೆಲಸ ಮಾಡಬಾರದು. ಯಾರು ಏನೇ ಮಾತಾಡಲಿ, ಅಗತ್ಯ ಬಿದ್ದರೆ ನಾನು ಚರ್ಚಿಸುತ್ತೇನೆ ಎಂದರು.
ದ್ವೇಷ ಭಾಷಣ ಕಾನೂನು ಜಾರಿಗೂ ಮುನ್ನ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆಯೂ ಅವರು ಮಾತನಾಡಿದ್ದಾರೆ. ರಈಗ ಕಾಂಗ್ರೆಸ್ ಸರಕಾರ ಇದೆ. ದ್ವೇಷ ಭಾಷಣ ವಿರುದ್ಧ ಕಾನೂನು ರೀತಿಯಲ್ಲಿ ಮಸೂದೆ ತಂದಿದ್ದೇವೆ. ಭವಿಷ್ಯದಲ್ಲಿ ಯಾವತ್ತಾದರೂ ಬಿಜೆಪಿ ಸರಕಾರ ಬರಬಹುದು. ಅವರು ನಮ್ಮ ವಿರುದ್ಧವೂ ಇದನ್ನು ಬಳಕೆ ಮಾಡಬಹುದು. ದೇಶದ ಐಕ್ಯತೆ ಸಮಗ್ರತೆ ಒಂದೇ ದ್ವೇಷ ಭಾಷಣ ಮಸೂದೆಯ ಉದ್ದೇಶ ಎಂದರು.
ಜನರು ಒಟ್ಟಿಗೆ ಇರಬೇಕಾದರೆ ಜಾತಿ, ಸ್ಥಳ, ಭಾಷೆ, ವ್ಯಕ್ತಿತ್ವಗಳನ್ನು ನಿಂದಿಸಬಾರದು. ಈ ಕಾರಣಕ್ಕೆ ಸಂವಿಧಾನದ ಆಶಯದಂತೆ ಮಸೂದೆ ತಂದಿದ್ದೇವೆ ಬಿಜೆಪಿಯವರು ಏನಾದರೂ ಹೇಳಲಿ. ದೇಶದ ಸಂವಿಧಾನಕ್ಕೆ ಧಕ್ಕೆ ಬರಬಾರದು ಎಂಬುದು ಮಾತ್ರ ನಮ್ಮ ಉದ್ದೇಶವೆಂದ್ರು.
ಕಾಂಗ್ರೆಸಿನವರು ಯಾರಾದರೂ ದ್ವೇಷ ಭಾಷಣ ಮಾಡಿದರೆ ಕಾಂಗ್ರೆಸ್ನವರ ಮೇಲು ಕಾನೂನು ಜಾರಿಯಾಗುತ್ತದೆ. ವ್ಯಕ್ತಿಗಳ ಹಿನ್ನೆಲೆಯನ್ನು ನೋಡಿ ನೋಟಿಸ್ ಕೊಟ್ಟಿರಬಹುದು. ನೋಟಿಸ್ ಕೊಟ್ಟಿರುವ ವಿಚಾರ ನನಗೆ ಗೊತ್ತಿಲ್ಲ. ಅವರ ಹಿನ್ನೆಲೆ ನೋಡಿ ಅಪಾಯ ಆಗಬಾರದು ಎಂದು ನೋಟಿಸ್ ಕೊಟ್ಟಿರಬಹುದು ಎಂದು ಹೇಳಿದ್ದಾರೆ.



