ಜರಾ ಜೋಪಾನ…! ಬಿದ್ದೀತು ರೀ ಬಿದರಿ!!

ಬಿದರಿ ಕಲೆಗೆ ಜಿಐ ಟ್ಯಾಗ್ ಸಿಕ್ತು, ನಾನಾ ಸಮಾರಂಭಗಳಲ್ಲಿ ಕರಕುಶಲ ಸಮ್ಮೇಳನಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಕ್ತು, ಆದರೆ ಈಗ ಈ ಕಲೆಗೆ ಮತ್ತೊಂದು ತೊಂದರೆ ಎದುರಾಗಿದೆ. ಅದುವೇ ಬೆಳ್ಳಿಯ ಬೆಲೆ ಗಗನಕ್ಕೇರಿರುವುದು! ಹೌದು, ಬೆಳ್ಳಿ ಈಗ ಚಿನ್ನಕ್ಕಿಂತ ತುಟ್ಟಿ. ಇಂತಹ ಸಮಯದಲ್ಲಿ ಬೆಳ್ಳಿಯೇ ಜೀವಾಳವಾಗಿರುವ ಬಿದರಿ ಕಲೆ ಉಳಿಯುವುದು ದುಸ್ತರವಾಗುತ್ತಿದೆ.
ಬಿದರಿ ಕಲೆಯ ಹುಟ್ಟು
ಬಿದರಿ ಕಲೆಯು ಕರ್ನಾಟಕದ ಬೀದರ್ ನಗರದ ವಿಶಿಷ್ಟ ಮತ್ತು ಐತಿಹಾಸಿಕ ಲೋಹದ ಕೆತ್ತನೆ ಕಲೆಯಾಗಿದೆ. ಇದು 14ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಪರ್ಷಿಯನ್ ಕುಶಲಕರ್ಮಿಗಳಿಂದ ಪರಿಚಯಿಸಲ್ಪಟ್ಟಿತು ಮತ್ತು ಕಾಲಾನಂತರದಲ್ಲಿ ಸ್ಥಳೀಯ ಸ್ಪರ್ಶದೊಂದಿಗೆ ಭಾರತೀಯ ಕಲೆಯಾಗಿ ಪ್ರವರ್ಧಮಾನಕ್ಕೆ ಬಂತು.
ಬಿದರಿ ಕಲೆಯ ವಿಶೇಷತೆ
ಈ ಕಲೆಯು ಮುಖ್ಯವಾಗಿ ಸತು ಮತ್ತು ತಾಮ್ರದ ಮಿಶ್ರಲೋಹದ ಮೇಲೆ ಬೆಳ್ಳಿ ಅಥವಾ ಕೆಲವೊಮ್ಮೆ ಚಿನ್ನದ ಎಳೆಗಳಿಂದ ಸೂಕ್ಷ್ಮವಾದ ವಿನ್ಯಾಸಗಳನ್ನು ಕೆತ್ತನೆ ಮತ್ತು ಲೇಪನ ಮಾಡುವ ವಿಧಾನಗಳನ್ನೊಳಗೊಂಡಿದೆ.
ಇದನ್ನೂ ಓದಿ: 25 ವರ್ಷಗಳ ಗೆಳೆತನ; ಮೋದಿ ಪುಟಿನ್ ದೋಸ್ತಿ ಬೆಳೆದು ಬಂದಿದ್ದು ಹೀಗೆ-https://kannada.newsnext.live/international/modi-putin-friendship-of-25-years-how-nam-narendra-modi-cm-to-pm-journey/
ಏನೆಲ್ಲಾ ತಯಾರಾಗುತ್ತದೆ?
ಬಿದರಿ ಕಲಾಕೃತಿಗಳು ಹೂದಾನಿಗಳು, ಆಭರಣ ಪೆಟ್ಟಿಗೆಗಳು, ಟ್ರೇಗಳು, ಲೋಟಗಳು ಮತ್ತು ಗೃಹಾಲಂಕಾರಿಕ ವಸ್ತುಗಳಂತಹ ವಿವಿಧ ರೂಪಗಳಲ್ಲಿ ಲಭ್ಯವಿದ್ದು, ಇವು ತಮ್ಮ ಸೌಂದರ್ಯ ಮತ್ತು ಬಾಳಿಕೆಗಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿವೆ. ಈ ಕಲೆಯು 2006 ರಲ್ಲಿ ಭೌಗೋಳಿಕ ಸೂಚಕ (Geographical Indication – GI) ಟ್ಯಾಗ್ ಈ ಕಲೆಯು ಮಿಶ್ರಲೋಹಗಳನ್ನು ಎರಕಹೊಯ್ದು, ನುಣುಪುಗೊಳಿಸಿ, ವಿನ್ಯಾಸಗಳನ್ನು ಕೆತ್ತಿ, ಬೆಳ್ಳಿಯನ್ನು ಲೇಪಿಸಿ, ಮತ್ತೆ ನುಣುಪುಗೊಳಿಸಿ, ಹೊಳಪು ನೀಡಿ, ನಂತರ ಕಪ್ಪಾಗಿಸುವಿಕೆ ಸೇರಿದಂತೆ ಎಂಟು ಹಂತಗಳ ಸಂಕೀರ್ಣ ಪ್ರಕ್ರಿಯೆಯನ್ನು ಒಳಗೊಂಡಿದೆ.
ವಿದೇಶದಲ್ಲಿ ಬೇಡಿಕೆ ಇದೆ
ಬೀದರ್ನಲ್ಲಿ ಸರಿಸುಮಾರು 135 ರಿಂದ 160 ಕುಶಲಕರ್ಮಿ ಕುಟುಂಬಗಳು ಅಥವಾ ಘಟಕಗಳು ಮಾತ್ರ ಈ ಕಲೆಯಲ್ಲಿ ತೊಡಗಿವೆ. ಈ ಸಂಖ್ಯೆ ಕಾಲಾನಂತರದಲ್ಲಿ ಕಡಿಮೆಯಾಗುತ್ತಿದೆ. ಈ ಕಲೆಗೆ ವಿದೇಶಗಳಲ್ಲಿ ಮತ್ತು ಪ್ರವಾಸಿಗರಲ್ಲಿ ಉತ್ತಮ ಬೇಡಿಕೆಯಿದೆ. ಹೊಸತನದ ವಿನ್ಯಾಸಗಳು ಮತ್ತು ವೈವಿಧ್ಯಮಯ ಉತ್ಪನ್ನಗಳು (ಉದಾಹರಣೆಗೆ, USB ಡ್ರೈವ್ ಕವರ್ಗಳು, ಕೀ ಚೈನ್ಗಳು, ಲೈಟಿಂಗ್ ಫಿಟ್ಟಿಂಗ್ಗಳು) ಮಾರುಕಟ್ಟೆಯನ್ನು ವಿಸ್ತರಿಸಲು ಸಹಾಯ ಮಾಡುತ್ತಿವೆ.
ಸರ್ಕಾರ ಜೊತೆಗಿದ್ದರೂ ಬೆಳ್ಳಿ ಮುಳುಗಿಸಿದೆ
ಆದರೆ ಈಗ ಬೆಳ್ಳಿಯ ಬೆಲೆ ಎರಡು ಲಕ್ಷದ ಸಮೀಪಕ್ಕೆ ಬರುತ್ತಿದೆ. ಸರ್ಕಾರ 50% ಸಹಾಯಧನ ಕೊಡುವ ಯೋಜನೆ ಜಾರಿಗೇ ತಂದಿದ್ದರೂ ಕೂಡ ಇದು ಯಾವುದೂ ಕೂಡ ತಯಾರಿಕೆಗೆ ಸಾಲುವುದಿಲ್ಲ. ಸಾಕಾದರೂ ಲಾಭ ಗಿಟ್ಟುವುದಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. ಅದರಲ್ಲೂ ಪೈಪೋಟಿ ಬೇರೆ ಏರ್ಪಟ್ಟಿದೆ ಎಲ್ಲರಿಗೂ ಎಲ್ಲಾ ಸೌಲಭ್ಯ ತಲಪೋದಿಲ್ಲವಾದ್ದರಿಂದ ಬಡ ಕಲಾವಿದರು ಇನ್ನೂ ಕೂಡ ಕಷ್ಟದಲ್ಲೇ ತಮ್ಮ ವೃತ್ತಿ ಮುಂದುವರೆಸಿದ್ದಾರೆ.
ಆತಂಕದ ಸ್ಥಿತಿ ತಲುಪಿದ ಕಲೆ
ಈಗಾಗಲೇ 1000-50000ದವರೆಗೆ ಈ ಬಿದರಿ ಕಲೆಯ ವಸ್ತುಗಳು ಕಾವೇರಿ ಮಳಿಗೆ ಸೇರಿದಂತೆ ಹಲವೆಡೆ ಮಾರಾಟವಾಗುತ್ತಿವೆ. ಒಂದು ಸಣ್ಣ ಪೇಪರ್ ವೇಯ್ಟ್ ತಯಾರಿಸಲೂ ಕೂಡ 200 ಗ್ರಾಂ ಬೆಳ್ಳಿ ಬೇಕಾಗುವುದರಿಂದ ನಿರ್ವಹಣಾ, ತಯಾರಿಕಾ, ಸಾಗಾಣಿಕೆ ವೆಚ್ಚಕ್ಕೆ ಈಗಿರುವ ರೇಟ್ ಸರಿತೂಗೋದಿಲ್ಲ. ಜಾಸ್ತಿ ದರವಾದರೆ ಕೊಳ್ಳುಗರೂ ಕಮ್ಮಿಯಾಗುತ್ತಾರೆ. ಆದ್ದರಿಂದ ಈಗ ಇದು ಅಲಂಕಾರಿಕ ವಸ್ತುವಿನ ದರ್ಜೆಯಿಂದ Antic ಸ್ಥಾನಕ್ಕೆ ಏರುವಂತೆ ದುಸ್ಥಿತಿ ಬರಲಿದೆ.



