ಕಟಕ ರಾಶಿಯಲ್ಲಿ ಗುರು ಗ್ರಹದ ಸಂಚಾರ: ಈ ರಾಶಿಯವರಿಗೆ ಭಾಗ್ಯೋದಯದ ಕಾಲ

Jupiter Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಅತ್ಯಂತ ಶುಭ ಗ್ರಹವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಗುರುವಿನ ದೃಷ್ಟಿ ಮಂಗಳಕರವಾಗಿದ್ದರೆ ಕಠಿಣ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಬಹುದು ಎಂದು ಹೇಳಲಾಗುತ್ತದೆ.

ಗುರು ಗ್ರಹವು ಉನ್ನತಿ, ಅದೃಷ್ಟ ಮತ್ತು ಬುದ್ಧಿವಂತಿಕೆಯನ್ನು ತೋರಿಸುವ ಗ್ರಹವಾಗಿದೆ. ಅಕ್ಟೋಬರ್‌ 18 ರಂದು ದೇವಗುರು ಬ್ರಹಸ್ಪತಿಯು ತನ್ನ ಪಥವನ್ನು ಬದಲಾಯಿಸುತ್ತಾನೆ. ಸದ್ಯ ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವ ಗುರುವು ಕಟಕ ರಾಶಿಗೆ ಪ್ರವೇಶಿಸುತ್ತಾನೆ.

ಜ್ಯೋತಿಷ್ಯದಲ್ಲಿ ಈ ಸಂಚಾರವು ಬಹಳ ಮಹತ್ವದ್ದಾಗಿದೆ. ಗುರು ಗ್ರಹದ ಪ್ರಭಾವವು ವ್ಯಕ್ತಿಯ ಅದೃಷ್ಟ ಮತ್ತು ಅವಕಾಶದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಗುರು ಪುನರ್ವಸು, ವಿಶಾಖ ಮತ್ತು ಪೂರ್ವ ಭಾದ್ರಪದ ನಕ್ಷತ್ರಪುಂಜಗಳನ್ನು ಆಳುತ್ತಾನೆ.

ಈ ನಕ್ಷತ್ರಕ್ಕೆ ಸಂಬಂಧಿಸಿದವರಿಗೆ ಗುರುವಿನ ವಿಶೇಷ ಆಶೀರ್ವಾದವಿರುತ್ತದೆ. ಕಟಕ ರಾಶಿಯಲ್ಲಿ ಗುರುವಿನ ಸಂಚಾರವು ಕೆಲವು ರಾಶಿಗಳ ಮೇಲೆ ಹೆಚ್ಚಿನ ಅದೃಷ್ಟ, ಹೊಸ ಅವಕಾಶ, ವೃತ್ತಿಯಲ್ಲಿ ಪ್ರಗತಿ, ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ತರುತ್ತದೆ.

ಗುರು ಗ್ರಹದ ಈ ಚಲನೆಯಿಂದ ಯಾವ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ ಎಂದು ನೋಡೋಣ.

ಮೇಷ ರಾಶಿ

ಕಟಕ ರಾಶಿಗೆ ಗುರು ಗ್ರಹದ ಸಂಚಾರವು ಮೇಷ ರಾಶಿಯವರಿಗೆ ಶುಭಕರವಾಗಿರುತ್ತದೆ. ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ. ಕೆಲಸದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ.

ವ್ಯವಹಾರ ಹಾಗೂ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತವೆ. ‌ಬಹಳ ಕಾಲದಿಂದ ಅಪೂರ್ಣವಾಗಿ ಇರುವ ಕೆಲಸಗಳು ಪೂರ್ಣಗೊಳ್ಳಲಿವೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆಯಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ವೃತ್ತಿಜೀವನದಲ್ಲಿ ಗುರು ಹೆಚ್ಚಿನ ಪ್ರಯೋಜನ ನೀಡಲಿದ್ದಾನೆ. ಆರ್ಥಿಕ ಲಾಭ ಹಾಗೂ ಶುಭ ಸುದ್ದಿಗಳನ್ನು ಕೇಳುತ್ತಾರೆ. ಕುಟುಂಬದೊಂದಿಗೆ ಸಮಯ ಕಳೆಯಲು ಹಾಗೂ ಪ್ರಯಾಣ ಮಾಡಲು ಅವಕಾಶಗಳು ಸಿಗುತ್ತವೆ.

ಅವರ ಕೆಲಸದಿಂದ ಮೇಲಾಧಿಕಾರಿಗಳು ಸಂತುಷ್ಟರಾಗುವುದರಿಂದ ಕಚೇರಿಯಲ್ಲಿ ಗೌರವ ಹೆಚ್ಚಾಗುತ್ತದೆ.

ಇದನ್ನೂ ಓದಿ: ದಿನಭವಿಷ್ಯ: ಮಹಾಅಷ್ಟಮಿ ಯಾವ ರಾಶಿಗೆ ಶುಭ

ಸಿಂಹ ರಾಶಿ

ಗುರು ಗ್ರಹದ ಸಂಚಾರವು ಸಿಂಹ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಬಹಳ ದಿನಗಳಿಂದ ಕೈಸೇರದ ಹಣವು ಮರಳಿಬರುವ ಲಕ್ಷಣಗಳಿವೆ. ಕೆಲಸದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ದೊರಕಲಿದೆ. ವ್ಯವಹಾರದಲ್ಲಿ ಪ್ರಗತಿಯಿರುತ್ತದೆ. ಕಲೆ, ಸೃಜನಶೀಲ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ

ಈ ರಾಶಿಯವರ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಆದರೆ, ಅದೇ ಸಮಯದಲ್ಲಿ ಖರ್ಚು ವೆಚ್ಚಗಳ ಮೇಲೂ ಗಮನವಿರುವುದು ಅಗತ್ಯವಾಗಿದೆ. ವೈವಾಹಿತ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚುವುದರಿಂದ ಮನೆಯಲ್ಲಿ ಸುಖ, ಸಂತೋಷ ಹೆಚ್ಚಾಗುತ್ತದೆ.

ಇದನ್ನೂ ಓದಿ: ನವರಾತ್ರಿಯ ನಂತರ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ

(Jupiter Transit in Cancer in October 18 these zodiac signs gets extremely lucky)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories