ಕುಂಭ ರಾಶಿಗೆ ಮಂಗಳನ ಪ್ರವೇಶ: ಏಪ್ರಿಲ್‌ 1 ರವರೆಗೆ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಧೈರ್ಯ ಹಾಗೂ ಸಂಪತ್ತಿನ ಗ್ರಹವೆಂದು ಪರಿಗಣಿಸಲಾಗಿದೆ. ಶುಭವನ್ನು ತರುವ ಮಂಗಳ ಗ್ರಹವು ಫೆಬ್ರವರಿ 23 ರಂದು ಮಕರ ರಾಶಿಯನ್ನು ತೊರೆದು ತನ್ನ ಮಿತ್ರ ಶನಿಯ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಕಂಭ ರಾಶಿಯಲ್ಲಿ ಮಂಗಳನ ಈ ಸಂಚಾರವು ಏಪ್ರಿಲ್‌ 1, 2026 ರವರೆಗೆ ನಡೆಯಲಿದೆ. ಮಂಗಳ ಗ್ರಹವು ಅಗ್ನಿ ಅಂಶವನ್ನು ಪ್ರತಿನಿಧಿಸುತ್ತದೆ. ಕುಂಭ ರಾಶಿಯು ವಾಯುವನ್ನು ಪ್ರತಿನಿಧಿಸುತ್ತದೆ. ಇವೆರಡರ ಸಂಯೋಜನೆಯು ಅನೇಕ ರಾಶಿಯವರ ಮೇಲೆ ಮಹತ್ವದ ಬದಲಾವಣೆಯನ್ನು ತರುತ್ತದೆ. ವೃತ್ತಿ, ಸಂಬಂಧ, ಕೆಲಸದಲ್ಲಿ ಪ್ರಗತಿ ಮುಂತಾದವುಗಳ ಮೇಲೆ ಪರಿಣಾಮ ಬೀರಲಿದೆ. ಏಪ್ರಿಲ್‌ 1 ರವರೆಗೆ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ನೋಡೋಣ.

ಮೇಷ ರಾಶಿ

ಕುಂಭ ರಾಶಿಯಲ್ಲಿ ಮಂಗಳನ ಸಂಚಾರವು ಮೇಷ ರಾಶಿಯವರ ಆತ್ಮವಿಶ್ವಾಸ ಹೆಚ್ಚಲಿದೆ. ನಿಮ್ಮ ವೃತ್ತಿ ಜೀವನ ಬಡ್ತಿ ಸಿಗುವ ಸಂಭವವಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗಿ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿದೆ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲಮೇಲೇರಲಿದೆ.

ಮಿಥುನ ರಾಶಿ

ಈ ಸಮಯವು ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ. ವಿದೇಶ ಪ್ರವಾಸ ಮತ್ತು ಹೊಸ ಯೋಜನೆಗಳಿಗೆ ಇದು ಸಕಾಲ. ಆರ್ಥಿಕ ಲಾಭದ ಜೊತೆಗೆ ಬಾಕಿ ಇರುವ ಹಣವನ್ನು ನೀವು ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಅವಧಿಯು ವಿಶೇಷವಾಗಿ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ.

ಸಿಂಹ ರಾಶಿ

ಮಂಗಳನ ಸಂಚಾರದಿಂದ ಸಿಂಹ ರಾಶಿಯವರ ವ್ಯಾಪಾರ ವ್ಯವಹಾರಗಳು ವಿಸ್ತರಣೆಯಾಗಲಿದೆ. ವೈವಾಹಿಕ ಜೀವನವು ಸಹ ಸುಧಾರಣೆಗಳನ್ನು ಕಾಣುತ್ತದೆ. ಆದರೂ ನೀವು ಸಂಬಂಧಗಳನ್ನು ಕಾಪಾಡಿಕೊಳ್ಳಲು ನಿಮ್ಮ ಹಠಾತ್ ಕೋಪವನ್ನು ನಿಯಂತ್ರಿಸಬೇಕಾಗುತ್ತದೆ.

ತುಲಾ ರಾಶಿ

ತುಲಾ ರಾಶಿಯವರ ಜೀವನದಲ್ಲಿ ಸೃಜನಶೀಲತೆ ಮತ್ತು ಉತ್ಸಾಹವನ್ನು ತರುವ ಸಮಯವಾಗಿದೆ. ಕಲೆ, ಮಾಧ್ಯಮ ಮತ್ತು ವಿನ್ಯಾಸ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಕಂಡುಕೊಳ್ಳಬಹುದು. ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದೆ. ಹೂಡಿಕೆಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು.

ಧನು ರಾಶಿ

ಧನು ರಾಶಿಯವರ ಮಂಗಳ ಗ್ರಹದ ಪ್ರಭಾವದಿಂದ ಬರಲಿರುವ ಅಪಾಯಗಳನ್ನು ಎದುರಿಸಲು ಶಕ್ತರಾಗಿರುತ್ತಾರೆ. ಇದು ಮಾರ್ಕೆಟಿಂಗ್ ಮತ್ತು ಮಾರಾಟದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಗಮನಾರ್ಹ ಲಾಭವನ್ನು ತಂದುಕೊಡಬಹುದು. ಅಲ್ಪಾವಧಿಯ ಪ್ರವಾಸಗಳು ಆರ್ಥಿಕವಾಗಿ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಸಹೋದರರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ.

ಕುಂಭ ರಾಶಿ

ಮಂಗಳ ಗ್ರಹದ ಈ ಸಂಚಾರವು ಕುಂಭ ರಾಶಿಯಲ್ಲಿ ಸಂಭವಿಸುತ್ತಿದ್ದರಿಂದ ಇದು ನಿಮ್ಮ ವ್ಯಕ್ತಿತ್ವ ಮತ್ತು ಕೆಲಸದ ಶೈಲಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೀವು ಮೊದಲಿಗಿಂತ ಹೆಚ್ಚು ಚೈತನ್ಯಶೀಲರಾಗಿರುತ್ತೀರಿ ಮತ್ತು ನಿಮ್ಮ ನಾಯಕತ್ವದ ಕೌಶಲ್ಯಗಳು ಸುಧಾರಿಸುತ್ತವೆ. ಪ್ರಮುಖ ವೃತ್ತಿ ಬದಲಾವಣೆ ಅಥವಾ ಹೊಸ ಆರಂಭ ಸಾಧ್ಯ. ಆದರೆ ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರವಹಿಸಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories