ಹೊಸ ವರ್ಷದ ಮೊದಲ ತಿಂಗಳಿನಲ್ಲೇ ಶುಕ್ರ ಗ್ರಹ ಅಸ್ತ: ಶುಭ ಕಾರ್ಯಗಳೇನಿದ್ದರೂ ಫೆಬ್ರವರಿಯ ನಂತರ

Shukra Ashta 2025: ಹಿಂದೂ ಧರ್ಮದಲ್ಲಿ ಶುಭ ಕಾರ್ಯಗಳಿಗೆ ಮುಹೂರ್ತವನ್ನು ನಿಗದಿಪಡಿಸುವಾಗ ಕೆಲವು ಗ್ರಹಗಳ ಸ್ಥಾನವನ್ನು ನಿರ್ದಿಷ್ಟವಾಗಿ ಗಮನಿಸಲಾಗುತ್ತದೆ.

ಇವುಗಳಲ್ಲಿ ರವಿ ಮತ್ತು ಗುರು ಗ್ರಹದ ಜೊತೆಗೆ ಶುಕ್ರನ ಸ್ಥಾನವೂ ವಿಶೇಷವಾಗಿದೆ. ಮದುವೆ, ಉಪನಯನ, ಗೃಹಪ್ರವೇಶದಂತಹ ಶುಭ ಕಾರ್ಯಗಳ ಸಮಯದಲ್ಲಿ ರವಿ ಮತ್ತು ಗುರು ದುರ್ಬಲವಾಗಿದ್ದರೆ ಆ ಸಮಯದಲ್ಲಿ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ.

ಅದೇ ರೀತಿ ಶುಕ್ರ ಉದಯಿಸದಿದ್ದರೂ ಶುಭ ಕಾರ್ಯಕ್ರಮಗಳನ್ನು ನಡೆಸಲಾಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನು ಅಸ್ತದಲ್ಲಿದ್ದಾಗ ಶುಭ ಸಮಾರಂಭಗಳನ್ನು ನಿಷೇಧಿಸಲಾಗುತ್ತದೆ.

ಶುಕ್ರನ ಉದಯದವರೆಗೆ ಕಾಯುವಿಕೆ ಮುಂದುವರಿಯುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಮಕರ ಸಂಕ್ರಾಂತಿಯ (ಜನವರಿ 15) ನಂತರ ಶುಭ ಕಾರ್ಯಕ್ರಮಗಳನ್ನು ನಡೆಯಬಹುದು.

ಆದರೆ ಈ ಬಾರಿ, ಜನವರಿಯಲ್ಲಿ ಶುಕ್ರನು ಅಸ್ತವಾಗಿರುವುದರಿಂದ ಯಾವುದೇ ಕಾರ್ಯಕ್ರಮಗಳನ್ನು ನಡೆಸಲಾಗುವುದಿಲ್ಲ.

ಶುಕ್ರ ಅಸ್ತ ಎಂದಿನಿಂದ ಪ್ರಾರಂಭ?

ಜ್ಯೋತಿಷ್ಯದ ಪ್ರಕಾರ ಶುಕ್ರನು ಒಂದು ವರ್ಷಕ್ಕೆ ಎರಡು ಬಾರಿ ಅಸ್ತನಾಗುತ್ತಾನೆ. ವೈಜ್ಞಾನಿಕವಾಗಿ ಶುಕ್ರನು ಸೂರ್ಯನಿಗೆ ತುಂಬಾ ಸಮೀಪ ಬಂದಾಗ, ಸೂರ್ಯನ ಬೆಳಕಿನಲ್ಲಿ ಶುಕ್ರನ ಹೊಳಪು ಕಳೆದುಕೊಳ್ಳುತ್ತದೆ.

ಇದರಿಂದಾಗಿ ಶುಕ್ರ ಗ್ರಹವು ಅದೃಶ್ಯವಾಗುತ್ತದೆ. ಇದರಿಂದ ಜಾತಕದಲ್ಲಿ ಶುಕ್ರನು ಗಮನಾರ್ಹವಾಗಿ ದುರ್ಬಲಗೊಳ್ಳುತ್ತಾನೆ. ಹೀಗಾಗಿ ಅದು ಶುಭ ಫಲಿತಾಂಶಗಳನ್ನು ನೀಡುವಲ್ಲಿ ವಿಫಲವಾಗುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನಗಳಲ್ಲಿ ಶುಭ ಕಾರ್ಯಕ್ರಮಗಳನ್ನು ನಡೆಸುವುದು ನಿಷಿದ್ಧವಾಗಿದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಈ ವರ್ಷ ಶುಕ್ರನು ಗುರುವಾರ, ಡಿಸೆಂಬರ್ 11, 2025 ರಂದು ಬೆಳಿಗ್ಗೆ 06:35 ಕ್ಕೆ ಅಸ್ತನಾಗುತ್ತಾನೆ, ಮತ್ತೆ ಅವನು ಫೆಬ್ರವರಿ 01, 2026 ರಂದು ಉದಯಿಸುತ್ತಾನೆ. ಅಂದರೆ ಸುಮಾರು 53 ದಿನಗಳವರೆಗೆ ಶುಕ್ರನು ಅಸ್ತನಾಗಿರುತ್ತಾನೆ.

ಇದನ್ನೂ ಓದಿ: ಮನೆಯ ಸಕಾರಾತ್ಮಕ ಶಕ್ತಿಯನ್ನು ಸಮತೋಲನಗೊಳಿಸುವುದಾದರೆ ಈ ದಿಕ್ಕನ್ನು ಎಂದಿಗೂ ಮರೆಯಬೇಡಿ

ಯಾವ ಕೆಲಸಗಳನ್ನು ಮಾಡಬಾರದು?

ಶುಕ್ರನು ಸುಮಾರು ಒಂದೂವರೆ ತಿಂಗಳುಗಳ ಕಾಲ ಅಸ್ತನಾಗಿರುತ್ತಾನೆ. ಈ ಅವಧಿಯಲ್ಲಿ ಮದುವೆ, ಉಪನಯನ, ಗೃಹಪ್ರವೇಶ, ಮುಂತಾದ ಶುಭ ಕಾರ್ಯಗಳನ್ನು ಮಾಡಬಾರದು.

ಏಕೆಂದರೆ ಶುಕ್ರನನ್ನು ಪ್ರೀತಿ, ಸೌಂದರ್ಯ, ಆಕರ್ಷಣೆ ಹಾಗೂ ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರುತ್ತಾನೆ. ವೈವಾಹಿಕ ಜೀವನದಲ್ಲಿ ಅಪಶ್ರುತಿ ಏಳುವ ಸಂಭವವಿರುವುದರಿಂದ ಈ ಸಮಯದಲ್ಲಿ ಮದುವೆಗಳು ನಿಷಿದ್ಧ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories