ಈ 3 ಚಿಹ್ನೆಗಳನ್ನು ಮನೆಯ ಈ ಜಾಗದಲ್ಲಿ ಬರೆದು ನೋಡಿ: ಸುಖ, ಶಾಂತಿ, ಸಮೃದ್ಧಿ ನೆಲೆಸಲು ಇದೇ ಅತ್ಯಂತ ಸುಲಭ ಉಪಾಯ!
Religious Symbol Vastu Tips: ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹಲವು ಮಾರ್ಗೋಪಾಯಗಳನ್ನು ಹುಡುಕುತ್ತಾರೆ.
ನೆಮ್ಮದಿಯ ಜೀವನವೇ ಇಂದಿನ ದಿನದ ಅಗತ್ಯವಾಗಿದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿ, ಸಕಾರಾತ್ಮಕ ಶಕ್ತಿ ನೆಲೆಸಲು ವಾಸ್ತು ಪರಿಹಾರಗಳನ್ನು ಅಳವಡಿಸಿಕೊಳ್ಳುತ್ತಾರೆ.
ಉದಾಹರಣೆಗೆ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ನೆಲ ಒರೆಸುವುದರಿಂದ ಮನೆಯಲ್ಲಿ ತುಂಬಿಕೊಂಡಿದ್ದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಆದರೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ?
ಮನೆಯಲ್ಲಿ ಸದಾ ಧನಾತ್ಮಕತೆ ನೆಲೆಸಿರುವಂತೆ ಮಾಡುವುದು ಹೇಗೆ? ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಉಪಾಯಗಳನ್ನು ಹೇಳಲಾಗಿದೆ. ಕೆಲವು ಧಾರ್ಮಿಕ ಚಿಹ್ನೆಗಳನ್ನು ಮನೆಯಲ್ಲಿ ಬರೆಯುವುದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ.
ಈ 3 ಚಿಹ್ನೆಗಳು ಶುಭ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗಿದೆ. ಹಾಗಾದರೆ ಸಕಾರಾತ್ಮಕ ಶಕ್ತಿ ಹೆಚ್ಚಿಸುವ ಆ 3 ಚಿಹ್ನೆಗಳು ಯಾವುವು ಹಾಗೂ ಅವುಗಳನ್ನು ಮನೆಯ ಯಾವ ಭಾಗದಲ್ಲಿ ಬರೆಯಬೇಕು ಎಂದು ತಿಳಿದುಕೊಳ್ಳೋಣ.
Vastu Tips: ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುವ ಚಿಹ್ನೆಗಳು
ॐ (ಓಂ) ಚಿಹ್ನೆ
ॐ (ಓಂ) ಚಿಹ್ನೆಯನ್ನು ಬ್ರಹ್ಮಾಂಡದ ಮೂಲ ಶಬ್ದ ಎಂದು ಕರೆಯುತ್ತಾರೆ. ಇದು ಸೃಷ್ಟಿಯ ಆರಂಭದಿಂದಲೂ ಅಸ್ತಿತ್ವದಲ್ಲಿದೆ. ಇದ ಬ್ರಹ್ಮ, ವಿಷ್ಣು, ಈಶ್ವರರನ್ನು ಪ್ರತಿನಿಧಿಸುತ್ತದೆ. ಮನಸ್ಸಿನ ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೂ ಓಂ ಮಂತ್ರವನ್ನು ಪಠಿಸಲಾಗುತ್ತದೆ. ದೇವರು ಮನೆಯಲ್ಲಿ ಓಂ ಚಿತ್ರ ಅಂಟಿಸುವುದು ಅಥವಾ ಬರೆಯುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ತ್ರಿಮೂರ್ತಿಗಳ ಆಶೀರ್ವಾದ ದೊರಕುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲಸುತ್ತದೆ.
ಇದನ್ನೂ ಓದಿ:clean house like this : ಮನೆಯನ್ನು ಈ ರೀತಿ ಶುಚಿಯಾಗಿಟ್ಟುಕೊಂಡರೆ ಇರುತ್ತದೆ ಲಕ್ಷ್ಮೀಯ ಕೃಪೆ
ಸ್ವಸ್ತಿಕ್ ಚಿಹ್ನೆ
ಸ್ವಸ್ತಿಕ್ ಚಿಹ್ನೆಯನ್ನು ಆರಂಭ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗಿದೆ. ಹಿಂದಿನ ಕಾಲದಲ್ಲಿ, ಪ್ರತಿಯೊಂದು ಶುಭ ಕಾರ್ಯಕ್ಕೂ ಮೊದಲು ಮನೆಯ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುತ್ತಿದ್ದರು. ಇಂದಿಗು ಕೂಡಾ, ಪೂಜೆ ಮೊದಲಾದ ಧಾರ್ಮಿಕ ಕಾರ್ಯಗಳ ಆರಂಭದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಲಾಗುತ್ತದೆ. ಮನೆಯ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತವೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಿವು ಹೆಚ್ಚುತ್ತದೆ.
ತ್ರಿಶೂಲ ಚಿಹ್ನೆ
ವಾಸ್ತು ಶಾಸ್ತ್ರದ ಪ್ರಕಾರ ತ್ರಿಶೂಲ ಚಿಹ್ನೆಯನ್ನು ಶುಭದ ಸಂಕೇತವೆಂದು ಪರಿಗಣಿಸಲಾಗಿದೆ. ತ್ರಿಶೂಲದ ಮೂರು ಕವಲುಗಳು ಎಲ್ಲಾ ರೀತಿಯ ತೊಂದರೆಗಳನ್ನು ನಿವಾರಿಸುತ್ತವೆ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ತರಲು ಹಾಗೂ ನಕಾರಾತ್ಮಕ ಶಕ್ತಿ ದೂರಮಾಡಲು ಸಹಾಯ ಮಾಡುತ್ತದೆ. ಈ ಚಿಹ್ನೆಯನ್ನು ಮನೆಯ ಮುಖ್ಯ ದ್ವಾರ ಅಥವಾ ದೇವರ ಮನೆಯಲ್ಲಿ ಬರೆಯುವುದು ಅಥವಾ ಅದರ ಚಿತ್ರವನ್ನು ಅಂಟಿಸುವುದರಿಂದ ಹೆಚ್ಚಿನ ಲಾಭ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: Vastu Tips: ಆಹಾರ ಸೇವಿಸುವ ದಿಕ್ಕನ್ನೂ ನಿರ್ಧರಿಸುತ್ತದೆ ವಾಸ್ತು ಶಾಸ್ತ್ರ
(Vastu Tips these three Religious symbols brings positive energy for home)



