ಭಾರತ – ಇಂಗ್ಲೆಂಡ್‌ 2ನೇ ಟೆಸ್ಟ್‌ : ಭಾರತ ಬ್ಯಾಟಿಂಗ್ ಆಯ್ಕೆ, ಖ್ಯಾತ ಆಟಗಾರ ಔಟ್‌

India vs England : ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಮೊದಲು ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಿಂದ ಖ್ಯಾತ ಆಟಗಾರ ಹೊರಬಿದ್ದಿದ್ದಾರೆ.

ಮೊದಲ ಟೆಸ್ಟ್‌ ಪಂದ್ಯದ ಸೋಲಿನ ಬೆನ್ನಲ್ಲೇ ಭಾರತ ಇಂಗ್ಲೆಂಡ್‌ ವಿರುದ್ದ ಎರಡನೇ ಟೆಸ್ಟ್‌ ಪಂದ್ಯ ಆಡುತ್ತಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಪಂದ್ಯ ಆರಂಭವಾಗಿದೆ. ಟೀಂ ಇಂಡಿಯಾದ ಬೌಲರ್‌ ಬೂಮ್ರಾ ಅವರನ್ನು ತಂಡದಿಂದ ಕೈಬಿಡಲಾಗಿದೆ.

India vs England : ಭಾರತ ತಂಡದಲ್ಲಿ3 ಬದಲಾವಣೆ

ಭಾರತ ತಂಡವು ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನದಲ್ಲಿ ಆಕಾಶ್ ದೀಪ್ ಅವರಿಗೆ ಅವಕಾಶ ನೀಡಲಾಗಿದೆ.

ಇನ್ನು ಟೀಂ ಇಂಡಿಯಾದ ಆಟಗಾರ ಸುದರ್ಶನ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಲಾಗುತ್ತಿದೆ.

ಭಾರತ (ಆಡುವ XI): ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ.

ಇಂಗ್ಲೆಂಡ್ ತಂಡ: ಇಂಗ್ಲೆಂಡ್ ತಂಡವು ಮೊದಲ ಪಂದ್ಯದಲ್ಲಿ ಆಡಿದ ಅದೇ ಆಡುವ ಹನ್ನೊಂದರ ಬಳಗವನ್ನು ಉಳಿಸಿಕೊಂಡಿದೆ.

ಇಂಗ್ಲೆಂಡ್ (ಆಡುವ XI): ಝಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್, ಶೋಯಬ್ ಬಷೀರ್.

Also Read : ಭಾರತ vs ಇಂಗ್ಲೆಂಡ್ 2ನೇ ಟೆಸ್ಟ್‌ ಪಂದ್ಯ : 3 ಆಟಗಾರರ ಬದಲಾವಣೆ, ಯಾರು IN ಯಾರು OUT ?

ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:30 ಕ್ಕೆ 2ನೇ ಟೆಸ್ಟ್‌ ಪಂದ್ಯ ಆರಂಭಗೊಂಡಿದೆ

  • ಪಿಚ್ ವರದಿ: ಎಡ್ಜ್‌ಬಾಸ್ಟನ್ ಪಿಚ್ ಆರಂಭಿಕ ದಿನಗಳಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚು ನೆರವಾಗುವ ನಿರೀಕ್ಷೆಯಿದೆ, ನಂತರ ಬ್ಯಾಟಿಂಗ್‌ಗೆ ಉತ್ತಮವಾಗಬಹುದು.
  • ಮಳೆ ಸಾಧ್ಯತೆ: ಮೊದಲ ದಿನ ಮತ್ತು ನಾಲ್ಕನೇ ಹಾಗೂ ಐದನೇ ದಿನಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ.

Also Read : ರಿಷಬ್‌ ಪಂತ್‌ ವಿಶ್ವದಾಖಲೆ, ಎಸ್‌ಎಂ ಧೋನಿ ದಾಖಲೆ ಉಡೀಸ್‌

ind vs eng India vs England 2nd Test: India elect to bat, prominent player out Kannada news

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories