ಪುತ್ತೂರು : ಉಪ್ಪಿನಂಗಡಿಯ ಬಜತ್ತೂರಿನಲ್ಲಿ ನೂತನ ಟೋಲ್​ ಪ್ಲಾಜಾ ನಿರ್ಮಾಣ : ಎಂದಿನಿಂದ ಕಾರ್ಯಾರಂಭ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದಲ್ಲಿ ನೂತನ ಟೋಲ್​ ಪ್ಲಾಜಾ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮುಂದಿನ ಏಪ್ರಿಲ್​ ತಿಂಗಳಿನಿಂದ ಕಾರ್ಯನಿರ್ವಹಿಸಲಿದೆ. ಈ ಟೋಲ್​ ಪ್ಲಾಜಾ ಕಾರ್ಯಾರಂಭಗೊಂಡ ಬಳಿಕ ವಾಹನ ಸವಾರರು ಇಲ್ಲಿ ಟೋಲ್​ ಪಾವತಿ ಮಾಡಿ ಸಂಚರಿಸಬೇಕಿದೆ.

ಬೆಂಗಳೂರು – ಮಂಗಳೂರು ಮಾರ್ಗವಾಗಿ ತೆರಳುವಾಗ ಒಟ್ಟೂ ಆರು ಟೋಲ್​ ಪ್ಲಾಜಾಗಳಲ್ಲಿ ಹಣ ಪಾವತಿ ಮಾಡಬೇಕಿತ್ತು. ನೆಲಮಂಗಲ ಹಾಗೂ ಸಕಲೇಶಪುರ ನಡುವೆ 5, ದಕ್ಷಿಣ ಕನ್ನಡ ಜಿಲ್ಲೆ ಬಿ.ಸಿ ರೋಡ್​ನಲ್ಲಿರುವ ಬ್ರಹ್ಮರಕೂಟ್ಲುವಿನಲ್ಲಿ 1 ಪ್ಲಾಜಾ ವಾಹನ ಸವಾರರಿಗೆ ಸಿಗುತ್ತಿತ್ತು. ಇನ್ಮುಂದೆ ಈ ಸಾಲಿಗೆ ಬಜತ್ತೂರು ಟೋಲ್​ ಕೂಡ ಸೇರ್ಪಡೆಗೊಳ್ಳಲಿದೆ.

ಕೆಎನ್​ಆರ್​ ಕನ್​ಸ್ಟ್ರಕ್ಷನ್​ ಲಿಮಿಟೆಡ್​ ಕಂಪನಿಯು ಬಿ.ಸಿ ರೋಡ್​ನಿಂದ ಪೆರಿಯಶಾಂತಿವರೆಗೆ 46 ಕಿಲೋಮೀಟರ್​ ರಸ್ತೆ ಮಾರ್ಗವನ್ನು ಗುತ್ತಿಗೆ ಪಡೆದಿದೆ. ಇದೀಗ ಬಜತ್ತೂರಿನಲ್ಲಿ ಟೋಲ್​ ನಿರ್ಮಾಣ ಮಾಡಲಾಗುತ್ತಿದ್ದು ಒಂದು ಮಾರ್ಗಕ್ಕೆ ತಲಾ 4 ಲೇನ್​ಗಳಂತೆ ಒಟ್ಟೂ 8 ಲೇನ್​ಗಳ ವ್ಯವಸ್ಥೆ ಮಾಡಲಾಗಿದೆ.ಅದೇ ರೀತಿ ಬೈಕ್​ಗಳು, ಆಟೋರಿಕ್ಷಾ ಸೇರಿದಂತೆ ವಿವಿಧ ವಾಹನಗಳಿಗೆ ಪ್ರತ್ಯೇಕ ಲೇನ್​ ವ್ಯವಸ್ಥೆ ನಿರ್ಮಾಣಗೊಳ್ಳುತ್ತಿದೆ.

ಇದನ್ನೂ ಓದಿ: ಮಂಗಳೂರಿನ ನ್ಯಾಯಾಲಯಕ್ಕೂ ತಟ್ಟಿದ ಜೈಲು ಜಾಮರ್‌ ಎಫೆಕ್ಟ್ : ನೆಟ್ವರ್ಕ್ ಸಿಗದೇ ಹೈಕೋರ್ಟ್ ಮೆಟ್ಟಿಲೇರಿದ ವಕೀಲರು

ಬಿ.ಸಿ ರೋಡ್​ನಲ್ಲಿರುವ ಬ್ರಹ್ಮರಕೂಟ್ಲುವಿನಲ್ಲಿ ಟೋಲ್​ ಪ್ಲಾಜಾ ನಿರ್ಮಾಣವಾದ ಬಳಿಕ ಶುರುವಾದ ಜನಾಕ್ರೋಶ ಇಂದಿಗೂ ಆರಿಲ್ಲ. ಇದೀಗ ಈ ಸಾಲಿಗೆ ಬಜತ್ತೂರು ಟೋಲ್​ ಕೂಡ ಸೇರಲಿದ್ಯಾ ಎಂಬ ಅನುಮಾನ ದಟ್ಟವಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories