ಕಾಪು: ರಸ್ತೆ ಮಧ್ಯೆ ಬಸ್‌ ನಿಲ್ಲಿಸಿ ಜಗಳ : ಖಾಸಗಿ ಬಸ್‌ ಚಾಲಕ, ನಿರ್ವಾಹಕ, ಟೈಮ್‌ ಕೀಪರ್‌ ಅರೆಸ್ಟ್‌

Private Bus Employes Fighting : ಕಾಪು: ಕರಾವಳಿ ಭಾಗದಲ್ಲಿ ಖಾಸಗಿ ಬಸ್‌ಗಳ ಹಾವಳಿ ನಿಂತಿಲ್ಲ. ಟೈಮಿಂಗ್‌ ವಿಚಾರದಲ್ಲಿ ಕಿತ್ತಾಟಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ. ಇದೀಗ ರಸ್ತೆ ಮಧ್ಯೆ ಬಸ್‌ ನಿಲ್ಲಿಸಿ ಜಗಳವಾಡಿದ ಕಾರಣಕ್ಕೆ ಖಾಸಗಿ ಬಸ್‌ ಚಾಲಕ, ನಿರ್ವಾಹಕ, ಟೈಮ್‌ ಕೀಪರ್‌ ಅನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಪು ಪಡು ಗ್ರಾಮದ ಲಕ್ಷ್ಮೀ ಜನಾರ್ದನ ದೇವಸ್ಥಾನದ ಗೋಪುರದ ಬಳಿ ಸಾರ್ವಜನಿಕ ರಸ್ತೆಯ ಮಧ್ಯದಲ್ಲೇ ಬಸ್ಸನ್ನು ನಿಲ್ಲಿಸಿ, ಅದರ ಚಾಲಕ, ನಿರ್ವಾಹಕ ಮತ್ತು ಟೈಮ್ ಕೀಪರ್‌ಗಳು ಜಗಳವಾಡಿದ್ದಾರೆ.

‘AYRA’ ಹೆಸರಿನ KA-20-AC-0727 ನಂಬ್ರದ ಬಸ್ಸನ್ನು ರಸ್ತೆಯ ಮಧ್ಯಭಾಗದಲ್ಲಿ ನಿಲ್ಲಿಸಿ, ಚಾಲಕ ರೋಲ್ವಿನ್ ನೊರೊನ್ಹ, ನಿರ್ವಾಹಕ ರಾಜೇಶ್ ಶೆಟ್ಟಿ ಹಾಗೂ ಟೈಮ್ ಕೀಪರ್ ಪ್ರವೀಣ್ ಅವರು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು, ಪರಸ್ಪರ ಕೈಕೈ ಮಿಲಾಯಿಸಿದ್ದಾರೆ.

ಇದನ್ನೂ ಓದಿ : ಕುಂದಾಪುರ : ಖಾಸಗಿ ಬಸ್‌ ಚಾಲಕನ ನಿರ್ಲಕ್ಷ್ಯ, ಕ್ರೇನ್‌ ಹರಿದು ಯುವಕ ಮೃತ್ಯು

ಈ ಮೂವರ ವರ್ತನೆಯಿಂದಾಗಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟಾಗಿದ್ದು, ಇತರ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಮಧ್ಯಾಹ್ನ 13:30 ಗಂಟೆಗೆ ಬಸ್ ಸಮೇತ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕವಾಗಿ ಇಂತಹ ಘಟನೆಗಳು ಮರಕಳಿಸಿದ್ರೆ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ : ಬೈಂದೂರು : ಶಾಲಾ ವಾಹನಕ್ಕೆ ನಕಲಿ ವಿಮಾ ಪಾಲಿಸಿ, ಪ್ರಕರಣ ದಾಖಲು

Kaup Private Bus Employes Fighting

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories