ಸ್ಯಾಮ್‌ಸಂಗ್‌ನ ಅತ್ಯಂತ ಅಗ್ಗದ ಫೋನ್ ಗ್ಯಾಲಕ್ಸಿ S25 FE ಬಿಡುಗಡೆ: 4 ಕ್ಯಾಮೆರಾ, AI ತಂತ್ರಜ್ಞಾನ ಇದರ ವೈಶಿಷ್ಟ್ಯ
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಪ್ರತಿದಿನ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಸೇರ್ಪಡೆಯಾಗುತ್ತಲೆ ಇವೆ. ಇದೀಗ ಸ್ಯಾಮ್‌ಸಂಗ್‌ನ ಹೊಸ ಗ್ಯಾಲಕ್ಸಿ S25 FE ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
ಇದು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಫ್ಲಾಗ್‌ಶಿಪ್ ಸರಣಿಯ ಅತ್ಯಂತ ಕಡಿಮೆ ದರದ ಫೋನ್ ಆಗಿದೆ. ಇದನ್ನು ಜಗತ್ತಿನ ಫ್ಯಾನ್ ಎಡಿಷನ್ ಎಂದು ಕರೆಯಲಾಗುತ್ತಿದೆ.
ಭಾರತದಲ್ಲೂ ಖರೀದಿಗೆ ಲಭ್ಯವಿರುವ ಈ ಫೋನ್ AI ವೈಶಿಷ್ಟ್ಯವನ್ನು ಹೊಂದಿದೆ. ಅದರಲ್ಲಿ ಗೂಗಲ್ AI ಟೂಲ್ಸ್ ಜೊತೆಗೆ ಫೋಟೋ ಎಡಿಟಿಂಗ್ ಇರುವುದು ಬಳಕೆದಾದರಿಗೆ ಹೊಸ ಅನುಭವವನ್ನು ನೀಡಲಿದೆ.
ಈ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 FE ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳೇನು ಬೆಲೆ ಮತ್ತು ಲಭ್ಯತೆ ಹೀಗಿದೆ…
Samsung Galaxy S25 FE ವೈಶಿಷ್ಟ್ಯಗಳು
ಡಿಸ್ಪ್ಲೇ
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 FE ಸ್ಮಾರ್ಟ್‌ಫೋನ್ 6.7 ಇಂಚಿನ FHD+ಡೈನಾಮಿಕ್ AMOLED 2X ಡಿಸ್ಪ್ಲೇ ಹೊಂದಿದೆ. ಈ ಫೋನ್‌ನ 120 Hz ರಿಫ್ರೆಶ್ ರೇಟ್ ಹೊಂದಿದ್ದು, ಅದನ್ನು 60 ರಿಂದ 120Hz ನಡುವೆ ಬದಲಾಯಿಸಿಕೊಳ್ಳಬಹುದು.
ಬಣ್ಣ ಮತ್ತು ಕಾಂಟ್ರಾಸ್ಟ್ ಸಮತೋಲನವನ್ನು ಕಾಯ್ದುಕೊಳ್ಳಲು ಡಿಸ್ಪ್ಲೆಯಲ್ಲಿ ವಿಷನ್ ಬೂಸ್ಟರ್ ತಂತ್ರಜ್ಞಾನವನ್ನು ನೀಡಲಾಗಿದೆ. 7.4 ಮಿಮೀ ದಪ್ಪವಿರುವ ಈ ಫೋನ್ 190 ಗ್ರಾಂ ತೂಕವಿದೆ.
ಇದನ್ನೂ ಓದಿ: iPhone ಪ್ರಿಯರಿಗೆ ಗುಡ್ ನ್ಯೂಸ್! ಬಿಡುಗಡೆ ಸಜ್ಜಾದ ಐಫೋನ್ 17 ಸರಣಿ
ಕ್ಯಾಮೆರಾ
12MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿರುವ ಈ ಫೋನ್ 50-ಮೆಗಾಪಿಕ್ಸೆಲ್ ಅಗಲದ ಕ್ಯಾಮೆರಾ ಹೊಂದಿದೆ. ಇದರ ಕ್ಯಾಮೆರಾ ಸೆಟಪ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಬೆಂಬಲಿಸುತ್ತದೆ.
ಇದರ ಹೊರತಾಗಿ, ಫೋನ್‌ನಲ್ಲಿ 8-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಲಭ್ಯವಿದೆ. 3x ಆಪ್ಟಿಕಲ್ ಜೂಮ್ ಚಿತ್ರಗಳನ್ನು ತೆಗೆದುಕೊಳ್ಳಬಹುದಾದ ವೈಶಿಷ್ಟ್ಯವನ್ನು ಈ ಫೋನ್ ಹೊಂದಿದೆ. ಇನ್ನು ಈ ಫೋನ್‌ನ ಸೆಲ್ಫಿ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅನ್ನು ಹೊಂದಿದೆ.
ಪ್ರೊಸೆಸ್ಸರ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 FE ನಲ್ಲಿ ಸ್ನಾಪ್‌ಡ್ರಾಗನ್ ಮತ್ತು ಮೀಡಿಯಾ ಟೆಕ್ ಚಿಪ್‌ಸೆಟ್‌ಗಳ ಬದಲಿಗೆ, ಕಂಪನಿಯು ತನ್ನದೇ ಆದ Exynos 2400 ಚಿಪ್‌ಸೆಟ್ ಅನ್ನು ಅಳವಡಿಸಿದೆ. ಇದನ್ನು 4nm ಪ್ರಕ್ರಿಯೆಯಲ್ಲಿ ತಯಾರಿಸಲಾಗಿದೆ.
ಈ ಫೋನ್‌ನಲ್ಲಿ 8 GB RAM ನೋಡಬಹುದಾಗಿದೆ. ಇನ್ನು ಈ ಫೋನ್ 45 ವ್ಯಾಟ್ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಬ್ಯಾಟರಿ ಕ್ಷಮತೆಯು 4900 mAh ಆಗಿದೆ.
ಸ್ಯಾಮ್‌ಸಂಗ್ ಈ ಫೋನ್‌ನಲ್ಲಿ ವೇಗದ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ನೀಡಿರುವುದು ಬಹಳ ವಿಶೇಷವಾಗಿದೆ. ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 16 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಧೂಳು ಮತ್ತು ನೀರಿನಿಂದಾಗುವ ಹಾನಿಯನ್ನು ತಪ್ಪಿಸುವ ವ್ಯವಸ್ಥೆ ಇದರಲ್ಲಿದೆ. ಈ ಫೋನ್ ಅನ್ನು ಜೆಟ್ ಬ್ಲ್ಯಾಕ್, ನೇವಿ, ವೈಟ್ ಈ ಮೂರು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
ಇದನ್ನೂ ಓದಿ: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2025 ಯಾವಾಗ ಪ್ರಾರಂಭ? ಯಾವುದಕ್ಕಿದೆ ಭರ್ಜರಿ ಆಫರ್?
Samsung Galaxy S25 FE ಬೆಲೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 FE ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಈ ಫೋನ್ ಅನ್ನು 8 + 128GB ಮಾದರಿ, 8 + 256GB ಮಾದರಿ ಮತ್ತು 8 + 512GB ಸ್ಟೋರೇಜ್‌ನಂತೆ ಮೂರು ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಫೋನ್‌ನ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
(Samsung Galaxy S25 FE Smartphone launched globally with 4 camera and AI Features)



