Udupi Crime Report: ಕಾರ್ಕಳದಲ್ಲಿ ಜ್ಯುವೆಲ್ಲರಿ ಅಂಗಡಿಗಳಿಗೆ ಕನ್ನ, ಕಾಪುವಿನಲ್ಲಿ ವಾಹನ ಕಳವು
ಕಾರ್ಕಳ: ಗ್ಯಾಸ್ ಕಟ್ಟರ್ ಬಳಸಿ ಜ್ಯುವೆಲ್ಲರಿ ಅಂಗಡಿಗಳಲ್ಲಿ ಕಳವಿಗೆ ವಿಫಲ ಯತ್ನ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳದ ರಥಬೀದಿಯಲ್ಲಿರುವ ಎರಡು ಜ್ಯುವೆಲ್ಲರಿ ಅಂಗಡಿಗಳಲ್ಲಿ ಕಳ್ಳತನ ಮಾಡಲು ವಿಫಲ ಯತ್ನ ನಡೆಸಿದ್ದಾರೆ.
ಸೆಪ್ಟೆಂಬರ್ 5ರಂದು ರಾತ್ರಿ 6:30 ಮತ್ತು ಸೆಪ್ಟೆಂಬರ್ 6ರಂದು ಮುಂಜಾನೆ 3:00 ಗಂಟೆಯ ನಡುವೆ ಈ ಘಟನೆ ನಡೆದಿದೆ. ಕೆ. ಹರ್ಷವರ್ಧನ ಆಚಾರ್ಯ ಅವರಿಗೆ ಸೇರಿದ ‘ಕರ್ನಾಟಕ ಜ್ಯುವೆಲ್ಲರಿ’ ಅಂಗಡಿಯ ಶಟರ್ ಅನ್ನು ಗ್ಯಾಸ್ ಕಟ್ಟರ್ನಿಂದ ಕತ್ತರಿಸಿ ಒಳ ನುಗ್ಗಲು ಕಳ್ಳರು ಪ್ರಯತ್ನಿಸಿದ್ದಾರೆ.
ಬಾಗಿಲಿನ ಬೀಗವನ್ನೂ ಒಡೆಯಲಾಗಿದೆ. ಅದೇ ರೀತಿ, ಪ್ರಕಾಶ್ ಎಂಬುವವರಿಗೆ ಸೇರಿದ ‘ಪ್ರಣವ್ ಜ್ಯುವೆಲ್ಲರಿ’ ಅಂಗಡಿಯ ಶಟರ್ ಅನ್ನು ಸಹ ಅದೇ ರಾತ್ರಿ ಕಳ್ಳರು ಕತ್ತರಿಸಿದ್ದಾರೆ. ಎರಡೂ ಪ್ರಕರಣಗಳ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಕಾಪುವಿನಲ್ಲಿ ವಾಹನ ಕಳವು
ಕಾಪು: ಕಾಪು ತಾಲೂಕಿನ ಉಳಿಯಾರಗೋಳಿ ಗ್ರಾಮದಲ್ಲಿ ವಾಹನವೊಂದು ಕಳವಾಗಿದೆ. ನ್ಯಾಷನಲ್ ನರ್ಸರಿ ಮಾಲೀಕರಾದ ಬಿ.ಎ. ಹುಸೈನ್ ಅವರಿಗೆ ಸೇರಿದ Mahindra DI3200 (KA20 D2925) ವಾಹನವನ್ನು ಸೆಪ್ಟೆಂಬರ್ 5ರ ರಾತ್ರಿ 7:00 ಗಂಟೆಯಿಂದ ಸೆಪ್ಟೆಂಬರ್ 6ರ ಬೆಳಿಗ್ಗೆ 6:45 ಗಂಟೆಯ ನಡುವೆ ಕಳ್ಳರು ಕದ್ದೊಯ್ದಿದ್ದಾರೆ.
ಇದನ್ನೂ ಓದಿ: ಕುಂದಾಪುರ: ಜೂಜಾಟದ ಅಡ್ಡೆ ಮೇಲೆ ಪೋಲಿಸರ ದಾಳಿ; 1.10ಲಕ್ಷ ಜಪ್ತಿ, 11 ಮಂದಿ ಅರೆಸ್ಟ್
ಈ ವಾಹನವನ್ನು ನರ್ಸರಿಯ ಎದುರು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ವಾಹನದ ಅಂದಾಜು ಮೌಲ್ಯ ₹4,00,000 ಆಗಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ: 107/2025 ರಂತೆ ಪ್ರಕರಣ ದಾಖಲಾಗಿದೆ. ಕಳ್ಳತನ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಕಾರ್ಮಿಕನಿಂದ ಖ್ಯಾತ ಉದ್ಯಮಿ ಎಣ್ಣೆಹೊಳೆ ಸಂತೋಷ್ ಶೆಟ್ಟಿ ಹತ್ಯೆ



