ಒಮಾನ್‌ನಲ್ಲಿ ವಿಜೃಂಭಣೆಯ 41ನೇ ವರ್ಷದ ಗಣೇಶೋತ್ಸವ

Oman Muscat Ganesha Festival : ಮಸ್ಕತ್‌ : ಗಣೇಶೋತ್ಸವ ಕೇವಲ ಭಾರತದಲ್ಲಿ ಮಾತ್ರವೇ ಆಚರಿಸೋದಿಲ್ಲ. ಬದಲಾಗಿ ಅರಬ್‌ನಾಡಲ್ಲಿಯೂ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಅದ್ರಲ್ಲೂ 41 ವರ್ಷಗಳಿಂದಲೂ ಒಮಾನ್‌ನಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ.

ಮಹಾ ಗಣೇಶೋತ್ಸವ ಸಮಿತಿ ತುಳು ಕೂಟ ಮಸ್ಕತ್ ವತಿಯಿಂದ 41ನೇ ವರ್ಷ ಗಣೇಶೋತ್ಸವವು ಸಂಭ್ರಮ ಸಡಗರದಿಂದ ನಡೆಯಿತು. ಮಸ್ಕತ್ ಶಿವ ಮಂದಿರದ ಪ್ರಾಂಗಣದಲ್ಲಿ ಸಾಂಪ್ರದಾಯಿಕವಾಗಿ ಸಾಂಪ್ರದಾಯಿಕವಾಗಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರಧಾನ ಅರ್ಚಕರಾದ ಶಂಕರ ನಾರಾಯಣ ಅಡಿಗ ಅವರಿಂದ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ ಮತ್ತು ಗಣಹೋಮ ಕಾರ್ಯಕ್ರಮವು ನೆರವೇರಿದವು. ಅವರಿಗೆ ಶ್ರೀ ಗುರುದಾಸ್ ಪೆಜತ್ತಾಯ ಮತ್ತು ಅರ್ಚಕರ ತಂಡವು ಸಹಕರಿಸಿದರು .

ಭವ್ಯ ಉತ್ಸವದ ಮೂರು ದಿನಗಳು ಪುಣ್ಯಾಹವಾಚನ, ಗಣ ಹೋಮ, ಮಹಾಪೂಜೆ, ರಂಗಪೂಜೆ, ಮತ್ತು ಪುಷ್ಪಾರ್ಚನೆ ಮೊದಲಾದ ವೈದಿಕ ಹಾಗೂ ಭಕ್ತಿ ಕಾರ್ಯಕ್ರಮಗಳು ನಡೆಯಿತು

ಒಮಾನ್ ಮಹಾ ಗಣೇಶೋತ್ಸವ ಸಮಿತಿಯ ಎಸ್.ಕೆ ಪೂಜಾರಿ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಉಮೇಶ್ ಬಂಟ್ವಾಳ್, ಶಶಿಧರ ಶೆಟ್ಟಿ ಮಲ್ಲಾರ್, ನಾಗೇಶ್ ಶೆಟ್ಟಿ ಕಿನ್ನಿಗೋಳಿ, ಡಾ.ಸಿ.ಕೆ. ಅಂಚನ್, ರವಿ ಕಾಂಚನ್, ಗುರುದಾಸ್ ಪೆಜತ್ತಾಯ, ದೇವಾನಂದ್ ಅಮೀನ್, ಸುಕುಮಾರ್ ಅಂಚನ್, ಸಚಿನ್ ಕಾಮತ್ ರವರ ಅವಿರತ ಪ್ರಯತ್ನದಿಂದ ಈ ಉತ್ಸವವು ಅತ್ಯಂತ ವೈಭವದಿಂದ ನೆರವೇರಿತು.

ಶಿಲ್ಪಕಲಾವಿದರಾದ ಸಶಿವ ಕಾಮತ್ ರವರು ಸುಂದರ ಗಣಪತಿ ಮೂರ್ತಿಯನ್ನು ನಿರ್ಮಿಸಿದ್ದರು. ವರ್ಣರಂಜಿತ ಗಣೇಶನ ರಂಗೋಲಿ, ತಳಿರು ತೋರಣ ಮತ್ತುಊರಿನಿಂದ ತರಿಸಿಕೊಂಡ ನಾನಾ ಪುಷ್ಪಗಳಿಂದ ಅಲಂಕೃತ ಭವ್ಯವಾದ ಮಂಟಪದಲ್ಲಿ ಮೂರ್ತಿ ಪ್ರತಿಷ್ಠಾಪನೆಗೊಂಡು, ಭಕ್ತರ ಮನ ಸೂರೆಗೊಂಡಿತು.

ವಿವಿಧ ಭಜನಾ ತಂಡಗಳ ಭಕ್ತಾದಿಗಳಿಂದ ವೈದಿಕ ಸ್ತೋತ್ರ ಪಠನ, ಶುಕ್ಲ ಯುಜುರ್ವೇದ ಗಾಯನ , ಭಜನೆ, ನೃತ್ಯ , ಕನಾಟಕ ಸಂಗೀತ, ವೀಣಾ ವಾದನದಿಂದ ವಿನಾಯಕ ಹಬ್ಬದಾಚರಣೆಗೆ ಕಳೆಯೇರಿತ್ತು. ಆಪಾರ ಭಕ್ತ ಸಮುದಾಯದ ಸಮ್ಮುಖದಲ್ಲಿ ಮೂರನೇ ದಿನ ಭವ್ಯ ಮೂರ್ತಿಯ ವಿಸರ್ಜನೆ ನೆರವೇರಿತು.

ಭಾರತದ ನಾನಾ ಪ್ರದೇಶದಿಂದ ಬಂದು ಇಲ್ಲಿ ನೆಲೆಗೊಂಡ ಗಣೇಶ ಭಕ್ತರು ಪಾಲ್ಗೊಂಡ ಈ ಚೌತಿ ಕಾರ್ಯಕ್ರಮದಲ್ಲಿ ,ಭಾರತದ ರಾಯಭಾರಿ, ಪ್ರಸಿದ್ಧ ಉದ್ಯಮಿಗಳು ,ಮೊದಲಾದವರು ಭಕ್ತಿ ಮತ್ತು ಸಂತೋಷದ ಈ ಭವ್ಯ ಉತ್ಸವದ 41ನೇ ವರ್ಷದ ಆಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : ಕೇರಳದಲ್ಲಿದೆ ಶಿವನ ಶಕ್ತಿ ಶಾಲಿ ಆಲಯ : ಇಲ್ಲಿ ಹೆಣ್ಣು ಮಕ್ಕಳಿಗೆ ಹಗಲಲ್ಲಿ ಇಲ್ಲ ಪ್ರವೇಶ

ಭಾರತೀಯರು ಮಾತ್ರವಲ್ಲದೆ ನೇಪಾಳ, ಥೈಲ್ಯಾಂಡ್, ಬಾಂಗ್ಲಾದೇಶ ಮತ್ತು ಶ್ರೀಲಂಕಾದಿಂದಲೂ, ಎಲ್ಲರೂ ಗಣೇಶನ ಆಶೀರ್ವಾದವನ್ನು ,ಕೃಪೆ ಯನ್ನು ಬಹಳ ಉತ್ಸಾಹದಿಂದ ಕೋರಿದರು. ನೆರೆಯ ದೇಶಗಳಾದ ದುಬೈ, ಬಹ್ರೇನ್, ಕುವೈಟ್ ನಿಂದಲೂ ಅನೇಕ ಭಕ್ತರು ಉಪಸ್ಥಿತರಿದ್ದರು.

ಸಮಾರಂಭದುದ್ದಕ್ಕೂ ಎಲ್ಲಾ ಭಕ್ತರಿಗೆ ಲಡ್ಡು ಪ್ರಸಾದ ನೀಡಲಾಯಿತು. ಭಕ್ತರಿಗೆ ಕರಾವಳಿಯ ಸಾಂಪ್ರದಾಯಿಕ ಅಡುಗೆ ತಿನಿಸುಗಳನ್ನು ಮೂರು ದಿನವೂ ಮಹಾಪ್ರಸಾದವಾಗಿ ನೀಡಲಾಯಿತು.

ಮಹಾಪ್ರಸಾದವನ್ನು ಉಡುಪಿ ಹೋಮ್ರೆಸ್ಟೋರೆಂಟ್, ಅನ್ನಪೂರ್ಣ ರೆಸ್ಟೋರೆಂಟ್, ಮತ್ತು ಗೋಕುಲ್ ಅಲ್ಕುವೈರ್ ರೆಸ್ಟೋರೆಂಟ್ ಒದಗಿಸಿದ್ದರು . ಚಾಯಾಗ್ರಹಣವನ್ನು ನಾಗೇಶ್ ಕುಮಾರ್ ಮತ್ತು ಅಜಿತ್ ನವರು ನಿರ್ವಹಿಸಿದ್ದರು.

ಇದನ್ನೂ ಓದಿ : ಶಂಕರ ಇಲ್ಲೇ ಗಣೇಶನ ರುಂಡ ಕಡಿದದ್ದು – ಇಲ್ಲಿ ಪೂಜೆ ಮಾಡಿದ್ರೆ ವಿಘ್ನಗಳೆಲ್ಲಾ ದೂರ

ಅಲ್ ಪೂಜಾರಿ , ಉಮೇಶ್ ಜೆಪ್ಪು , ಸತೀಶ್ ಪೂಜಾರಿ , ಅರುಣ್ ಬಂಗೇರ , ತೌಳುವ ಬೊಲ್ಪು ಬಳಗ , ರಾಣಿ ಅಬ್ಬಕ್ಕ ಬಳಗ , ಶ್ರೀನಿವಾಸ್ ಪ್ರಭು , ಪದ್ಮಯ ಗೌಡ , ಧನು ಬ್ಲಾಗ್ , ಸುಶಾಂತ್ , ಸಂಪತ್ ಶೆಟ್ಟಿ , ನವೀನ್ ಶೆಟ್ಟಿ,ರಾಜೇಶ್ ಆಚಾರಿ , ಮುಂತಾದ ಸ್ವಯಂಸೇವಕರ ನಿಸ್ವಾರ್ಥ ಸೇವೆಯಿಂದಾಗಿ, ಭಕ್ತರು ಇಷ್ಟು ವರ್ಷಗಳಿಂದ ಗಣೇಶ ಹಬ್ಬವನ್ನು ಆಚರಿಸಿ ಪುನೀತರಾಗುವ ಭಾಗ್ಯವನ್ನು ಪಡೆದಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories