ಮದ್ದೂರು ಬಂದ್ ಕರೆ : ಗಲಭೆ ಪೂರ್ವನಿಯೋಜಿತ, 21 ಮಂದಿ ಮುಸ್ಲೀಮರು ಅರೆಸ್ಟ್,

Mandya Maddur : ಮಂಡ್ಯ : ಮದ್ದೂರಿನಲ್ಲಿ ನಡೆದ ಗಣೇಶ ಮೆರವಣಿಗೆಯ ವೇಳೆಯ ಕಲ್ಲುತೂರಾಟ ನಡೆಸಿರುವುದು ಪೂರ್ವ ನಿಯೋಜಿತ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 21 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಕಲ್ಲುತೂರಾಟ ಪ್ರಕರಣ ಪೂರ್ವ ನಿಯೋಜಿತ ಅನ್ನೋದನ್ನು ಸ್ವತಃ ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ. ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 20 ಮಂದಿಯನ್ನು ಬಂಧಿಸಲಾಗಿದೆ.
ಹಿಂದೂ ಸಂಘಟನೆಯ ಕಾರ್ಯಕರ್ತರು ಗಣೇಶ ಮೆರವಣಿಗೆ ಮಾಡುತ್ತಿದ್ದರು. ಈ ವೇಳೆಯಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ಸೂಚಿಸಲಾಗಿದೆ. ಪೊಲೀಸರು ಶಾಂತಿ ಕಾಪಾಡುತ್ತಾರೆ. ಪರಿಸ್ಥಿತಿ ಕೈ ಮೀರಿದ್ರೆ ಕಾನೂನು ಕ್ರಮಕೈಗೊಳ್ಳುತ್ತಾರೆ ಎಂದಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರೀಯಿಸಿದ್ದಾರೆ. ಮಸೀದಿಯ ಮುಂದೆ ಹೋಗುವಾಗ ಗಲಾಟೆ ಆಗಿದೆ. ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡಲು ಶುರು ಮಾಡಿದ್ದಾರೆ. ಹೀಗಾಗಿ ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಕಲ್ಲು ತೂರಿದ ಎಲ್ಲಾ 21 ಮಂದಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಚಿನ್ನಪತ್ತೆ..! ಕಾಫಿನಾಡು ಇನ್ಮುಂದೆ ಚಿನ್ನದ ನಾಡು
Mandya Maddur : ಮದ್ದೂರು ಗಲಭೆ ಅರೆಸ್ಟ್ ಆಗಿದ್ಯಾರು ?
ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆಯ ಗಲಭೆಗೆ ಸಂಬಂಧಿಸಿದಂತೆ ಮಂಡ್ಯ ಪೊಲೀಸರು ಒಟ್ಟು 21 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೊಹಮ್ಮದ್ ಇರ್ಫಾನ್ ಅಲಿಯಾಸ್ ಮಿಯಾ, ಮೊಹಮ್ಮದ್ ಆವೇಶ್ ಅಲಿಯಾಸ್ ಮುಳ್ಳು, ಇಮ್ರಾನ್ ಪಾಷಾ ಅಲಿಯಾಸ್ ಇಮ್ರಾನ್.
ಇದನ್ನೂ ಓದಿ : ಮದ್ದೂರು : ಹಿಂದೂಗಳ ಮೇಲೆ ಕಾಂಗ್ರೆಸ್ ಲಾಠಿಚಾರ್ಜ್ : ದುಷ್ಕರ್ಮಿಗಳ ಮೇಲೆ ಯಾಕಿಲ್ಲ ಕ್ರಮ : ಸುನಿಲ್ ಕುಮಾರ್
ನವಾಜ್ ಖಾನ್ ಅಲಿಯಾಸ್ ನವಾನ್, ಸಯ್ಯದ್ ದಸ್ತಗೀರ್ ಅಲಿಯಾಸ್ ಸಯ್ಯದ್ ರಶೀದ್, ಉಮರ್ ಫಾರೂಕ್ ಅಲಿಯಾಸ್ ಉಮರ್, ಅಹ್ಮದ್ ಸಲ್ಮಾನ್ ಅಲಿಯಾಸ್ ಮುಕ್ಕುಲ್ಲಾ, ಖಾಸಿಫ್ ಅಹ್ಮದ್ ಅಲಿಯಾಸ್ ಖಾಸಿಫ್ ಕಲಾಂದರ್ ಖಾನ್ ಮುಸವೀರ್ ಪಾಷಾ ಅಲಿಯಾಸ್ ಒಡೆಯ, ಮೊಹಮ್ಮದ್ ಅಜೀಜ್, ಮೊಹಮ್ಮದ್ ಖಲೀಂ, ಇನಾಯತ್ ಪಾಷಾ ಮುಂತಾದವರು ಅರೆಸ್ಟ್ ಆಗಿದ್ದಾರೆ.
ಸೆಪ್ಟೆಂಬರ್ 9 ರಂದು ಮದ್ದೂರು ಬಂದ್
ಗಣೇಶ ವಿಸರ್ಜನೆಯ ವೇಳೆಯಲ್ಲಿ ನಡೆದಿರುವ ಕಲ್ಲುತೂರಾಟ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಖಂಡಿಸಿ ಹಿಂದೂಪರ ಸಂಘಟನೆಗಳು ಸೆಪ್ಟೆಂಬರ್ 9 ರಂದು ಮದ್ದೂರು ಬಂದ್ಗೆ ಕರೆ ನೀಡಲಾಗಿದೆ. ಸ್ವಯಂ ಪ್ರೇರಿತರಾಗಿ ಅಂಗಡಿಮುಂಗಟ್ಟು ಮುಚ್ಚುವಂತೆ ಮನವಿ ಮಾಡಲಾಗಿದೆ.



