ಚಿಕ್ಕಮಗಳೂರಲ್ಲಿ ಚಿನ್ನ ಪತ್ತೆ..! ಕಾಫಿನಾಡು ಇನ್ಮುಂದೆ ಚಿನ್ನದ ನಾಡು
Chikkamagaluru Gold Exploration : ಚಿಕ್ಕಮಗಳೂರು : ಕಾಫಿನಾಡು ಎಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆ ಇನ್ಮುಂದೆ ಚಿನ್ನದ ನಾಡಾಗಲಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿನ್ನದ ಶೋಧಕ್ಕೆ ಈಗಾಗಲೇ ಅನುಮತಿ ನೀಡಲಾಗಿದೆ. ಬೆಂಗಳೂರಿನ ಖಾಸಗಿ ಕಂಪೆನಿ ಚಿಕ್ಕಮಗಳೂರು ಜಿಲ್ಲೆಯಲ್ಲಿನ 10 ಸಾವಿರ ಎಕರೆ ಪ್ರದೇಶದಲ್ಲಿ ಚಿನ್ನಕ್ಕಾಗಿ ಶೋಧ ಕಾರ್ಯ ನಡೆಸಲಿದೆ.
ಬೆಂಗಳೂರಿನ ಔರಮ್ ಜಿಯೋ ಎಕ್ಸ್‌ಪ್ಲೋರೇಶನ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ 10.082 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಶೋಧ ಕಾರ್ಯ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿಯನ್ನು ನೀಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ತರಿಕೆರೆಯ ಒಟ್ಟು 10 ಸಾವಿರ ಎಕರೆ ಪ್ರದೇಶದಲ್ಲಿ ಒಟ್ಟು 5600 ಎಕರೆ ಪ್ರದೇಶ ಅರಣ್ಯ ಭೂಮಿಯಾಗಿದ್ದು, 3,600 ಎಕರೆ ಪ್ರದೇಶ ಕೃಷಿ ಭೂಮಿಯಾಗಿದೆ. ಆದರೆ ದಟ್ಟಕಾಡಿನ ನಡುವೆ ಶಿಲಾಪದರಗಳ ಅಧ್ಯಯನ ಕಷ್ಟಕರವಾಗಿದೆ ಎಂದು ನಿಕ್ಷೇಪ ಪತ್ತೆ ಮಾಡುವ ಕಂಪೆನಿ ಮನವಿ ಪತ್ರದಲ್ಲಿ ತಿಳಿಸಿದೆ.
ಇದನ್ನೂ ಓದಿ : ನೀರು ಇಲ್ಲದ ಪ್ರದೇಶದಲ್ಲಿ ವಾಸಿಸುವ ಈ ಹಕ್ಕಿಯ ವಿಶೇಷತೆ ನಿಮಗೆ ಗೊತ್ತಾ ?
ಚಿಕ್ಕಮಗಳೂರಲ್ಲಿ ಚಿನ್ನದ ನಿಕ್ಷೇಪ
ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆಗಳಲ್ಲಿ ಚಿನ್ನದ ನಿಕ್ಷೇಪ (Chikkamagaluru Gold Exploration) ಇದೆ ಅನ್ನೋದು ಈಗಾಗಲೇ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹೊಸೂರು, ಸಿಂಗನಮನೆ, ತಂಬಾಡಿಹಳ್ಳಿ, ಗೋಣಿಬೀಡು, ಹೊನ್ನುಹಟ್ಟಿ ಮುಂತಾದ ಕಡೆಗಳಲ್ಲಿ ಚಿನ್ನದ ನಿಕ್ಷೇಪ ಇರೋದು ಈಗಾಗಲೇ ಪತ್ತೆಯಾಗಿದೆ. ತರಿಕೆರೆ ಸುತ್ತಮುತ್ತಲೂ ಪ್ರತೀ ಟನ್‌ಗೆ 19 ಗ್ರಾಂನಿಂದ 80 ಗ್ರಾಂ ವರೆಗೆ ಚಿನ್ನ ಸಿಗುತ್ತೆ ಅಂತಾ ಅಧ್ಯಯನಗಳು ಹೇಳಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆ ಮಾಡಲು ಸಾಕಷ್ಟು ಸವಾಲುಗಳಿವೆ. ಲಕ್ಕವಳ್ಳಿಯ ಪ್ರದೇಶ ಆನೆಕಾರಿಡಾರ್ ವ್ಯಾಪ್ತಿಗೆ ಒಳಪಡಲಿದೆ. ದಟ್ಟ ಕಾಡುಗಳ ನಡುವೆ ವನ್ಯ ಜೀವಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಚಿನ್ನಕ್ಕಾಗಿ ಶೋಧ ನಡೆಸಬೇಕಾದ ಅನಿವಾರ್ಯತೆಯಿದೆ.
ಇದನ್ನೂ ಓದಿ : ಭಾರತದಲ್ಲಿ 7 ಲಕ್ಷ ಟನ್ ಕಾಫಿ ಉತ್ಪಾದನೆಯ ಗುರಿ : ನಾಗಾಲ್ಯಾಂಡ್‌ಗೆ ಕಾಫಿಮಂಡಳಿ ನಿಯೋಗ
ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನಲ್ಲಿ ಈಗಾಗಲೇ ಖನಿಜ ಸಂಪನ್ಮೂಲಗಳ ಕುರಿತು ಸಂಶೋಧನೆ ನಡೆಸಲಾಗಿದೆ. ಈ ಭಾಗದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಅರಣ್ಯ ಪ್ರದೇಶ ಹಾಗೂ ಕೃಷಿ ಭೂಮಿಯನ್ನು ಒಳಗೊಂಡಿದೆ.



