ಮಂಗಳೂರು : ಮನಪಾದಲ್ಲಿ ಕನ್ನಡ ಬಾರದ ಅಧಿಕಾರಿ ನೇಮಕ : ಸಾರ್ವಜನಿಕರ ಆಕ್ರೋಶ

Mangaluru City Corporation : ಮಂಗಳೂರು : ಕನ್ನಡ ಓದಲು ಬರೆಯಲು ಬಾರದ ಅಧಿಕಾರಿಯನ್ನು ಕರ್ನಾಟಕದಲ್ಲಿ ಕೆಲಸಕ್ಕೆ ನಿಯೋಜನೆ ಮಾಡಿದ್ರೆ ಎಷ್ಟೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಅನ್ನೋದಕ್ಕೆ ಮಂಗಳೂರು ಮಹಾನಗರ ಪಾಲಿಕೆ ಬೆಸ್ಟ್‌ ಎಕ್ಸಾಂಪಲ್.‌ ಮನಾಪದಲ್ಲಿ ಕಾನೂನು ಅಧಿಕಾರಿಯಾಗಿ ಮಲಯಾಳಿ ಮಹಿಳೆಯ ನೇಮಕ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಸರಕಾರಿ ಕೆಲಸ ಮಾಡಬೇಕಾದ್ರೆ ಆ ಅಧಿಕಾರಿ ಅಥವಾ ಸಿಬ್ಬಂಧಿ ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿಯಲ್ಲಿ ಕನ್ನಡವನ್ನು ವಿಷಯವಾಗಿ ಓದಿರಬೇಕು. ಆದರೆ ಮಹಾನಗರ ಪಾಲಿಕೆಗೆ ನಿಯಮಗಳನ್ನು ಗಾಳಿಗೆ ತೂರಿ ಮಲಯಾಳಿ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ಕಾಂಗ್ರೆಸ್‌ ನಾಯಕರ ರಾಜಕೀಯದ ಒತ್ತಡಕ್ಕೆ ಮಣಿದು ಕಾನೂನು ಅಧಿಕಾರಿಯ ನೇಮಕಾತಿ ನಡೆದಿದೆ ಅನ್ನೋ ಆರೋಪವೂ ಕೇಳಿಬಂದಿದೆ. ಮಹಿಳಾ ಅಧಿಕಾರಿಗೆ ಮಾತನಾಡೋದಕ್ಕೆ ಮಾತ್ರವಲ್ಲ, ಆಕೆಗೆ ಕನ್ನಡ ಓದಲು ಹಾಗೂ ಬರೆಯೋದಕ್ಕೂ ಬರುವುದಿಲ್ಲ ಅನ್ನೋದು ಸಾರ್ವಜನಿಕರ ಆರೋಪ.

ಇನ್ನು ಮಂಗಳೂರು ನಗರದಲ್ಲಿ ಬಹುತೇಕ ಮಂದಿ ತುಳುವನ್ನು ಮುಖ್ಯ ಭಾಷೆಯಾಗಿ ಮಾತನಾಡುತ್ತಾರೆ. ಒಂದೊಮ್ಮೆ ತುಳು ಭಾಷೆಯ ಜ್ಞಾನ ಇದ್ದಿದ್ರೆ ಜನರ ಜೊತೆಗೆ ಸಂವಹನ ನಡೆಸೋದಕ್ಕಾದ್ರೂ ಸಾಧ್ಯವಾಗ್ತಿತ್ತು. ಆದರೆ ಮಹಿಳಾ ಅಧಿಕಾರಿಗೆ ತುಳು ಭಾಷೆಯೂ ಗೊತ್ತಿಲ್ಲ.

ಇದನ್ನೂ ಓದಿ : ಶಾಲಾ ಮಕ್ಕಳಿಗೆ ರಜೆ – ಮಂಗಳೂರು ಡಿಡಿಪಿಐ ಹೊಸ ಆದೇಶ

ಸಾರ್ವಜನಿಕರ ನಿತ್ಯವೂ ಮಹಾನಗರ ಪಾಲಿಕೆಯ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಸಮಸ್ಯೆಯನ್ನು ಎದುರಿಸಬೇಕಾಗಿದೆ. ಈ ಕುರಿತು ಮಂಗಳೂರು ನಗರದ ನಾಗರೀಕರು ಹಾಗೂ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಮಲಯಾಳಿ ಅಧಿಕಾರಿಯ ನೇಮಕ ಮಾಡುವ ಮೂಲಕ ರಾಜ್ಯ ಸರಕಾರ ಸ್ಥಳೀಯ ನಿರುದ್ಯೋಗಿಗಳಿಗೆ ಅನ್ಯಾಯ ಎಸಗಿದೆ. ಕೂಡಲೇ ಕಾನೂನು ಬಾಹಿರ ನೇಮಕಾತಿಯನ್ನು ರದ್ದುಗೊಳಿಸಿ, ಕೂಡಲೇ ಕನ್ನಡ ಅರಿತಿರುವ ಸ್ಥಳೀಯ ಅಭ್ಯರ್ಥಿಯನ್ನು ಕಾನೂನು ಅಧಿಕಾರಿಯಾಗಿ ನೇಮಕ ಮಾಡಬೇಕು ಅನ್ನೋ ಆಗ್ರಹ ಕೇಳಿಬಂದಿದೆ.

ಇದನ್ನೂ ಓದಿ : ಉಡುಪಿ : ಐಸಿಐಸಿ ಸೆಕ್ಯೂರಿಟೀಸ್‌ ಟ್ರೇಡಿಂಗ್‌ ಹೆಸರಲ್ಲಿ 50 ಲಕ್ಷ ರೂಪಾಯಿ ವಂಚನೆ

Mangaluru City Corporation-MCC- Controversy In Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories