ಬಿಗ್ ಬಾಸ್ ಬೀಗದ ಹಿಂದಿದ್ಯಾ ನಟ್ ಬೋಲ್ಟ್ ರಾಜಕಾರಣ: ಡಿಕೆಶಿ ಮೇಲೆ ಆಕ್ರೋಶ ವ್ಯಕ್ತವಾಗ್ತಿರೋದ್ಹೇಕೆ?!
Bigg Boss: ಪರಿಸರ ಮಾಲಿನ್ಯದ ಕಾರಣಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಗೆ ಬೀಗ ಬಿದ್ದಿದೆ. ಸದ್ಯಕ್ಕೆ ಸ್ಪರ್ಧಿಗಳನ್ನು ಖಾಸಗಿ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ. ಕನ್ನಡದ ರಿಯಾಲಿಟಿ ಬಿಗ್ ಬಾಸ್ ಸ್ಥಗಿತಗೊಳ್ಳುತ್ತಿದ್ದಂತೆ ಇದರ ಹಿಂದಿನ ಲೆಕ್ಕಾಚಾರವೇನು ? ಯಾಕೆ ಬಿಗ್ ಬಾಸ್ ಮೇಲೆ ಸ್ಥಳೀಯ ಆಡಳಿತದ ಕಣ್ಣು ಬಿತ್ತು ಎಂಬ ಚರ್ಚೆ ಆರಂಭವಾಗಿದೆ.
ಮಾತ್ರವಲ್ಲ ರೂಲಿಂಗ್ ಸರ್ಕಾರಕ್ಕೆ ಕಲಾವಿದರ ಮೇಲಿರುವ ಅದರಲ್ಲೂ ಮುಖ್ಯವಾಗಿ ಕಿಚ್ಚ ಸುದೀಪ್ ಮೇಲಿನ ದ್ವೇಷಕ್ಕೆ ಬಿಗ್ ಬಾಸ್ ಬಲಿಯಾಯ್ತು ಅನ್ನೋ ಮಾತು ಕೇಳಿಬಂದಿದೆ. ಅದರಲ್ಲೂ ನಟ್ ಬೋಲ್ಟ್ ಹೇಳಿಕೆ ಮತ್ತೆ ಮುನ್ನಲೆಗೆ ಬಂದಿದೆ.
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಿ ಒಂದು ವಾರ ಕಳೆದಿತ್ತು. ಎಲಿಮಿನೇಟ್ ಸೇರಿದಂತೆ ಮಾಮೂಲಿಯಂತೆ ದೊಡ್ಡ ಮನೆಯ ಆಟ ಕಳೆಗಟ್ಟಲಾರಂಭಿಸಿತ್ತು. ಈ ಮಧ್ಯೆ ಜಾಲಿವುಡ್ ನಲ್ಲಿರೋ ಬಿಗ್ ಬಾಸ್(Bigg Boss) ಮನೆಗೆ ರಾಮನಗರ ಸ್ಥಳೀಯ ಆಡಳಿತ ಬಿಗ್ ಶಾಕ್ ನೀಡಿದೆ. ಪರಿಸರ ಮಾಲಿನ್ಯ ಹಾಗೂ ಅನುಮತಿ ಪಡೆಯದ ಕಾರಣಕ್ಕೆ ಬಿಗ್ ಬಾಸ್ ಹೌಸ್ ನ್ನೇ ಸೀಜ್ ಮಾಡಲಾಗಿದೆ.
Also Read : ಮಾರ್ಕ್ ಮೊದಲ ಹಾಡು ರಿಲೀಸ್..’ಸೈಕ್ ಸೈತಾನ್’ಗೆ ಕಿಚ್ಚ ಸುದೀಪ್ ಭರ್ಜರಿ ಡ್ಯಾನ್ಸ್
2014 ರಿಂದಲೂ ಜಾಲಿವುಡ್ ಗೆ ನೋಟಿಸ್ ನೀಡುತ್ತಲೇ ಬಂದಿದ್ದರೂ ಜಾಲಿವುಡ್ ತಲೆಕೆಡಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಈಗ ಕಾನೂನು ಪ್ರಕಾರ ಜಾಲಿವುಡ್ ಸೀಜ್ ಆಗಿದ್ದರೂ ಇದರ ಹಿಂದೇ ಡಿಸಿಎಂ ಡಿಕೆ.ಶಿವಕುಮಾರ್ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ
ಈ ಹಿಂದೆ ಸಿನಿಮಾ ನಟ-ನಟಿಯರು ರಾಜ್ಯದ ಹಿತಾಸಕ್ತಿಗಳ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿಲ್ಲ. ನೆಲ-ಜಲದ ಹೋರಾಟಕ್ಕೂ ಕೈ ಜೋಡಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ವೇಳೆ ಮಾತನಾಡಿದ್ದ ಡಿಸಿಎಂ ಡಿಕೆ, ನಮಗೆ ಯಾರ ನಟ್ ಬೋಲ್ಟ್ ಹೇಗೆ ಟೈಟ್ ಮಾಡಬೇಕು ಗೊತ್ತಿದೆ ಎಂದಿದ್ದರು.
ಡಿಸಿಎಂ ಈ ಮಾತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಸುದೀಪ್. ನಮಗೆ ಯಾರು ನಟ್ ಬೋಲ್ಟ್ ಟೈಟ್ ಮಾಡುವ ಅಗತ್ಯವಿಲ್ಲ. ನಮ್ಮ ಜವಾಬ್ದಾರಿ ನಮಗೆ ಗೊತ್ತಿದೆ ಎಂದಿದ್ದರು. ಈಗ ಸುದೀಪ್ ನಡೆಸಿಕೊಡ್ತಿರೋ ಬಿಗ್ ಬಾಸ್ ಮನೆಗೆ ರಾಮನಗರ ತಹಶೀಲ್ದಾರ್ ಬೀಗ ಜಡಿದಿರೋದು ಇದೇ ದ್ವೇಷದ ಭಾಗ ಎಂದು ಆರೋಪಿಸಲಾಗ್ತಿದೆ.
ಈ ಬಗ್ಗೆ ಟ್ವಿಟ್ ಮಾಡಿರೋ ಜೆಡಿಎಸ್, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಷೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಎಂದು ಡಿ.ಕೆ.ಶಿವಕುಮಾರ್ ಟ್ಯಾಗ್ ಮಾಡಿ ಜೆಡಿಎಸ್ ಕೆಂಡಕಾರಿದೆ.
ಇದಲ್ಲದೇ ಜಾಲಿವುಡ್ ಮಾಲಿಕತ್ವದಲ್ಲಿ ಹೆಚ್ಡಿಕೆ ಪಾಲುದಾರಿಕೆ ಕೂಡ ಇದೆ. ಇದೇ ಕಾರಣಕ್ಕೆ ಡಿಕೆಶಿ, ಹೆಚ್ಡಿಕೆ ಮೇಲಿನ ದ್ವೇಷ ರಾಜಕಾರಣಕ್ಕಾಗಿ ಬಿಗ್ ಬಾಸ್ ಶೋವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
Also Read: ಪ್ರಗತಿ ಕಂಡ ಕಾಂತಾರ ಚಾಪ್ಟರ್ 1: ಅಪರೂಪದ ಪೋಟೋ ಹಂಚಿಕೊಂಡ ರಿಶಬ್ ಪತ್ನಿ
ಆದರೆ ಡಿಕೆಶಿ ಮೇಲೆ ಆರೋಪ ಬರ್ತಿದ್ದಂತೆ ರಾಜ್ಯ ಸರ್ಕಾರದ ಸಚಿವರುಗಳು ಎಚ್ಚೆತ್ತಿದ್ದು, ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಮಧ್ಯೆ ಜಾಲಿವುಡ್ ಆಡಳಿತ ಇಂದು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದ್ದು, ಅರ್ಜಿ ಇಂದೇ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಬಿಗ್ ಬಾಸ್ ಗೆ ಬೀಗ ಬಿದ್ದಿರೋದರ ಹಿಂದೆ ಕೇವಲ ನಿಯಮ ಉಲ್ಲಂಘನೆ ಮಾತ್ರವಲ್ಲ ರಾಜಕೀಯ ಹಿತಾಸಕ್ತಿಯೂ ಕೆಲಸ ಮಾಡಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.



