ಹಬ್ಬಗಳಲ್ಲಿ ಮನೆಯ ಮುಂಬಾಗಿಲಿಗೆ ಹಾಕಿದ ಮಾವಿನ ತೋರಣ ಯಾವಾಗ ತೆಗೆಯಬೇಕು?
Vastu Tips For mango Leaves Toran: ಹಿಂದೂ ಸಂಪ್ರದಾಯದಲ್ಲಿ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಮನೆಯ ಮುಂಬಾಗಿಲಿಗೆ ತೋರಣವನ್ನು ಹಾಕುವುದು ಶತಮಾನಗಳಿಂದಲೂ ನಡೆದು ಬಂದಿದೆ. ಹಾಗೆ ಹಾಕುವುದರಿಂದ ಮನೆಗೆ ಶುಭವಾಗುತ್ತದೆ ಎಂಬ ನಂಬಿಕೆಯಿದೆ.
ಸಾಮಾನ್ಯವಾಗಿ ಜನರು ಮನೆಯ ಮುಖ್ಯ ಬಾಗಿಲನ್ನು ಮಾವಿನ ಎಲೆ, ಹೂವುಗಳು ಅಥವಾ ಅಂಗಡಿಯಲ್ಲಿ ಸಿಗುವ ಸಿದ್ಧ ತೋರಣಗಳಿಂದ ಅಲಂಕರಿಸುತ್ತಾರೆ. ನಂಬಿಕೆಯ ಪ್ರಕಾರ, ಮಾವಿನ ಎಲೆಗಳಿಂದ ಮಾಡಿದ ತೋರಣಕ್ಕೆ ವಿಶೇಷ ಮಹತ್ವವಿದೆ.
ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಮದುವೆ, ಮನೆ ಗೃಹಪ್ರವೇಶ, ಮುಂತಾದ ಶುಭ ಸಂದರ್ಭಗಳಲ್ಲಿ ಬಾಳೆ ಕಂಬದ ಜೊತೆಗೆ ಮಾವಿನ ಎಲೆಯ ತೋರಣವನ್ನು ಹಾಕುತ್ತಾರೆ.
ಹೀಗೆ ವಿಶೇಷ ದಿನಗಳಲ್ಲಿ ಹಾಕಿದ ತೋರಣವನ್ನು ಎಷ್ಟು ದಿನಗಳಲ್ಲಿ ತೆಗೆಯಬೇಕು. ತೋರಣ ತೆಗೆಯದೇ ಹಾಗೆ ಬಿಟ್ಟರೆ ಏನಾಗುತ್ತದೆ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ.
ಮುಂಬಾಗಿಲಿಗೆ ಹಾಕಿದ ತೋರಣವನ್ನು ಯಾವಾಗ ತೆಗೆಯಬೇಕು?
ನಂಬಿಕೆಗಳ ಪ್ರಕಾರ, ಮಾವಿನ ಎಲೆಯ ತೋರಣವನ್ನು ಅದು ಒಣಗಿದ ತಕ್ಷಣ ತೆಗೆಯಬೇಕು. ಇದಕ್ಕೆ ಯಾವುದೇ ನಿಗದಿತ ದಿನಾಂಕವಿಲ್ಲ. ಆದರೆ ಹೆಚ್ಚಾಗಿ ಶುಕ್ರವಾರ ಮತ್ತು ಮಂಗಳವಾರದಂದು ತೆಗೆಯುವುದಿಲ್ಲ.
ಸಾಮಾನ್ಯವಾಗಿ, ಮಾವಿನ ಎಲೆಯ ತೋರಣವು 2 ವಾರಗಳವರೆಗೆ ತಾಜಾವಾಗಿರುತ್ತದೆ. ಅಂತಹ ಸಮಯದಲ್ಲಿ, ಒಂದು ಅಥವಾ ಎರಡು ವಾರದ ಒಳಗೆ ತೋರಣವನ್ನು ತೆಗೆಯುವುದು ಉತ್ತಮ. ಒಣಗಿದ ತೋರಣವು ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.
ಇದು ಮನೆಯ ಸಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಲು ಪ್ರಾರಂಭಿಸುತ್ತದೆ. ಕೆಲವರು ಮನೆ ಮತ್ತು ಅಂಗಡಿಯ ತೋರಣವನ್ನು ಕಾಲಕಾಲಕ್ಕೆ ಬದಲಾಯಿಸುವ ಮೂಲಕ, ಮನೆ ಹಾಗೂ ಅಂಗಡಿಯಲ್ಲಿ ಸಕಾರಾತ್ಮಕ ಶಕ್ತಿಯು ಯಾವಾಗಲೂ ನೆಲೆಸುವಂತೆ ಮಾಡುತ್ತಾರೆ. ಮಾವಿನ ಎಲೆಗಳು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ.
ಇದನ್ನೂ ಓದಿ: ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ
ಮನೆಯನ್ನು ಶುದ್ಧ ಮಾಡುವ ಮಾವಿನ ಎಲೆ
ಹಿಂದೂ ಧರ್ಮದಲ್ಲಿ, ಮಾವಿನ ಎಲೆಗಳ ಜೊತೆಗೆ ಗಂಗಾ ಜಲಕ್ಕೂ ವಿಶೇಷ ಮಹತ್ವವಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಪೂಜೆ ಮಾಡಿದ ನಂತರ ಮನೆಯ ಒಳಗೆ ಮತ್ತು ಹೊರಗೆ ಮಾವಿನ ಎಲೆಗಳಿಂದ ಗಂಗಾ ನೀರನ್ನು ಸಿಂಪಡಿಸುತ್ತಾರೆ.
ಇದರಿಂದ ಸಮೃದ್ದಿ ಮತ್ತು ದುಷ್ಟ ಕಣ್ಣುಗಳನ್ನು ದೂರವಿಡಬಹುದು. ಇದಲ್ಲದೆ, ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ.
ಇದನ್ನೂ ಓದಿ: ವಾಸ್ತು ಸಲಹೆ: ಧನ ಪ್ರಾಪ್ತಿಗೆ ಕುಬೇರನನ್ನು ಮೆಚ್ಚಿಸುವುದು ಹೇಗೆ?
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನು ನ್ಯೂಸ್ ನೆಕ್ಸ್ಟ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
(Vastu Tips For mango Leaves Toran when should we remove mango leaves toran from the door)



