ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭಮನ್ ಗಿಲ್
Test Cricket match: ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ವೆಸ್ಟ್ ಇಂಡಿಸ್ ವಿರುದ್ದ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿರುವ ಗಿಲ್, ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟೀಂ ಇಂಡಿಯಾದ ನಾಯಕನಾಗಿದ್ದ ವೇಳೆಯಲ್ಲಿ ವಿರಾಟ್ ಕೊಹ್ಲಿ (Virat Kohli) ಕ್ಯಾಲೆಂಡರ್ ವರ್ಷದಲ್ಲಿ 5 ಟೆಸ್ಟ್ ಶತಕ ಬಾರಿಸಿದ್ದರು. ಈ ಮೂಲಕ ಟೀಂ ಇಂಡಿಯಾದ ನಾಯಕರಾಗಿದ್ದ ಯಾರೂ ಮಾಡಿರದ ಸಾಧನೆಯನ್ನು ಕೊಹ್ಲಿ ಬರೆದಿದ್ದರು.
ಇದೀಗ ಟೀಂ ಇಂಡಿಯಾದ ನಾಯಕನಾಗಿರುವ ಶುಭಮನ್ ಗಿಲ್ ಒಂದೇ ವರ್ಷದಲ್ಲಿ 5 ಟೆಸ್ಟ್ ಶತಕ ಬಾರಿಸುವ ವಿರಾಟ್ ಕೊಹ್ಲಿ ದಾಖಲೆಯನ್ನೇ ಸರಿಗಟ್ಟಿದ್ದಾರೆ.
ಕ್ಯಾಲೆಂಡರ್ ವರ್ಷದಲ್ಲಿ ಐದು ಶತಕ ಬಾರಿಸಿದ ಭಾರತದ ಎರಡನೇ ನಾಯಕ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ನಾಲ್ಕು ಶತಕ ಗಳಿಸಿದ್ದ ಗಿಲ್, ಇದೀಗ ವೆಸ್ಟ್ ಇಂಡಿಸ್ ವಿರುದ್ದದ ಟೆಸ್ಟ್ ನಲ್ಲೂ ಒಂದು ಶತಕ ಬಾರಿಸಿದ್ದಾರೆ.
ಭಾರತದ ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕರ್, ರೋಹಿತ್ ಶರ್ಮಾ, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಅವರಿಗೂ ಕೂಡ ಇಂತಹ ದಾಖಲೆ ಮಾಡಲು ಸಾಧ್ಯವಾಗಿರಲಿಲ್ಲ.
Also Read: ಸ್ಮೃತಿ ಮಂದಾನಗಿಲ್ಲ ಸರಿಸಾಟಿ, ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ
ಶುಭಮನ್ ಗಿಲ್ ಇದುವರೆಗೆ ಒಟ್ಟು 39 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಟ್ಟು 71 ಇನ್ನಿಂಗ್ಸ್‌ನಲ್ಲಿ 2826ರನ್ ಬಾರಿಸಿದ್ದರು. ಇದರಲ್ಲಿ 10 ಶತಕ ಹಾಗೂ 6 ಅರ್ಧಶತಕ ಒಳಗೊಂಡಿದೆ.
ರೋಹಿತ್ ಶರ್ಮಾ ಅವರ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಶುಭಮನ್ ಗಿಲ್ ಟೀಂ ಇಂಡಿಯಾದ ಭರವಸೆಯ ಆಟಗಾರನಾಗಿ ರೂಪುಗೊಂಡಿದ್ದಾರೆ. ನಾಯಕತ್ವದ ಜೊತೆಗೆ ಭರ್ಜರಿ ಫಾರ್ಮ್ ನಲ್ಲಿದ್ದಾರೆ
ಕಳೆದ ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆಯಲ್ಲಿ 4 ಶತಕಗಳನ್ನು ಬಾರಿಸಿದ್ದರು. ಈ ಸರಣಿಯ ನಂತರದಲ್ಲಿ ಗಿಲ್ ಪೂರ್ಣ ಪ್ರಮಾಣದ ಟೆಸ್ಟ್ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
Also Read: ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಶುಭಮನ್ ಗಿಲ್ ನಾಯಕ, ರೋಹಿತ್ ಶರ್ಮಾಗೆ ಕೋಕ್
ಟೆಸ್ಟ್ ತಂಡಕ್ಕೆ ನಾಯಕತ್ವದ ಬೆನ್ನಲ್ಲೇ, ಭಾರತ ಏಕದಿನ ತಂಡಕ್ಕೆ ಕೂಡ ಶುಭಮನ್ ಗಿಲ್ ಅವರನ್ನು ನಾಯಕನನ್ನಾಗಿ ಬಿಸಿಸಿಐ ನೇಮಕ ಮಾಡಿದೆ. ಸದ್ಯ ಟಿ20 ತಂಡಕ್ಕೆ ಸೂರ್ಯ ಕುಮಾರ್ ಯಾದವ್ ನಾಯಕರಾಗಿದ್ದಾರೆ. ಆದರೆ ಶುಭಮನ್ ಗಿಲ್ ಮೂರು ಮಾದರಿಯ ಕ್ರಿಕೆಟ್ ನಲ್ಲಿಯೂ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.



