RSS Ban: ಸರಕಾರಿ ಶಾಲೆಗಳಿಂದ ಸಾರ್ವಜನಿಕರನ್ನು ದೂರ ಮಾಡುವ ಹುನ್ನಾರ : ಸುನಿಲ್ ಕುಮಾರ್
RSS Ban: ರಾಜ್ಯ ಸರಕಾರ ಸರಕಾರಿ ಶಾಲೆಗಳಿಂದ ಸಾರ್ವಜನಿಕರನ್ನು ದೂರ ಮಾಡುವ ಹುನ್ನಾರ ನಡೆಸಿದೆ ಎಂದು ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್(V. Sunil Kumar) ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿನ ಸರಕಾರಿ ಹಾಗೂ ಅನದಾನಿತ ಶಾಲೆಗಳು ಮತ್ತು ಇತರೆ ಸರ್ಕಾರಿ ಜಾಗಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸುವುದಕ್ಕೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನೇ ನಿರಾಕರಿಸುವುದಕ್ಕೆ ಸರ್ಕಾರ ಮುಂದಾಗಿದೆ
ಸರ್ಕಾರಿ ಶಾಲಾ ಆವರಣದಲ್ಲಿ ಚಟುವಟಿಕೆ ನಡೆಸುವುದಕ್ಕೆ ಖಾಸಗಿ ಸಂಸ್ಥೆಗಳಿಗೆ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಖಾಸಗಿ ವ್ಯಕ್ತಿಗಳ ಪ್ರವೇಶ ನಿರ್ಬಂಧ ಮಾಡಿರುವುದರ ಹಿಂದಿನ ಉದ್ದೇಶವೇನು ? ಎಂದು ಅವರು ಪ್ರಶ್ನಿಸಿದ್ದಾರೆ.
Also Read: ಜಾತಿ ಗಣತಿಗೆ ತೆರಳಿದ್ದ ಶಿಕ್ಷಕಿ ಶವವಾಗಿ ಪತ್ತೆ : ಗಣತಿ ಒತ್ತಡದಿಂದ ಆತ್ಮಹತ್ಯೆ ಶಂಕೆ
ಗ್ರಾಮೀಣ ಭಾಗದಲ್ಲಿನ ಸರಕಾರಿ ಶಾಲೆಗಳು ಕೇವಲ ಕಲಿಕಾ ಕೇಂದ್ರವಲ್ಲ. ಅಲ್ಲಿ ವಾರಾಂತ್ಯದಲ್ಲಿ ಸಂಘ- ಸಂಸ್ಥೆಗಳ ಸಭೆ ನಡೆಯುತ್ತದೆ. ಸಾಂಸ್ಕ್ರತಿಕ ಚಟುವಟಿಕೆಗಳು ನಡೆಯುತ್ತದೆ. ಕ್ರೀಡಾಕೂಟಗಳು ನಡೆಯುತ್ತದೆ. ಹಾಗಾದರೆ ಸರಕಾರ ಇದೆಲ್ಲವನ್ನೂ ಬ್ಯಾನ್ ಮಾಡುತ್ತದೆಯೇ ? ಎಂದಿದ್ದಾರೆ.
ಸರಕಾರಿ ಶಾಲೆಯ ಆವರಣವನ್ನು ನಿರ್ಬಂಧಿಸುವುದು ಅಂದ್ರೆ ಸಾರ್ವಜನಿಕರಿಂದ ಅದನ್ನು ದೂರ ಇಡುವುದು. ಕಾಲಕ್ರಮೇಣ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಸರ್ಕಾರದ ಹುನ್ನಾರ ಎಂದು ಅನಿಸುತ್ತಿದೆ. ಇದು ಸರಕಾರದ ಬಾಲಿಶ ನಿರ್ಧಾರ ಅಲ್ಲದೇ ಮತ್ತೇನು ಅಲ್ಲ ಎಂದು ಅವರು ಆರೋಪಿಸಿದ್ದಾರೆ.
Also read: Caste survey: ಇನ್ಮುಂದೆ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಜಾತಿ ಸಮೀಕ್ಷೆ : ಜಿಬಿಎ ಹೊಸ ಆದೇಶ



