Bigg Boss : ಕಿಚ್ಚನ ವಾರದ ಪಂಚಾಯ್ತಿಗೆ ಕಾದು ಕುಳಿತ ಪ್ರೇಕ್ಷಕರು : ಕಾದಿದೆ ಜಾನ್ವಿ – ಅಶ್ವಿನಿ ಗೌಡಗೆ ಮಾರಿ ಹಬ್ಬ
Bigg Boss : ಬಿಗ್ಬಾಸ್ ಸೀಸನ್ 12 ಶುರುವಾಗಿ ಕೆಲವೇ ವಾರಗಳಲ್ಲಿ ಸಾಕಷ್ಟು ಕಾರಣಗಳಿಂದ ಸುದ್ದಿ ಮಾಡುತ್ತಲೇ ಇದೆ. ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳಾದ ಜಾನ್ವಿ ಹಾಗೂ ಅಶ್ವಿನಿ ಗೌಡ ಅಬ್ಬರ ಮಿತಿಮೀರಿದ್ದು ಕೋಪಗೊಂಡಿರುವ ಪ್ರೇಕ್ಷಕರು ಕಿಚ್ಚ ಇವರಿಬ್ಬರ ವಿರುದ್ಧ ಕ್ಲಾಸ್ ತೆಗೆದುಕೊಳ್ಳಲೇಬೇಕು ಅಂತಾ ಆಗ್ರಹಿಸುತ್ತಿದ್ದಾರೆ.
Bigg Boss : ವೈಯಕ್ತಿಕ ದಾಳಿ ನಡೆದಾಗೆಲ್ಲ ರೌದ್ರಾವತಾರ ತೋರುತ್ತಾರೆ ಕಿಚ್ಚ ಸುದೀಪ :
ಹೌದು..! ಈ ಕಾರ್ಯಕ್ರಮದ ಸೂತ್ರಧಾರಿಯಾಗಿರುವ ಕಿಚ್ಚ ಸುದೀಪ ಬಿಗ್ಬಾಸ್ ಮನೆಯಲ್ಲಿ ಎಂದಿಗೂ ಸ್ಪರ್ಧಾಳುಗಳ ಮೇಲೆ ನಡೆಯುವ ವೈಯಕ್ತಿಕ ದಾಳಿಯನ್ನು ಸಹಿಸಿಕೊಂಡ ಇತಿಹಾಸಗಳೇ ಇಲ್ಲ.
ಬಿಗ್ಬಾಸ್ ಮನೆಯಲ್ಲಿರುವ ಪ್ರತಿಯೊಬ್ಬರೂ ತನ್ನ ಮನೆಯ ಸದಸ್ಯರಂತೆ ಎಂದೇ ಹೇಳುವ ನಟ ಸುದೀಪ ಈ ಬಾರಿ ಕೂಡ ವೀಕೆಂಡ್ ಪಂಚಾಯ್ತಿಯಲ್ಲಿ ಜಾನ್ವಿ ಹಾಗೂ ಅಶ್ವಿನಿ ಗೌಡರಿಗೆ ಖಡಕ್ ವಾರ್ನಿಂಗ್ ಕೊಡುವ ಎಲ್ಲಾ ಸಾಧ್ಯತೆಯಿದೆ.
Also Read: Suhana Syed wedding: ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ, ಸರಿಗಮಪ ಖ್ಯಾತಿಯ ಸುಹಾನಾ ಸೈಯದ್
ಬಿಗ್ಬಾಸ್ ಸ್ಪರ್ಧಿ ಆಗಿರುವ ಕರಾವಳಿ ಮೂಲದ ರಕ್ಷಿತಾ ಶೆಟ್ಟಿ ಎಂಬಾಕೆಯನ್ನು ಪದೇ ಪದೇ ಟಾರ್ಗೆಟ್ ಮಾಡುತ್ತಿರುವ ಅಶ್ವಿನಿ ಗೌಡ ಹಾಗೂ ಜಾನ್ವಿ ಆಕೆಯ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ.
ತಾವೇ ಗೆಜ್ಜೆ ಸದ್ದು ಮಾಡಿ ರಕ್ಷಿತಾಳಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂಬಂತೆ ಬಿಂಬಿಸುತ್ತಿರುವ ಇವರಿಬ್ಬರೂ ಆಕೆಯ ವಿರುದ್ಧ ಇಲ್ಲ ಸಲ್ಲದ ಮಾತುಗಳನ್ನಾಡಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಶ್ವಿನಿ ಗೌಡ, ಸೂಟ್ ಕೇಸ್ನಲ್ಲಿದ್ದ ರಕ್ಷಿತಾಳ ಬಟ್ಟೆಗಳನ್ನು ಎಳೆದಾಡಿ ನಿನ್ನ ಬಟ್ಟೆ ನೋಡಿದರೆ ಗೊತ್ತಾಗುತ್ತೆ ನೀನು ಎಲ್ಲಿಂದ ಬಂದವಳು ಎಂದು ತೀರಾ ತುಚ್ಛವಾಗಿ ನಿಂದಿಸಿದ್ದಾರೆ.
ರಕ್ಷಿತಾ ತುಳುನಾಡಿನ ಮೂಲದ ಹುಡುಗಿಯಾಗಿರುವುದರಿಂದ ಅಶ್ವಿನಿ ಗೌಡಳ ಈ ಮಾತು ಕರಾವಳಿಗರ ಕಣ್ಣು ಕೆಂಪಗಾಗಿಸಿದೆ.
ಬಿಗ್ಬಾಸ್ನಲ್ಲಿ ಸ್ಪರ್ಧೆ ಆರಂಭಿಸಿದಾಗಿನಿಂದ ರಾಜ್ಯಾದ್ಯಂತ ಪುಟ್ಟಿ ರಕ್ಷಿತಾ ಎಂದೇ ಫೇಮಸ್ ಆಗಿರುವ ರಕ್ಷಿತಾ ಬೆಂಬಲಕ್ಕೆ ಸಂಪೂರ್ಣ ರಾಜ್ಯದ ಪ್ರೇಕ್ಷಕರು ನಿಂತಿದ್ದಾರೆ. ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ಳಲೇಬೇಕು ಅಂತಾ ಆಗ್ರಹಿಸುತ್ತಿದ್ದಾರೆ.
Also Read: ದೈವಕ್ಕೆ ಅಪಚಾರ ಎಂದಿಗೂ ಎಸಗಿಲ್ಲ: ದೈವ ನರ್ತಕರ ಆರೋಪಗಳಿಗೆ ರಿಷಬ್ ಶೆಟ್ಟಿ ಉತ್ತರ
ಈ ಮಾತಿಗೆ ಪೂರಕ ಎಂಬಂತೆ ಇಂದು ಬೆಳಗ್ಗೆಯೇ ಪ್ರೊಮೋ ರಿಲೀಸ್ ಮಾಡಿರುವ ಬಿಗ್ಬಾಸ್ ತಂಡ ಈ ವೀಕೆಂಡ್ ಭೂತ ಬಿಡಿಸೋಕೆ ಅಭಿನಯ ಚಕ್ರವರ್ತಿ ಬರುತ್ತಿದ್ದಾರೆ ಎಂದು ಹೇಳುವ ಮೂಲಕ ಈ ವೀಕೆಂಡ್ ಸಂಚಿಕೆಯಲ್ಲಿ ಮಾರಿಹಬ್ಬ ಪಕ್ಕಾ ಕಾದಿದೆ ಎಂಬ ಸುಳಿವು ನೀಡಿದ್ದಾರೆ. ಪ್ರೇಕ್ಷಕರು ಕೂಡ ಯಾವಾಗ ರಾತ್ರಿ 8 ಗಂಟೆಯಾಗುತ್ತೋ ಅಂತಾ ಕಾತುರದಿಂದ ಕಾಯ್ತಿದ್ದಾರೆ.



