ದೈವಕ್ಕೆ ಅಪಚಾರ ಎಂದಿಗೂ ಎಸಗಿಲ್ಲ: ದೈವ ನರ್ತಕರ ಆರೋಪಗಳಿಗೆ ರಿಷಬ್​ ಶೆಟ್ಟಿ ಉತ್ತರ

Rishab Shetty: ಕನ್ನಡ ಚಿತ್ರರಂಗದ ಸೂಪರ್ ಹಿಟ್​ ಸಿನಿಮಾ ಎನಿಸಿರುವ ಕಾಂತಾರ ಚಾಪ್ಟರ್​ 1(Kantara Chapter 1) ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುವ ಮೂಲಕ ಬಾಕ್ಸಾಫೀಸಿನಲ್ಲಿ ಭಾರಿ ಸದ್ದು ಮಾಡ್ತಿದೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳ ದಾಖಲೆಗಳನ್ನು ಪುಡಿಮಾಡುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಠಿಸುತ್ತಿದೆ. ಕಾಂತಾರ 1 ಸಿನಿಮಾದಲ್ಲಿ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಮನೋಜ್ಜ್ಞ ಅಭಿನಯಕ್ಕೆ ಪ್ರೇಕ್ಷಕರು ಮಾರು ಹೋಗಿದ್ದಾರೆ.

ದಾಖಲೆಯ ಹಣ ಸಂಗ್ರಹಣೆ ಮಾಡುತ್ತಿರುವ ಕಾಂತಾರ ಚಾಪ್ಟರ್​ 1

ಸಿನಿಮಾದ ಬಗ್ಗೆ ಪರ ವಿರೋಧಗಳ ಚರ್ಚೆ ಜೋರಾಗುತ್ತಲೇ ಇದೆ. ಸಿನಿಮಾಗಳಲ್ಲಿ ದೈವನರ್ತನ ಪ್ರದರ್ಶಿಸುತ್ತಿರುವ ರಿಷಬ್ ಶೆಟ್ಟಿಯಿಂದಾಗಿ ದೈವಗಳಿಗೆ ಅಪಮಾನವಾಗಿದೆ ಅಂತಾ ತುಳುನಾಡಿನ ದೈವನರ್ತಕರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ದೈವನರ್ತಕರ ಈ ಆರೋಪಗಳಿಗೆ ರಿಷಬ್ ಶೆಟ್ಟಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಿನಿಮಾದಲ್ಲಿ ಎಲ್ಲಿಯೂ ನಾವು ದೈವಗಳಿಗೆ ಅಪಚಾರ ಎಸಗಿಲ್ಲ. ಹಿರಿಯರ ಮಾರ್ಗದರ್ಶನದ ಅಡಿಯಲ್ಲಿ ದೈವದ ಆರಾಧನೆಗೆ ಯಾವುದೇ ತೊಂದರೆಯಾಗದಂತೆ ಸಿನಿಮಾ ಶೂಟಿಂಗ್​ ಪೂರ್ಣಗೊಳಿಸಿದ್ದೇವೆ.

Also read: Bigg Boss 12: ಸ್ಪಂದನಾ ಜೊತೆಗಿನ ಜಗಳವೇ ಧ್ರುವಂತ್​ಗೆ ಮುಳುವಾಯ್ತು : ಫಿನಾಲೆ ರೇಸ್​ನಿಂದ ಧ್ರುವಂತ್​ ಔಟ್

ದೈವ ನನಗೆ ಏನು ಹೇಳಿದೆ ? ಶೂಟಿಂಗ್​ ಸಂದರ್ಭದಲ್ಲಿ ಯಾವೆಲ್ಲ ಸಂಪ್ರದಾಯಗಳನ್ನು ನಾವು ಪಾಲಿಸಿದ್ದೇವೆ ಎಂಬುದು ನನಗೆ ತಿಳಿದಿದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯಗಳು ಇರುವುದು ಸಹಜ. ಅದನ್ನು ಪ್ರಶ್ನಿಸಲು ನಾನು ಯಾರೂ ಅಲ್ಲ. ಆದರೆ ನನ್ನ ಹಾಗೂ ದೈವದ ನಡುವಿನ ಸಂಬಂಧವೇನು ? ದೈವಗಳಿಗೆ ನಾನು ಯಾವ ರೀತಿ ನಡೆದುಕೊಳ್ಳುತ್ತೇನೆ ಎಂಬುದು ನನಗೆ ಮಾತ್ರ ತಿಳಿದಿದೆ.

ಅಲ್ಲದೇ ದೈವದ ಕತೆ ಆಧರಿಸಿ ಸಿನಿಮಾ ಮಾಡಿದ ಮೊದಲಿಗ ನಾನಲ್ಲ. ಯಾವುದೇ ಅಪಚಾರ ಎಸಗದೇ ದೈವದ ಕತೆಯನ್ನು ತೆರೆಯ ಮೇಲೆ ಪ್ರದರ್ಶಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಕಾಂತಾರ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿಯೂ ರಿಷಬ್​ ಶೆಟ್ಟಿ ವಿರುದ್ಧ ಇದೇ ರೀತಿಯ ಆರೋಪಗಳು ಕೇಳಿ ಬಂದಿದ್ದವು.

ಸಿನಿಮಾದಲ್ಲಿ ದೈವಗಳನ್ನು ನೋಡಿ ಅವುಗಳನ್ನು ಅನುಕರಣೆ ಮಾಡುವ ಭರದಲ್ಲಿ ದೈವಗಳಿಗೆ ಅಪಚಾರ ಎಸಗಲಾಗುತ್ತಿದೆ ಎಂಬುದು ದೈವ ನರ್ತಕರ ಅಭಿಪ್ರಾಯವಾಗಿದೆ.ಆದರೆ ರಿಷಬ್ ಶೆಟ್ಟಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

Also Read: Raju Talikote : ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನ

ವಿರೋಧಗಳ ನಡುವೆಯೇ ಕಾಂತಾರ ಚಾಪ್ಟರ್ 1 ರಿಲೀಸ್​ ಮಾಡಿರುವ ರಿಷಭ್​ ಶೆಟ್ಟಿ ಇದೇ ಸಿನಿಮಾದಲ್ಲಿ ಕಾಂತಾರ ಚಾಪ್ಟರ್ 2 ಬಗ್ಗೆಯೂ ಸುಳಿವು ಕೊಡುತ್ತಾರೆ. ನಾಗ ಬೆರ್ಮೆಯನ್ನು ಆಧರಿಸಿ ಮತ್ತೊಂದು ಸಿನಿಮಾವನ್ನು ರಿಷಬ್​​ ಶೆಟ್ಟಿ ಹೆಣೆಯುವ ಸಾಧ್ಯತೆ ಕಾಣುತ್ತಿದೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories